ಶಿವಮೊಗ್ಗ ಮೃಗಾಲಯದಲ್ಲಿನಾಲ್ಕು ಸಿಂಹದ ಮರಿಗಳ ಸಾವು

Contributed by: aatish.kannale@timesgroup.com|Vijaya Karnataka•
death of four lion cubs in shivamogga zoo
- ಮೂರು ದಶಕಗಳ ಬಳಿಕ ಜನನ ಸಂಭ್ರಮ ಕಂಡಿದ್ದ ಸಿಂಹ ಧಾಮ

ಶಿವಮೊಗ್ಗ ಮೃಗಾಲಯದಲ್ಲಿನಾಲ್ಕು ಸಿಂಹದ ಮರಿಗಳ ಸಾವು
ವಿಕ ಸುದ್ದಿಲೋಕ ಶಿವಮೊಗ್ಗ

ತಾಲೂಕಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದಲ್ಲಿಸಿಂಹದ ಕರುಳ ಕುಡಿ ಅರಳಿ ಬರೋಬ್ಬರಿ ಮೂರು ದಶಕಗಳು ಗತಿಸಿವೆ. ಎಷ್ಟೇ ಪ್ರಯತ್ನಿಸಿದರೂ ಇಲ್ಲಿದ್ದ ಜೋಡಿಗಳಿಗೆ ಮರಿಗಳಾಗಿರಲಿಲ್ಲ. ಈ ಎಲ್ಲಅಂಶಗಳನ್ನು ಮನಗಂಡೇ ಮೃಗಾಲಯ ಅಧಿಕಾರಿಗಳು, ಬೇರೆಡೆಯಿಂದ ‘ಸಾರಾ’ಳನ್ನು ಕರೆತಂದಿದ್ದರು. ಅವರ ಲೆಕ್ಕಾಚಾರವೂ ಕೈಗೂಡಿತ್ತು. ಆದರೆ, ಅದ್ಯಾವ ಕೆಟ್ಟ ಗಳಿಗೆಯೋ ಅವಳು ಜನ್ಮ ನೀಡಿದ ನಾಲ್ಕು ಮರಿಗಳು ಮೃತಪಟ್ಟಿವೆ!

ಮೂರು ವರ್ಷದ ಸಾರಾಗೆ ಇದು ಮೊದಲ ಹೆರಿಗೆ. 2 ಗಂಡು ಮತ್ತು 2 ಹೆಣ್ಣು ಮರಿಗಳಿಗೆ ಜನ್ಮ ನೀಡಿದ್ದಳು. ಇಡೀ ಮೃಗಾಲಯದಲ್ಲಿಖುಷಿಯ ವಾತಾವರಣ ಮನೆ ಮಾಡಿತ್ತು. ಆದರೆ, ಅದು ಹೆಚ್ಚು ದಿನ ಇರಲಿಲ್ಲ. ಸೆಪ್ಟೆಂಬರ್ ಎರಡನೇ ವಾರದಲ್ಲಿಮರಿಗಳಿಗೆ ಜನ್ಮ ನೀಡಿದ್ದು, ಮಾರನೇ ದಿನವೇ ಎಲ್ಲಮರಿಗಳು ಕೆಲವು ಗಂಟೆಗಳ ಅಂತರದಲ್ಲಿಸಾವನ್ನಪ್ಪಿವೆ. ಸಾರಾಳನ್ನು ಕಳೆದ ವರ್ಷ ಅಕ್ಟೋಬರ್ ನಲ್ಲಿಮೃಗಾಲಯಕ್ಕೆ ಕರೆತರಲಾಗಿತ್ತು.

ಶಿವಾ ಮತ್ತು ಸಾರಾ ಜೋಡಿಯನ್ನು ಒಂದೆಡೆ ಸೇರಲು ಬಿಡಲಾಗಿತ್ತು. ಅವುಗಳು ಒಮ್ಮೆ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿತೊಡಗಿದರೂ ಸಾರಾಳ ದೈಹಿಕ ಸ್ಥಿತಿಯಲ್ಲಿಬದಲಾವಣೆಗಳು ಆಗಿರಲಿಲ್ಲ. ಆದರೆ, ಗರ್ಭಧರಿಸಿದ್ದ ಸಾರಾ ನಾಲ್ಕು ಮರಿಗಳಿಗೆ ನೀಡಿದ್ದಳು.

ಸಾಮಾನ್ಯವಾಗಿ ಜನ್ಮ ನೀಡಿದ ತಾಯಿ ಮರಿಗಳ ಆರೈಕೆ ಮಾಡಬೇಕು. ಅವುಗಳಿಗೆ ಹಾಲುಣಿಸಬೇಕು. ಆದರೆ, ಸಾರಾ ಮೊದಲ ಹೆರಿಗೆಯ ಕಾರಣಕ್ಕೋ ಏನೊ ಇದ್ಯಾವುದನ್ನೂ ಮಾಡಿಲ್ಲ. ಎಷ್ಟೇ ಪ್ರಯತ್ನಿಸಿದರೂ ಸ್ಪಂದಿಸಿಲ್ಲ. ಮರಿಗಳನ್ನು ಕೃತಕ ಆರೈಕೆ ಮಾಡಬೇಕೆಂದು ಕೊಂಡೊಯ್ದಾಗ ಅದರಲ್ಲಿಒಂದು ಮೃತಪಟ್ಟಿದೆ. ಅಷ್ಟೊತ್ತಿಗೆ ಉಳಿದವುಗಳ ದೇಹದ ಉಷ್ಣಾಂಶದಲ್ಲಿಏರಿಕೆಯಾಗಿದೆ. ಚಿಕಿತ್ಸೆ ನೀಡುವ ಹೊತ್ತಿಗೆ ಅವೂ ಸಹ ಪ್ರಾಣ ಕಳೆದುಕೊಂಡಿವೆ. ಅದರಲ್ಲಿಒಂದು ಮರಿಯ ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂದು ಮೃಗಾಲಯ ಅಧಿಕಾರಿಗಳು ತಿಳಿಸಿದ್ದಾರೆ.

ಮರಿಗಳ ಜನನವಾದಾಕ್ಷಣ ತಾಯಿ ಹಾಲುಣಿಸಿದರೆ ಗಿಣ್ಣು (ಕೊಲಸ್ಟ್ರಂ) ಅಂಶ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ತದನಂತರ, ಮರಿಗಳ ಆರೈಕೆ ಸುಲಭವಾಗುತ್ತದೆ. ಆದರೆ, ಈ ಮರಿಗಳಿಗೆ ಹಾಲುಣಿಸಲು ಮತ್ತು ಆರೈಕೆ ಮಾಡಲು ತಾಯಿ ಮುಂದಾಗಿರಲಿಲ್ಲಎನ್ನಲಾಗಿದೆ. ಸಾರಾ ಮುಂದೆಯೂ ಇದೇ ರೀತಿ ವರ್ತಿಸಿದರೆ, ಅದಕ್ಕಾಗಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು. ಇಂಕ್ಯುಬೇಷನ್ , ಅಮ್ಮನ ರಕ್ತದಿಂದಲೇ ಆಂಟಿ ಬಾಡಿಸ್ ಪ್ರತ್ಯೇಕಿಸಿ ಮರಿಗಳ ರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಮೃಗಾಲಯದ ಇ.ಡಿ. ಅಮರಕ್ಷರ್ ತಿಳಿಸಿದ್ದಾರೆ.

ಫೋಟೊ: 31: ಶಿವಮೊಗ್ಗ ಮೃಗಾಲಯದಲ್ಲಿರುವ ಸಿಂಹಿಣಿ ಸಾರಾ.