ಕಾಸರಗೋಡು: ಎನ್ ಸಿಇಆರ್ ಟಿ ರಾಷ್ಟ್ರೀಯ ಮಟ್ಟದಲ್ಲಿಆಯೋಜಿಸಿದ್ದ ರಾಷ್ಟ್ರೀಯ ಪಾತ್ರಾಭಿನಯ ಸ್ಪರ್ಧೆಯಲ್ಲಿಕಾಸರಗೋಡು ಕಂದಾಯ ಜಿಲ್ಲೆಯಿಂದ ಪ್ರಥಮ ಸ್ಥಾನ ಪಡೆಯುವ ಮೂಲಕ ಇರಿಯಣ್ಣಿ ಜಿವಿಎಚ್ ಎಸ್ ಎಸ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಾದ ಕೆ.ಎಂ. ಅನಾಮಿಕಾ, ಟಿ. ಅಭಿನವ್ , ಕೆ. ದೇವಾರ್ಚನಾ, ಎಂ.ಆರ್ . ಆಯಿಲ್ಯ ಮತ್ತು ಕೆ.ಎಸ್ . ಅನ್ವಿ ಅವರು ‘ಭಾವನಾತ್ಮಕ ಯೋಗಕ್ಷೇಮ ಮತ್ತು ಮಾನಸಿಕ ಆರೋಗ್ಯ’ ಎಂಬ ವಿಷಯದ ಕುರಿತು ಪ್ರಸ್ತುತಪಡಿಸಿದ ಪಾತ್ರಾಭಿನಯವು ಜಿಲ್ಲಾಮಟ್ಟದಲ್ಲಿಪ್ರಥಮ ಸ್ಥಾನ ಗಳಿಸಿತು. ತರಬೇತಿಯ ನೇತೃತ್ವವನ್ನು ಇಂಗ್ಲಿಷ್ ಶಿಕ್ಷಕಿ ಅನು ಮುಕುಂದನ್ ವಹಿಸಿದ್ದರು.