ಗಂಗಾವತಿ-ದರೋಜಿ ರೈಲ್ವೆ ಮಾರ್ಗಕ್ಕೆ ಅನುದಾನ ಬಿಡುಗಡೆಗೆ ಮನವಿ

Contributed by: kvkampli@gmail.com|Vijaya Karnataka•
request for funding for gangavathi darojirailway route
ಗಂಗಾವತಿ-ದರೋಜಿ ರೈಲ್ವೆ ಮಾರ್ಗಕ್ಕೆ ಅನುದಾನ ಬಿಡುಗಡೆಗೆ ಮನವಿ

ವಿಕ ಸುದ್ದಿಲೋಕ ಕಂಪ್ಲಿ
ಗಂಗಾವತಿ-ದರೋಜಿ ರೈಲ್ವೆ ಮಾರ್ಗಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಬೆಂಗಳೂರು ಕಚೇರಿಯಲ್ಲಿಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿ ಕೆಲ ಸಂಘ, ಸಂಸ್ಥೆಗಳವರು ಭಾನುವಾರ ಮನವಿ ಸಲ್ಲಿಸಿದರು.

ಗಂಗಾವತಿ ತಾಲೂಕು ರಾಜ್ಯದ ಪ್ರಮುಖ ಭತ್ತದ ನಾಡಾಗಿದೆ. ಅಲ್ಲದೆ ಹಂಪಿ-ಕಿಷ್ಕಿಂದೆ ಹೆಬ್ಬಾಗಿಲು ಜತೆಗೆ ರಾಜ್ಯದ ದೊಡ್ಡ ಎಪಿಎಂಸಿ ಮಾರುಕಟ್ಟೆಯಿದೆ. ಆದರೆ ರೈಲ್ವೆ ಸಂಪರ್ಕದಲ್ಲಿನಾವು ಹಿಂದುಳಿದಿದ್ದೇವೆ. ಹೀಗಾಗಿ ಗಂಗಾವತಿ-ದರೋಜಿ(36 ಕಿ.ಮೀ) ಹೊಸ ರೈಲ್ವೆ ಮಾರ್ಗಕ್ಕೆ ತಕ್ಷಣ ಅನುದಾನ ಬಿಡುಗಡೆ ಮಾಡಬೇಕು. ಗಂಗಾವತಿ-ಮುನಿರಾಬಾದ್ - ಗಿಣಿಗೇರ ಮೂಲಕ ಬಳ್ಳಾರಿಗೆ ತೆರಳಲು 93ಕಿ.ಮೀ. ದೂರವಿದೆ. ಆದರೆ ಗಂಗಾವತಿ-ದರೋಜಿ ನೇರ ಮಾರ್ಗವಾದರೆ 57ಕಿ.ಮೀ ಅಂತರ ಕಡಿಮೆಯಾಗುತ್ತದೆ. ಕಂಪ್ಲಿಮತ್ತು ಸಂಡೂರು ವಿಧಾನಸಭೆ ಕ್ಷೇತ್ರದ ಜನರಿಗೆ ರೈಲ್ವೆ ಸೌಲಭ್ಯ ದೊರೆಯಲಿದೆ. ಈ ಮಾರ್ಗ ಈಗಾಗಲೇ ಸಮೀಕ್ಷೆಯಾಗಿದೆ. ಅನುದಾನದ ಕೊರತೆಯಿಂದ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಇದು ಪೂರ್ಣವಾದರೆ ಗಂಗಾವತಿ-ಬಳ್ಳಾರಿ-ಗುಂತಕಲ್ ನೇರ ಸಂಪರ್ಕ ಕಲ್ಪಿಸುತ್ತದೆ. ಇದು ರೈತರು, ವಿದ್ಯಾರ್ಥಿಗಳು, ವ್ಯಾಪಾರಸ್ಥರಿಗೆ ಅನುಕೂಲವಾಗುತ್ತದೆ. ಹೀಗಾಗಿ 2026-27ನೇ ಸಾಲಿನಲ್ಲಿಈ ಯೋಜನೆಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಕಾಮಗಾರಿ ಆರಂಭಕ್ಕೆ ಯತ್ನಿಸಬೇಕು ಎಂಬುದು ಸೇರಿ ಈ ಭಾಗದ ಕೆಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಮನವಿ ಮಾಡಿದರು. ಪ್ರಮುಖರಾದ ಸುರೇಶ್ ಸಿಂಗನಾಳ, ಎಚ್ .ಎಂ.ಮಂಜುನಾಥ, ಕೆ.ವಿಶ್ವನಾಥಸ್ವಾಮಿ ಇತರಿದ್ದರು.

ಪೊ.ಶೀ.27ಕೆಎಂಪಿ6;-

ಗಂಗಾವತಿ-ದರೋಜಿ ರೈಲ್ವೆ ಮಾರ್ಗಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಬೆಂಗಳೂರು ಕಚೇರಿಯಲ್ಲಿಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿ ಕೆಲ ಸಂಘ, ಸಂಸ್ಥೆದಿಂದ ಮನವಿ ಸಲ್ಲಿಸಲಾಯಿತು.