ವಿಕ ಸುದ್ದಿಲೋಕ ಸಾಗರಎನ್ ಎಸ್ ಎಸ್ ದಿನಾಚರಣೆ ಅಂಗವಾಗಿ ತಾಲೂಕಿನ ಕೇಡಲಸರ ಕಾಕಲ್ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜಿನ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು ಗುರುವಾರ ಹೊನ್ನೇಸರದ ಶ್ರಮಜೀವಿ ಆಶ್ರಮದಲ್ಲಿಶ್ರಮದಾನ ನಡೆಸಿದರು.
ಸೆ.26 ಮತ್ತು 27ರಂದು ನಡೆಯಲಿರುವ ಗಾಂಧಿ ಸಂತೆ ಹಿನ್ನೆಲೆಯಲ್ಲಿಆಶ್ರಮದ ಆವರಣದಲ್ಲಿಸ್ವಚ್ಛತಾ ಕಾರ್ಯ ಕೈಗೊಂಡ ವಿದ್ಯಾರ್ಥಿಗಳೊಂದಿಗೆ ಚರಕ ಸಂಸ್ಥಾಪಕ ಪ್ರಸನ್ನ ಮಾತನಾಡಿ, ಯುವಜನರಿಗೆ ತರಬೇತಿ ನೀಡಿ ಉದ್ಯೋಗ ಕಲ್ಪಿಸಲು ಚರಕ ಸಿದ್ಧವಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾಲೇಜು ಹಂತದಲ್ಲಿಯೇ ಆಸಕ್ತ ವಿದ್ಯಾರ್ಥಿಗಳು ಚರಕದಲ್ಲಿಕೆಲಸ ಕಲಿಯುವ ಅವಕಾಶವಿದ್ದು, ಈಗಾಗಲೇ ಕೆಲವರು ಒಂದು ಗಂಟೆಯ ಅವಧಿಯಲ್ಲಿಕೆಲಸ ಮಾಡಿ ಅನುಭವ ಪಡೆದಿದ್ದಾರೆ ಎಂದರು.
ಪ್ರಾಂಶುಪಾಲರಾದ ಜಿ.ಜಿ. ವಸುಂಧರಾ, ಎನ್ ಎಸ್ ಎಸ್ ಅಧಿಕಾರಿ ಗಿರೀಶ್ , ಉಪನ್ಯಾಸಕರಾದ ಪುನೀತ್ , ಚನ್ನಕೇಶವ, ಸುರೇಶ್ , ರುದ್ರಪ್ಪ, ನಾಗರಾಜ, ವಾಸು, ಚಿತ್ರಾ, ಸಂಜನಾ ಹಾಗೂ ರಾಜಶೇಖರ್ ಉಪಸ್ಥಿತರಿದ್ದರು.
ಚಿತ್ರಶೀರ್ಷಿಕೆ
25ಎಸ್ ಜಿಆರ್ 1
ಸಾಗರ ತಾಲೂಕಿನ ಕೇಡಲಸರ ಕಾಕಲ್ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜಿನ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು ಎನ್ ಎಸ್ ಎಸ್ ದಿನಾಚರಣೆ ಅಂಗವಾಗಿ ಹೊನ್ನೇಸರದ ಶ್ರಮಜೀವಿ ಆಶ್ರಮದಲ್ಲಿಶ್ರಮದಾನ ನಡೆಸಿದರು.