ವಿಕ ಸುದ್ದಿಲೋಕ ಶಿಡ್ಲಘಟ್ಟವಿದ್ಯಾರ್ಥಿ ಹಾಗೂ ಯುವಜನರ ಮೇಲೆ ಈ ಸಮಾಜ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಆ ನಿರೀಕ್ಷೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿನಿಮ್ಮ ಬದುಕು, ನಿಮ್ಮ ನಡೆ ನುಡಿ, ಸಮಾಜದ ಕಳಕಳಿಯನ್ನು ಬೆಳೆಸಿಕೊಳ್ಳಬೇಕು ಎಂದು ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್ ತಿಳಿಸಿದರು.
ನಗರದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿಸಮಾಜಮುಖಿ ಚಿಂತನೆ, ನಿಸ್ವಾರ್ಥ ಸೇವಾ ಮನೋಬಾವ, ರಾಷ್ಟ್ರೀಯ ಏಕತೆ ಮತ್ತು ಶಿಸ್ತು ಬೆಳೆಸುವುದೇ ರಾಷ್ಟ್ರೀಯ ಸೇವಾ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಇದನ್ನು ತಮ್ಮ ಜೀವನದಲ್ಲಿರೂಡಿಸಿಕೊಳ್ಳಬೇಕು ಎಂದರು.
ಇಂದಿನ ನಾಗರಿಕ ಸಮಾಜದಲ್ಲಿಯುವಜನತೆ ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವುದು ದಿನೇ ದಿನೆ ಹೆಚ್ಚುತ್ತಿದೆ. ಇದರಿಂದ ನೀವು ಹಾಗೂ ನಿಮ್ಮ ಕುಟುಂಬವಷ್ಟೇ ಹಾಳಾಗುವುದಿಲ್ಲ. ಬದಲಿಗೆ ಸಮಾಜದ ಮೇಲೆ ಇದು ಬಹಳಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಹೆಣ್ಣು ಮಕ್ಕಳನ್ನು ಗೌರವಿಸುವುದು ಮೊದಲ ಆದ್ಯತೆಯಾಗಿರಬೇಕು. ವಿದ್ಯಾರ್ಥಿಗಳು ಶಾಲಾ ದಿನಗಳಿಂದಲೇ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಸಮಾಜ ಸೇವೆ ಮಾಡುವುದನ್ನು ರೂಢಿಸಿಕೊಳ್ಳುವ ಮೂಲಕ ಸಮಾಜಕ್ಕೆ ಗೌರವ ತರುವ ರೀತಿ ಬದುಕಬೇಕು ಎಂದರು.
ನಗರದ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ವಿಜಯಕುಮಾರ್ ಮಾತನಾಡಿ, ಗಾಂಜಾ, ಚರಸ್ಸು ಮುಂತಾದ ಮಾದಕ ವಸ್ತುಗಳನ್ನು ತೆಗೆದುಕೊಂಡರೆ ಹಾಗೂ ಮದ್ಯ ವ್ಯಸನಿಗಳಾದರೆ ನಮ್ಮ ಜೀವನವು ಹೇಗೆ ಹಾಳಾಗುತ್ತದೆ ಹಾಗೂ ಅವುಗಳಿಂದ ದೂರವಿದ್ದು ನಮ್ಮ ಆರೋಗ್ಯವನ್ನು ಹೇಗೆ ರಕ್ಷಿಸಿಕೊಳ್ಳಬೇಕು ಮತ್ತು ಉತ್ತಮ ಆರೋಗ್ಯ ಹೊಂದುತ್ತಾ ಉತ್ತಮ ಸಮಾಜವನ್ನು ಹೇಗೆ ನಿರ್ಮಾಣ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿಪ್ರಿನ್ಸಿಪಾಲ್ ಸಿ.ವೆಂಕಟಶಿವಾರೆಡ್ಡಿ, ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಎಚ್ .ಸಿ.ಮುನಿರಾಜು, ಉಪನ್ಯಾಸರಾದ ಡಿ.ಲಕ್ಷ್ಮಯ್ಯ, ನರಸಿಂಹರೆಡ್ಡಿ, ಶ್ರೀಕೃಷ್ಣ ಪರಮಾತ್ಮ, ಬಾಬಾ ಜಾನ್ , ನಹಿದಬೇಗಂ, ಇಬ್ರಾಹಿಂಸಾಬ್ , ರಮೇಶ್ , ಶ್ರೀಧರ್ , ನಾಗಾರ್ಜುನ್ , ಚಂದ್ರು ಹಾಗೂ ಸಾವಿತ್ರಮ್ಮ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.
24ಎಸ್ ಡಿಎಲ್ 4
ಶಿಡ್ಲಘಟ್ಟ ನಗರದ ಪದವಿ ಪೂರ್ವ ಕಾಲೇಜಿನಲ್ಲಿನಡೆದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಕಾರ್ಯಕ್ರಮದಲ್ಲಿಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್ ಮಾತನಾಡಿದರು.