ಜಿಲ್ಲೆಯಲ್ಲಿ1,397 ಅರ್ಜಿ ಸ್ವೀಕಾರ-581 ಅರ್ಜಿಗಳ ಸ್ಥಳದಲ್ಲೇ ವಿಲೇವಾರಿವಿಕ ಸುದ್ದಿಲೋಕ ಕೋಲಾರ
ಸಾರ್ವಜನಿಕರ ಕುಂದುಕೊರತೆಗಳನ್ನು ಶೀಘ್ರವಾಗಿ ಆಲಿಸಿ, ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ1,397 ಅರ್ಜಿಗಳು ಸಲ್ಲಿಕೆಯಾಗಿದೆ. ಈ ಪೈಕಿ 581 ಅರ್ಜಿಗಳನ್ನು ಅಧಿಕಾರಿಗಳು ಸ್ಥಳದಲ್ಲಿಯೇ ತ್ವರಿತವಾಗಿ ಇತ್ಯರ್ಥಪಡಿಸುವ ಮೂಲಕ ಜನಸಾಮಾನ್ಯರಿಗೆ ನೆಮ್ಮದಿ ಒದಗಿಸಿದ್ದಾರೆ.
ಆಂದೋಲನದ ಅಂಗವಾಗಿ ಜಿಲ್ಲೆಯ ಆರು ತಾಲೂಕುಗಳಲ್ಲಿಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕೋಲಾರ ತಾಲೂಕಿನಲ್ಲಿಅತಿ ಹೆಚ್ಚು ಅಂದರೆ 570 ಅರ್ಜಿಗಳು ಸಲ್ಲಿಕೆಯಾಗಿವೆ. ಉಳಿದಂತೆ ಶ್ರೀನಿವಾಸಪುರದಲ್ಲಿ349, ಬಂಗಾರಪೇಟೆಯಲ್ಲಿ180, ಮುಳಬಾಗಲಿನಲ್ಲಿ159, ಕೆಜಿಎಫ್ ನಲ್ಲಿ75 ಹಾಗೂ ಮಾಲೂರಿನಲ್ಲಿ64 ಅರ್ಜಿಗಳು ಸ್ವೀಕೃತವಾಗಿವೆ.
ಅರ್ಜಿಗಳ ತ್ವರಿತ ವಿಲೇವಾರಿಯಲ್ಲಿಅಧಿಕಾರಿಗಳು ಚುರುಕುತನ ತೋರಿದ್ದು, ಶ್ರೀನಿವಾಸಪುರ ತಾಲೂಕಿನಲ್ಲಿಅತಿ ಹೆಚ್ಚು ಅಂದರೆ 260 ಅರ್ಜಿಗಳನ್ನು ಹಾಗೂ ಕೋಲಾರದಲ್ಲಿ217 ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಗಿದೆ. ಅಂತೆಯೇ ಬಂಗಾರಪೇಟೆಯಲ್ಲಿ44, ಕೆಜಿಎಫ್ ನಲ್ಲಿ39, ಮಾಲೂರಿನಲ್ಲಿ19 ಮತ್ತು ಮುಳಬಾಗಲಿನಲ್ಲಿ2 ಅರ್ಜಿಗಳಿಗೆ ತಕ್ಷಣದ ಪರಿಹಾರ ಒದಗಿಸಲಾಗಿದೆ.
ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳ ಪೈಕಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡುಬಂದಿದೆ. ಕಂದಾಯ ಇಲಾಖೆಗೆ ಜಿಲ್ಲಾದ್ಯಂತ 1,018 ಅರ್ಜಿಗಳು ಸಲ್ಲಿಕೆಯಾಗಿವೆ. ಇದಲ್ಲದೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 151, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 100, ವಸತಿ ಇಲಾಖೆಗೆ 41, ಇಂಧನ ಇಲಾಖೆಗೆ 21 ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 13 ಅರ್ಜಿಗಳು ಬಂದಿವೆ. ನಗರಾಭಿವೃದ್ಧಿ (11), ಸಣ್ಣ ನೀರಾವರಿ (10), ಸಾರಿಗೆ (8), ಲೋಕೋಪಯೋಗಿ (6), ಆರೋಗ್ಯ (4), ಕೃಷಿ (4) ಸೇರಿದಂತೆ ವಿವಿಧ ಇಲಾಖೆಗಳಿಗೂ ಸಾರ್ವಜನಿಕರು ಅರ್ಜಿ ಸಲ್ಲಿಸಿದ್ದಾರೆ.
ಸಲ್ಲಿಕೆಯಾದ ಒಟ್ಟು 1,397 ಅರ್ಜಿಗಳ ಪೈಕಿ 581 ಅರ್ಜಿಗಳನ್ನು ಯಶಸ್ವಿಯಾಗಿ ಇತ್ಯರ್ಥಗೊಳಿಸಲಾಗಿದೆ. ಇನ್ನುಳಿದ 814 ಅರ್ಜಿಗಳು ಅಧಿಕಾರಿಗಳ ಪರಿಶೀಲನಾ ಹಂತದಲ್ಲಿವೆ ಹಾಗೂ 2 ಅರ್ಜಿಗಳನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸಲಾಗಿದೆ. ಬಾಕಿ ಉಳಿದಿರುವ ಎಲ್ಲಾಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ನಿಯಮಾನುಸಾರ ವಿಲೇವಾರಿ ಮಾಡಲು ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ.