* ಬೇಲೂರು ಪುರಸಭೆ ಅಧ್ಯಕ್ಷ ಅಕ್ರಂಷರೀಫ್ ಅಭಿಮತ* ಪೌರಕಾರ್ಮಿಕರ ದಿನಾಚರಣೆ
ವಿಕ ಸುದ್ದಿಲೋಕ ಬೇಲೂರು
ಪೌರಕಾರ್ಮಿಕರ ಪರ ಧ್ವನಿ ಎತ್ತುವ ಕೆಲಸ ಆಗಬೇಕಿದೆ ಎಂದು ಪುರಸಭೆ ಅಧ್ಯಕ್ಷ ಅಕ್ರಂಷರೀಫ್ ಹೇಳಿದರು.
ಪಟ್ಟಣದ ಪುರಸಭೆಯಲ್ಲಿನಡೆದ ಪೌರಕಾರ್ಮಿಕ ದಿನಾಚರಣೆಯಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘‘ದಿನಾಚರಣೆಯನ್ನು ಪುರಸಭೆಯ ಸಭಾಂಗಣದಲ್ಲಿಮಾಡಲು ಹೊರಟಿದ್ದರು. ಆದರೆ, ನಾನು ಹೊರಗಡೆ ಶಾಮಿಯಾನ ಹಾಕಿ ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ಬದಲಿ ವ್ಯವಸ್ಥೆ ಮಾಡಿದ್ದೇನೆ. ಸದಸ್ಯರ ಸಲಹೆಯಂತೆ ಹೊಲಿಗೆ ಯಂತ್ರ ನೀಡಲಾಗುವುದು. ಪೌರಕಾರ್ಮಿಕರು, ನೀರು ಸರಬರಾಜು ನೌಕರರಿಗೆ ನಿವೇಶನ ಕೊಡುವ ವಿಚಾರದಲ್ಲಿಅಧಿವೇಶನದಲ್ಲಿಪಾಲ್ಗೊಂಡಿರುವ ಶಾಸಕ ಎಚ್ .ಕೆ.ಸುರೇಶ್ ಅವರು ಉತ್ಸುಕತೆ ಹೊಂದಿದ್ದಾರೆ. ಶಾಸಕರು ಅನುದಾನ ತಂದು ಪಟ್ಟಣದ ರಸ್ತೆಗಳ ಅಭಿವೃದ್ಧಿ ಪಡಿಸುತ್ತಿದ್ದಾರೆ. ಕಂಟ್ರಾಕ್ಟರ್ ನಿರ್ಲಕ್ಷ್ಯದಿಂದಾಗಿ ಎರಡು ರಸ್ತೆ ಕೆಲಸ ವಿಳಂಬವಾಗುತ್ತಿದೆ,’’ ಎಂದು ತಿಳಿಸಿದರು.
‘‘ಪೌರಕಾರ್ಮಿಕರು ದಿನಾಚರಣೆಯಲ್ಲಿಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ನಿನ್ನೆ ರಾತ್ರಿಯಲ್ಲಿಯೇ ಪಟ್ಟಣ ಸ್ವಚ್ಛತೆ ಮಾಡಿರುವುದು ಅವರ ಕಾರ್ಯಕ್ಷಮತೆ ತೋರಿಸುತ್ತದೆ. ಸರಕಾರ ಪೌರಕಾರ್ಮಿಕರಿಗೆ ಬೋನಸ್ ರೂಪದಲ್ಲಿ7 ಸಾವಿರ ರೂ. ಖಾತೆಗೆ ಜಮೆ ಮಾಡಿರುವುದು ನ್ಯಾಯಸಮ್ಮತವಾಗಿದೆ,’’ ಎಂದರು.
ಪುರಸಭೆ ಸದಸ್ಯೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ‘‘ಪೌರಕಾರ್ಮಿಕರು ಆರ್ಥಿಕವಾಗಿ ಉನ್ನತಮಟ್ಟಕ್ಕೇನು ಹೋಗಿಲ್ಲ. ಶೌಚಗುಂಡಿಗೆ ಇಳಿಸುವುದು ತಪ್ಪಿಲ್ಲ, ಪೌರಕಾರ್ಮಿಕ ತಂದೆ ತಾಯಿ ಕೆಲಸಕ್ಕೆ ಬಂದರೆ ಮನೆಯಲ್ಲಿಹೆಣ್ಣುಮಕ್ಕಳಿಗೆ ಸುರಕ್ಷತೆಯಿಲ್ಲವಾಗಿದೆ. ಪಟ್ಟಣದ ಪ್ರತಿಷ್ಠಿತ ಶಾಲೆಯಲ್ಲಿಪೌರಕಾರ್ಮಿಕ ಮಕ್ಕಳಿಗೆ ಉಚಿತ ಅವಕಾಶ ಹಾಗೂ ಹಾಸ್ಟೆಲ್ ನಲ್ಲಿಸೀಟ್ ಕೊಡುವ ವ್ಯವಸ್ಥೆಯಾಗಬೇಕಿದೆ. ಈ ಬಗ್ಗೆ ಸಮಾಜಕಲ್ಯಾಣ ಸಚಿವರಿಗೆ ಹಾಗೂ ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆಯಲಾಗುವುದು,’’ ಎಂದು ಹೇಳಿದರು.
ಸದಸ್ಯ ಬಿ.ಗಿರೀಶ್ ಮಾತನಾಡಿ, ‘‘ಆಶ್ರಯ ನಿವೇಶನದಲ್ಲಿಹೊರಗುತ್ತಿಗೆ ನೌಕರರಿಗೂ ನೀಡಬೇಕು. ಹೊಲಿಗೆ ಯಂತ್ರ ನೀಡಬೇಕು. ಪೌರಕಾರ್ಮಿಕರಿಗೆ ಸೌಲಭ್ಯ ಕೊಡುವಲ್ಲಿನಿರ್ಲಕ್ಷ್ಯ ತಾಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ,’’ ಎಂದರು.