ಲೀಡ್ .. ಜನರ ಧ್ವನಿಯಾಗಿ ಕಾರ್ಯನಿರ್ವಹಿಸಿ

Contributed by: mathapatis4@gmail.com|Vijaya Karnataka•
prajasheve andolana officials must address peoples issues
ಪ್ರಜಾಸೇವೆ ಆಂದೋಲನ | ಅಧಿಕಾರಿಗಳಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಸಲಹೆ

ಜನರ ಧ್ವನಿಯಾಗಿ ಕಾರ್ಯನಿರ್ವಹಿಸಿ
ವಿಕ ಸುದ್ದಿಲೋಕ ಹೊರ್ತಿ

‘‘ಪ್ರಜಾಸೇವೆ ಆಂದೋಲನ ಸಿಎಂ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷೆ ಕಾರ್ಯಕ್ರಮವಾಗಿದೆ. ಗ್ರಾಮೀಣ ಭಾಗದ ಜನರ ಬಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತೆರಳಿ, ಅವರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವುದು ಆಂದೋಲನದ ಉದ್ದೇಶ,’’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಗ್ರಾಮದ ರೇವಣಸಿದ್ದೇಶ್ವರ ಮಂಗಲ ಸಭಾ ಮಂಟಪದಲ್ಲಿನಡೆದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

‘‘ಸರಕಾರ ವಿಧಾನಸೌಧಕ್ಕೆ ಮಾತ್ರ ಸೀಮಿತವಾಗಿಲ್ಲ. ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಜನರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ತಮ್ಮ ಅವಧಿಯಲ್ಲಿಜನರಿಗಾಗಿ ಏನು ಕೆಲಸ ಮಾಡಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು,’’ ಎಂದರು.

ತಾಪಂ ಇಒ ಮಹಾದೇವಪ್ಪ ಏವೂರ ಮಾತನಾಡಿ, ‘‘ನಾನಾ ಇಲಾಖೆಗಳಿಗೆ ಸಂಬಂಧಿಸಿದ 220 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳನ್ನು ಪರಿಶೀಲಿಸಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು,’’ ಎಂದರು.

ಇಂಡಿ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಅವರು, ‘‘ಸ್ವೀಕೃತಗೊಂಡ 220 ಅಹವಾಲುಗಳಲ್ಲಿ68 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗಿದೆ. ಇನ್ನುಳಿದ 152 ಅರ್ಜಿಗಳನ್ನು 21ದಿನದಲ್ಲಿಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು,’’ ಎಂದು ಹೇಳಿದರು.

ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಸವರಾಜ ಕವಲಗಿ, ಎಸಿ ಚಿದಾನಂದ ಗುರುಸ್ವಾಮಿ, ಬಳ್ಳೊಳ್ಳಿ ಕಂದಾಯ ನಿರೀಕ್ಷಕ ಪಿ.ಜೆ.ಕೊಡಹೊನ್ನ, ಇಂಡಿ ಡಿವೈಎಸ್ ಪಿ ಸದಾಶಿವ ಕಟ್ಟಿಮನಿ, ಸಿಪಿಐ ಸುನೀಲಗೌಡ ಪಾಟೀಲ, ಹೊರ್ತಿ ಪಿಎಸ್ ಐ ಅನೀತಾ ರಾಠೋಡ, ಗ್ರಾಮ ಆಡಳಿತ ಅಧಿಕಾರಿ ಯಲ್ಲಪ್ಪ ಪೂಜಾರಿ, ಪಿಡಿಒ ಮಲ್ಲಿಕಾರ್ಜುನ ನಿಲಂಗಿ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

--

ಸಮಸ್ಯೆಗಳ ಸರಮಾಲೆ

ಹೊರ್ತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಸಿಸಿ ರಸ್ತೆ, ರಸ್ತೆ ದುರಸ್ತಿ, ಚರಂಡಿ ವ್ಯವಸ್ಥೆ, ಶಿಥಿಲಗೊಂಡ ಶಾಲಾ ಕಟ್ಟಡಗಳ ದುರಸ್ತಿ, ವಿದ್ಯುತ್ ಸಮಸ್ಯೆ, ಕುಡಿಯುವ ನೀರು, ರೇಷನ್ ಕಾರ್ಡ್ ಸಮಸ್ಯೆ, ಜಮೀನುಗಳಿಗೆ ದಾರಿ, ಎಸ್ಸಿ, ಎಸ್ಟಿ ಜನರ ರುದ್ರಭೂಮಿ, ಪಶು ವೈದ್ಯಕೀಯ ಸೇವೆ ಹಾಗೂ ರೈತರಿಗೆ ಕಾಲುವೆ ನೀರನ್ನು ಪೂರೈಸುವಿಕೆ ಸೇರಿದಂತೆ ನಾನಾ ಸಮಸ್ಯೆಗಳ ಕುರಿತು ಜನರು ಅರ್ಜಿಗಳನ್ನು ಸಲ್ಲಿಸಿದರು.

ಶಿಕ್ಷಣ, ಆಹಾರ, ವಿದ್ಯುತ್ , ನೀರಾವರಿ ಇಲಾಖೆ, ಲೋಕೋಪಯೋಗಿ, ಕೆಬಿಜೆಎನ್ ಎಲ್ , ನೀರಾವರಿ, ಸಣ್ಣ ನೀರಾವರಿ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಇದ್ದರು.

ಫೋಟೊ

ಹೊರ್ತಿಯಲ್ಲಿನಡೆದ ಪ್ರಜಾಸೇವೆ ಆಂದೋಲನದಲ್ಲಿಫಲಾನುಭವಿ ಒಬ್ಬರಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಪಿಂಚಣಿ ಪತ್ರ ವಿತರಿಸಿದರು.