ಮಾಲಂಬಿ ಗ್ರಾಮದಲ್ಲಿಶ್ರೀವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಗಳ ವಿಸರ್ಜನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.ಮಾಲಂಬಿ ಜಂಕ್ಸನ್ ಬಸ್ ತಂಗುದಾಣದಲ್ಲಿಗಣೇಶೋತ್ಸವ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ವಾಹನದಲ್ಲಿಹೂವಿನಿಂದ ಅಲಂಕರಿಸಿದ ಮಂಟಪದಲ್ಲಿಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ. ನಂತರ ಗ್ರಾಮದ ಬೀದಿಗಳಲ್ಲಿಅದ್ಧೂರಿ ಮೆರವಣಿಗೆ ನಡೆಸಲಾಯಿತು.
ರಾತ್ರಿ 8 ಗಂಟೆವರೆಗೂ ಗಣೇಶೋತ್ಸವದ ಶೋಭಾಯಾತ್ರೆಯನ್ನು ನಡೆಸಲಾಯುತು. ಈ ಸಂದರ್ಭದಲ್ಲಿಸೇವಾ ಸಮಿತಿಯವರು ಸೇರಿದಂತೆ ಭಕ್ತಾದಿಗಳು,ಗ್ರಾಮಸ್ಥರು ಪಾಲ್ಗೊಂಡು ಸಂಭ್ರಮಿಸಿದರು.
ನಂತರ ಮಾಲಂಬಿ ಗ್ರಾಮದ ಬಾಲ್ಗೆರೆಯಲ್ಲಿಗೌರಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
ಪೋಟೋಎಂಡಿಕೆ27ಎಸ್ ಎಸ್ 12ಮಾಲಂಬಿ ಗ್ರಾಮದ ವಿನಾಯಕ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.