ಪಂಚ ಪರಿವರ್ತನೆ ಕಾರ್ಯಕ್ರಮ

Contributed by: subedarcb@gmail.com|Vijaya Karnataka•
event of filling traditional attire for women and panch parivartana program
27 ಎನ್ ಆರ್ ಡಿ-1

ಪಂಚ ಪರಿವರ್ತನೆ ಕಾರ್ಯಕ್ರಮ
ವಿಕ ಸುದ್ದಿಲೋಕ ನರಗುಂದ

ಪಟ್ಟಣದ ಅರ್ಬಾಣ ಬಡಾವಣೆಯ ಕಲ್ಮೇಶ್ವರ ದೇವಸ್ಥಾನದಲ್ಲಿರಾಷ್ಟೊ್ರೕತ್ಥಾನ ಪರಿಷತ್ ಹಾಗೂ ಅವ್ವ ಚಾರಿಟೇಬಲ್ ಟ್ರಸ್ಟ್ , ಕರವೇ ವೇದಿಕೆ ಮಹಿಳಾ ಘಟಕದಿಂದ ನಡೆದ ಮಹಿಳೆಯರಿಗೆ ಉಡಿ ತುಂಬುವ ಹಾಗೂ ಪಂಚ ಪರಿವರ್ತನೆ ಕಾರ್ಯಕ್ರಮ ನಡೆಯಿತು.

ಎಸ್ .ವೈ.ಪಾಟೀಲ ಮಾತನಾಡಿ, ವ್ಯಕ್ತಿ ಮತ್ತು ಸಮಾಜದ ಉನ್ನತಿಗಾಗಿ ರೂಪಿಸಲಾದ ಐದು ಆಯಾಮಗಳಲ್ಲಿಪಂಚ ಪರಿವರ್ತನೆ ಕಾರ್ಯಕ್ರಮವೂ ಒಂದಾಗಿದೆ. ಸಾಮಾಜಿಕ ಸಾಮರಸ್ಯತೆ ತರಲು ಜಾತಿ ಭೇದ ಮರೆತು ಎಲ್ಲರೂ ಸಮನಾಗಿ ಒಂದಾಗಿ ಬಾಳುವುದು ಇದರ ಮೂಲ ಉದ್ದೇಶ. ಕುಟುಂಬ ವ್ಯವಸ್ಥೆ ಗಟ್ಟಿಗೊಳಿಸುವುದು, ಮೌಲ್ಯಗಳನ್ನು ಉಳಿಸುವುದು ಮತ್ತು ಪರಸ್ಪರ ಪ್ರೀತಿ, ವಿಶ್ವಾಸ ಬೆಳೆಸುವುದು ಇದರಲ್ಲಿಅಡಗಿದೆ. ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡಬೇಕು. ನಮ್ಮ ಸಂಸ್ಕೃತಿಯ ಆಧಾರದ ಜೀವನ ಶೈಲಿ ಮುಂದುವರೆಸುವುದಾಗಿದೆ ಎಂದರು.

ಉಪನ್ಯಾಸ ನೀಡಿದ ಶಿಕ್ಷಕ ಎಸ್ .ವೈ.ಪಾಟೀಲ ಅವರನ್ನು ಸನ್ಮಾನಿಸಲಾಯಿತು. ವಿದ್ಯಾ ಕೆಂಚನಗೌಡ್ರ, ರೇಣುಕಾ ಶಿವಬಸನಗೌಡ್ರ, ಶೋಭಾ ಚೌಕಿಮಠ ಉಪಸ್ಥಿತರಿದ್ದರು. 100 ಹೆಚ್ಚು ಮಹಿಳೆಯರಿಗೆ ಇದೇ ಸಂದರ್ಭದಲ್ಲಿಉಡಿ ತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು. ಮಾಲಾ ಪಾಟೀಲ ನಿರೂಪಿಸಿದರು. ವಿನೂತಾ ನಾಗನೂರ ವಂದಿಸಿದರು.

ಫೋಟೊ: 27 ಎನ್ ಆರ್ ಡಿ-1:

ನರಗುಂದ ಪಟ್ಟಣದ ಅರ್ಬಣ ಬಡಾವಣೆಯ ಕಲ್ಮೇಶ್ವರ ದೇವಸ್ಥಾನದಲ್ಲಿಮಹಿಳೆಯರಿಗೆ ಉಡಿ ತುಂಬುವ ಹಾಗೂ ಪಂಚ ಪರಿವರ್ತನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿಉಪನ್ಯಾಸ ನೀಡಿದ ಎಸ್ .ವೈ.ಪಾಟೀಲ ಅವರನ್ನು ಸನ್ಮಾನಿಸಲಾಯಿತು.