ಮೆಗಾ ಡೇರಿ ಲೋಕಾರ್ಪಣೆಗೆ ರೆಡಿ

Contributed by: manjunathrd59@gmail.com|Vijaya Karnataka•
haveri mega dairy inauguration preparations modern project worth 73 crores
*73 ಕೋಟಿ ರೂ. ವೆಚ್ಚದಲ್ಲಿಅತ್ಯಾಧುನಿಕ ತಂತ್ರಜ್ಞಾನದಲ್ಲಿನಿರ್ಮಾಣ

ಮೆಗಾ ಡೇರಿ ಲೋಕಾರ್ಪಣೆಗೆ ರೆಡಿ
-ಹಾಲಿನ ಸಂಗ್ರಹ, ಸಂಸ್ಕರಣೆ, ಪ್ಯಾಕಿಂಗ್ , ಉತ್ಪನ್ನ ತಯಾರಿಕೆ

ಮಂಜುನಾಥ ದಾಸಣ್ಣನವರ ಹಾವೇರಿ

ಋa್ಞ್ಜ್ಠ್ಞaಠಿh್ಟd59ಃಜಞaಜ್ಝಿ.್ಚಟಞ

ಜಿಲ್ಲೆಯ ಹೈನುಗಾರರು ಹಾಗೂ ರೈತರ ಬಹುದಿನಗಳ ನಿರೀಕ್ಷೆಯಾಗಿರುವ ಹಾವೇರಿ ಹಾಲು ಒಕ್ಕೂಟದ (ಹಾವೇಮುಲ್ ) ಮೆಗಾ ಡೇರಿ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದೆ. ಬ್ಯಾಡಗಿ ತಾಲೂಕು ಅರಬಗೊಂಡ ಬಳಿ ನಿರ್ಮಾಣವಾಗುತ್ತಿರುವ ಈ ಮೆಗಾ ಡೇರಿ, ಪೂರ್ಣ ಪ್ರಮಾಣದಲ್ಲಿಕಾರ್ಯಾರಂಭಿಸಿದ ಬಳಿಕ ಜಿಲ್ಲೆಯ ಹಾಲು ಉತ್ಪಾದನಾ ಕ್ಷೇತ್ರಕ್ಕೆ ಮತ್ತಷ್ಟು ಬಲ ಸಿಗುವ ನಿರೀಕ್ಷೆಯಿದೆ.

ಸುಮಾರು 73 ಕೋಟಿ ರೂ. ವೆಚ್ಚದಲ್ಲಿನಿರ್ಮಾಣವಾಗುತ್ತಿರುವ ಮೆಗಾ ಡೇರಿಯಲ್ಲಿಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದ್ದು, ಹಾಲಿನ ಸಂಗ್ರಹ, ಹಾಲು ಸಂಸ್ಕರಣೆ, ಪ್ಯಾಕಿಂಗ್ ಸೇರಿದಂತೆ ವಿವಿಧ ಹಾಲಿನ ಉತ್ಪನ್ನಗಳ ತಯಾರಿಕೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಮೆಗಾ ಡೇರಿಯಲ್ಲಿಸದ್ಯ ಯಂತ್ರಗಳ ಕಾರ್ಯಕ್ಷಮತೆ, ಸಂಸ್ಕರಣಾ ವ್ಯವಸ್ಥೆ ಹಾಗೂ ತಾಂತ್ರಿಕ ಅಂಶಗಳ ಪರಿಶೀಲನೆ ನಡೆಯುತ್ತಿದ್ದು, ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ಹಾಲಿಗೆ ಮೌಲ್ಯವರ್ಧನೆ:

ಜಿಲ್ಲೆಯಲ್ಲಿಪ್ರತಿದಿನ ಸುಮಾರು 1 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿದ್ದು, ಮುಂದಿನ ದಿನಗಳಲ್ಲಿ2 ಲಕ್ಷ ಲೀಟರ್ ವರೆಗೆ ಸಂಗ್ರಹಿಸುವ ಗುರಿ ಇದೆ. ನೂತನ ಮೆಗಾ ಡೇರಿ ಕಾರ್ಯಾರಂಭಿಸಿದ ಬಳಿಕ ಹಾಲನ್ನು ಕೇವಲ ಮಾರಾಟ ಮಾಡುವುದಕ್ಕೆ ಸೀಮಿತವಾಗದೆ, ವಿವಿಧ ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಲು ಅವಕಾಶ ದೊರೆಯಲಿದೆ. ಹಾಲು, ಮೊಸರು, ಮಜ್ಜಿಗೆ ಜತೆಗೆ ಪನ್ನೀರು, ತುಪ್ಪ, ಬೆಣ್ಣೆ, ಕೋವ್ವಾ, ಪೇಡಾ, ಮೈಸೂರು ಪಾಕ್ ಸೇರಿದಂತೆ ವಿವಿಧ ಸಿಹಿ ಉತ್ಪನ್ನಗಳನ್ನು ತಯಾರಿಸಲು ಹಾಲು ಒಕ್ಕೂಟದಿಂದ ಅಗತ್ಯ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ವಿಸ್ತರಣೆಗೂ ಮನ್ನಣೆ:

ಜಿಲ್ಲೆಯ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಉತ್ಪನ್ನಗಳನ್ನು ತಯಾರಿಸಲಾಗುವುದು. ಸ್ಥಳೀಯ ಬೇಡಿಕೆ ಪೂರೈಸಿದ ಬಳಿಕ ಹೆಚ್ಚುವರಿ ಉತ್ಪನ್ನಗಳನ್ನು ಧಾರವಾಡ ಕೆಎಂಎಫ್ ಒಕ್ಕೂಟದ ಮೂಲಕ ಇತರ ಮಾರುಕಟ್ಟೆಗಳಿಗೆ ಪೂರೈಸಲು ಉದ್ದೇಶಿಸಲಾಗಿದೆ. ಇದರಿಂದ ಒಕ್ಕೂಟದ ವಹಿವಾಟು ರಾಜ್ಯಾದ್ಯಂತ, ದೇಶಾದ್ಯಂತ ವಿಸ್ತರಣೆಯಾಗುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಒಕ್ಕೂಟದ ವ್ಯವಸ್ಥಾಪಕರು ಹೇಳುತ್ತಾರೆ.

ಅನುದಾನ ಬಿಡುಗಡೆ:

ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ70 ಕೋಟಿ ಅನುದಾನದಲ್ಲಿಮೆಗಾ ಡೇರಿ ನಿರ್ಮಿಸಲು ಘೋಷಣೆ ಮಾಡಲಾಗಿತ್ತು. 2023ರ ಮಾರ್ಚ್ನಲ್ಲಿಭೂಮಿ ಪೂಜೆ ನೆರವೇರಿಸಿದ್ದರು. ಏಕಕಾಲಕ್ಕೆ 65 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ, ಕಾಮಗಾರಿ ನಡೆಸಲಾಗಿತ್ತು. ಬಳಿಕ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ 2026ರ ಮಾರ್ಚ್ನಲ್ಲಿಅಂದಿನ ಸಿಎಂ ಸಿದ್ದರಾಮಯ್ಯರ ಅವಧಿಯಲ್ಲಿ5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಉಳಿದ ಕಾಮಗಾರಿ ಪೂರ್ಣಗೊಳಿಸಲು ಹಾಲು ಒಕ್ಕೂಟದಿಂದ 3 ಕೋಟಿ ರೂ. ವ್ಯಯಿಸಲಾಗಿದೆ ಎಂದು ಜಿಲ್ಲಾಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ ತಿಳಿಸಿದ್ದಾರೆ.

ಕೋಟ್ :

ಮೆಗಾ ಡೇರಿ ಪೂರ್ಣ ಪ್ರಮಾಣದಲ್ಲಿಕಾರ್ಯಾರಂಭಿಸಿದರೆ ಜಿಲ್ಲೆಯ ಹಾಲು ಉತ್ಪಾದಕರಿಗೆ ಮಾರುಕಟ್ಟೆ ವಿಸ್ತರಣೆಯಾಗುವುದರ ಜತೆಗೆ, ಹಾಲಿನ ಮೌಲ್ಯವರ್ಧನೆ, ಉತ್ಪನ್ನಗಳ ವೈವಿಧ್ಯ ಹಾಗೂ ಒಕ್ಕೂಟದ ವಹಿವಾಟು ಹೆಚ್ಚಳಕ್ಕೆ ಹೊಸ ದಾರಿ ತೆರೆದುಕೊಳ್ಳಲಿದೆ.

-ಪ್ರದೀಪ ಎಸ್ .ಎಂ., ವ್ಯವಸ್ಥಾಪಕ ನಿರ್ದೇಶಕರು, ಹಾವೇಮುಲ್

ಕೋಟ್ :

ಮೆಗಾ ಡೇರಿ ಕಾಮಗಾರಿ ಪೂರ್ಣಗೊಂಡಿದ್ದು, ಯಂತ್ರೋಪಕರಣಗಳ ಪ್ರಾಯೋಗಿಕತೆ ನಡೆಯುತ್ತಿದೆ. ಮೆಗಾ ಡೇರಿ ಉದ್ಘಾಟನೆ ಸಂಬಂಧಿಸಿದಂತೆ ಸಿಎಂ ಜತೆಗೆ ಚರ್ಚಿಸಬೇಕೆನ್ನುವಷ್ಟರಲ್ಲಿಪಶ್ಚಿಮ ಪದವೀಧರ ಕ್ಚೇತ್ರದ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿದೆ. ಶೀಘ್ರದಲ್ಲೇ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ ದಿನಾಂಕ ಖಚಿತಪಡಿಸಿಕೊಂಡು ಮೆಗಾ ಡೇರಿ ಲೋಕಾರ್ಪಣೆಗೆ ಸಿದ್ಧತೆ ಮಾಡಿಕೊಳ್ಳಲಾಗುವುದು.

-ಮಂಜನಗೌಡ ಪಾಟೀಲ, ಅಧ್ಯಕ್ಷರು, ಜಿಲ್ಲಾಹಾಲು ಒಕ್ಕೂಟ, ಹಾವೇರಿ

ಪೋಟೊ 27 ಮಂಜು 1

ಬ್ಯಾಡಗಿ ತಾಲೂಕು ಅರಬಗೊಂಡ ಬಳಿ ನಿರ್ಮಾಣಗೊಂಡಿರುವ ಮೆಗಾ ಡೇರಿ.