ನಗರದ ಶ್ರೀ ನೇಮಿನಾಥ ದಿಗಂಬರ ಜೈನ ಮಂದಿರದಲ್ಲಿಶನಿವಾರ ಶ್ರೀಮತಿ ವೀಣಾ ಚಂದ್ರನಾಥ ಕಳಸೂರ ಚಾರಿಟೇಬಲ್ ಟ್ರಸ್ಟ್ ನಿಂದ 2025-26ನೇ ಸಾಲಿನಲ್ಲಿಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿಶೇ.90ಕ್ಕಿಂತ ಅಧಿಕ ಅಂಕ ಪಡೆದ ಜಿಲ್ಲೆಯ ಜೈನ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.ಎಸ್ ಎಸ್ ಎಲ್ ಸಿ ವಿಭಾಗದಿಂದ ಸಿಂಧೂರ ಶೀತಲ ಸೊಗಲಿ, ರಂಜಿತಾ ಪ್ರಕಾಶ ಪಾಯಣ್ಣವರ, ದಕ್ಷ ಧುಂಡಶಿ, ಶೃತಿ ಸಂಕಪ್ಪ ಅಂಗಡಿ, ಅಕ್ಷತಾ ಆರ್ , ಮನಶ್ರೀ ಭೂಪಾಲ ಹುರುಳಿಕುಪ್ಪಿ ಹಾಗೂ ಅಂಕಿತಾ ಮೋಹನ ಹೊನ್ನಪ್ಪನವರ ಹಾಗೂ ಪಿಯುಸಿ ವಿದ್ಯಾರ್ಥಿಗಳಾದ ಜ್ವಾಲಾಮ್ಮ ಮಲ್ಲಾಡದ, ಲಕ್ಷ್ಮಿ ಭೀಮರಾಯ ಮಲ್ಲಾಡದ, ಚಂದನಾ ಶಂಕ್ರಪ್ಪ ದುಂಡಣ್ಣನವರ, ಆಂಚಲ ಅಜಿತ ಸಂಕಪ್ಪನವರ, ಸೃಷ್ಟಿ ಭೂಪಾಲ ಹುರುಳಿಕುಪ್ಪಿ ಅವರನ್ನು ಸನ್ಮಾನಿಸಿ, ನಗದು ಬಹುಮಾನ ನೀಡಲಾಯಿತು.
ನಗರದ ಭಗವಾನ್ ನೇಮಿನಾಥ ದಿಗಂಬರ ಜೈನ ಮಂದಿರದಲ್ಲಿದಶಲಕ್ಷಣ ಮಹಾಪರ್ವದ ಅಂಗವಾಗಿ ಅನಂತ ನೋಂಪಿ ಕೊನೆಯ ದಿನ ಶನಿವಾರ ಬೆಳಗ್ಗೆಯಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ಜಿನಮಂದಿರದ ಪಂಡಿತರಾದ ಶ್ರೇಣಿಕ ಉಪಾಧ್ಯ ಅವರ ಮಾರ್ಗದರ್ಶನದಲ್ಲಿಜರುಗಿದವು. ಪೂಜಾ ಕಾರ್ಯಕ್ರಮದ ನಂತರ ಸಂಜೆ ಶ್ರೀ ಭಗವಾನ್ ಅನಂತನಾಥ ಸ್ವಾಮಿ ಜಿನಬಿಂಬ ಪಾಲಕಿ ಉತ್ಸವ ಅಷ್ಟಮಂಗಲಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಜರುಗಿತು. ಮೆರವಣಿಗೆಯಲ್ಲಿಸಮಸ್ತ ಶ್ರಾವಕರು, ಶ್ರಾವಕಿಯರು ಕೇಸರಿ ಮತ್ತು ಶ್ವೇತವರ್ಣದ ವಸ್ತ್ರಧರಿಸಿದ್ದರು. ಭಗವ0ತರ ಜಯಘೋಷಣೆ ಮಾಡುತ್ತ ಸಾಗಿದರು.
ಪೋಟೋ 27 ಮಂಜು 12
ಹಾವೇರಿಯ ನೇಮಿನಾಥ ದಿಗಂಬರ ಜೈನ ಮಂದಿರದಲ್ಲಿಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿಹೆಚ್ಚು ಅಂಕ ಗಳಿಸಿದ ಜಿಲ್ಲೆಯ ಜೈನ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.