ಹುಬ್ಬಳ್ಳಿಯ ವಿಹಾನ್ ಹೃದಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಳೆದ ಮೂರು ವರ್ಷದ ಪಯಣವೆಂದರೆ ಅದು ಕೇವಲ ಒಂದು ದಿನಗಳ ದೂಡುವಿಕೆಯಂತಲ್ಲ. ಬದಲಾಗಿ ಇದು ಹೃದಯ ಸಂಬಂಧಿ ಪರಿಣಿತ ತಜ್ಞರು ಒಂದೇ ಉದ್ದೇಶದಡಿ ಒಂದೆಡೆ ಸೇರುವ ಅನನ್ಯ ಪಯಣವಾಗಿದೆ. ಇವರೆಲ್ಲರ ಏಕೈಕ ಉದ್ದೇಶವೆಂದರೆ ಅದು ರೋಗಿಯ ಅತ್ಯುತ್ತಮ ಆರೈಕೆ.
ಅತ್ಯಾಧುನಿಕ ಹೃದಯ ಚಿಕಿತ್ಸೆಯಿಂದ ಆರಂಭಿಸಿ ಮಕ್ಕಳ ಹೃದಯ ಆರೈಕೆ , ಅತಿ ಕಡಿಮೆ ಛೇದನ ಶಸ್ತ್ರಚಿಕಿತ್ಸೆಗಳು, ರೋಬೋಟಿಕ್ ಶಸ್ತ್ರಚಿಕಿತ್ಸೆ, ಗಂಭೀರ ಸ್ಥಿತಿಯಲ್ಲಿನ ಆರೈಕೆ ಮತ್ತು ಬಹುಶಿಸ್ತೀಯ ಚಿಕಿತ್ಸಾ ವಿಧಾನಗಳ ಮೂಲಕ ಹಾಗೂ ದಿನೇ ದಿನೆ ನುರಿತ ತಜ್ಞರ ತಂಡದ ಹೆಚ್ಚಳ ಹಾಗೂ ಪ್ರಯೋಗಾಲಯ ಸಾಮರ್ಥ್ಯಗಳ ವೃದ್ಧಿಯೊಂದಿಗೆ ಸಂಸ್ಥೆಯ ಅಭಿವೃದ್ಧಿಯು ದಿನೇ ದಿನೆ ಬೆಳೆಯುತ್ತಲೇ ಸಾಗಿದೆ.
ಸೆಪ್ಟೆಂಬರ್ 29ರ ವಿಶ್ವ ಹೃದಯ ದಿನದಂದು ರೋಗಿಗಳ ಆರೈಕೆಗೆ ಸಂಬಂಧಿಸಿದ ನಮ್ಮ ಬದ್ಧತೆಯು ಆಸ್ಪತ್ರೆಯ ಹೆಸರು ಬೆಳಗಬೇಕೆಂಬ ಉದ್ದೇಶಕ್ಕಿಂತ ಹೆಚ್ಚಾಗಿ ಕೈಗೆಟುಕುವ ದರದಲ್ಲಿಅವರ ರೋಗ ಪರಿಹಾರಕ್ಕೆ ಸಂಬಂಧಿಸಿದ್ದಾಗಿದೆ ಎಂಬುದು ಕೇವಲ ಆಡಂಬರದ ಹೇಳಿಕೆಯಲ್ಲ. ಇದು ರೋಗಿಗಳಿಗೆ ನಮ್ಮ ಸಂಪೂರ್ಣ ಬದ್ಧತೆಯಾಗಿದೆ.
ಅತ್ಯಾಧುನಿಕ ಹೃದಯ ಆರೈಕೆ ಕೇಂದ್ರ
ವಿಹಾನ್ ಹೃದಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೀಗ ಮೂರು ವರ್ಷ ಪೂರೈಸಿದ ಸಂಭ್ರಮ. ಅತ್ಯಾಧುನಿಕ ಹೃದಯ ಆರೈಕೆ ಕೇಂದ್ರವಾಗಿ, ಕ್ಲಿಷ್ಟಕರ ಮತ್ತು ಸಂಕೀರ್ಣ ಚಿಕಿತ್ಸಾ ಕ್ರಮಗಳು ಮತ್ತು ತಾಂತ್ರಿಕ ನಾವೀನ್ಯತೆಗಳೊಂದಿಗೆ ವಿಹಾನ್ ಆಸ್ಪತ್ರೆ ಆರೋಗ್ಯ ಕ್ಷೇತ್ರದಲ್ಲಿಆರೋಗ್ಯದಾಯಕ ಹೆಜ್ಜೆಗಳನ್ನಿಡುತ್ತಿದೆ.
ಹುಬ್ಬಳ್ಳಿ: ಸೆಪ್ಟೆಂಬರ್ 29ರ ವಿಶ್ವ ಹೃದಯ ದಿನದಂದು ಹುಬ್ಬಳ್ಳಿಯ ವಿಹಾನ್ ಹೃದಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಮೂರು ವರ್ಷಗಳಿಂದ ಉತ್ತಮ ಚಿಕಿತ್ಸೆ ಮತ್ತು ರೋಗಿಗಳ ಆರೈಕೆಯ ಮೂಲಕ ಆರೋಗ್ಯ ಕ್ಷೇತ್ರದಲ್ಲಿತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ಯಾವುದೇ ಆಡಂಬರವಿಲ್ಲದೇ, ಸದ್ದು ಗದ್ದಲವಿಲ್ಲದೇ ಸರಳವಾಗಿ ಆರಂಭವಾದ ಈ ಸಂಸ್ಥೆಯು ಇದೀಗ ಅತ್ಯಾಧುನಿಕ ಹೃದಯ ಚಿಕಿತ್ಸಾ ಕ್ಷೇತ್ರದಲ್ಲಿಮೂಲಸೌಕರ್ಯ, ವಿಶೇಷ ವೈದ್ಯಕೀಯ ಸೇವೆಗಳು, ಆಧುನಿಕ ತಂತ್ರಜ್ಞಾನ ಮತ್ತು ದಿನೇ ದಿನೆ ಬೆಳೆಯುತ್ತಿರುವ ಬಹು ಶಾಸ್ತ್ರೀಯ ತಜ್ಞರ ತಂಡದೊಂದಿಗೆ ನೂರು ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಗಟ್ಟಿಯಾಗಿ ನೆಲೆಯೂರುತ್ತ ಮುನ್ನಡೆಯುತ್ತಿದೆ.
ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಯ ಮೂರನೇ ಮಹಡಿಯಲ್ಲಿಸಣ್ಣ ಪ್ರಮಾಣದಲ್ಲಿಆರಂಭವಾದ ಇದು 2023ರಲ್ಲಿಸ್ವತಂತ್ರ ಹೃದಯ ಆರೈಕೆ ಕೇಂದ್ರವಾಗಿ ಪರಿವರ್ತಿತಗೊಂಡು ನಗರದ ವಿದ್ಯಾನಗರ, ಅಕ್ಷಯ ಕಾಲೊನಿಯಲ್ಲಿಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಸ್ಥಾಪನೆಗೊಂಡ ನಂತರದಿಂದ ಮೂರು ವರ್ಷಗಳ ಅವಧಿಯಲ್ಲಿವಿಹಾನ್ ಹಾರ್ಟ್ ಕೇರ್ ಪ್ರೈವೇಟ್ ಲಿಮಿಟೆಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ವರ್ಷದಿಂದ ವರ್ಷಕ್ಕೆ ತನ್ನ ಮೂಲಸೌಲಭ್ಯಗಳನ್ನು ವಿಸ್ತರಿಸಿಕೊಳ್ಳುತ್ತಿದ್ದು ಹೊಸ ಹೊಸ ಪ್ರಯೋಗಾಲಯ ವಿಭಾಗಗಳನ್ನು ತೆರೆಯುತ್ತ ರೋಗಿಗಳ ಆರೈಕೆಗೆ ಇರುವ ತನ್ನ ಪ್ರತಿಬದ್ಧತೆಯನ್ನು ಮತ್ತೆ ಮತ್ತೆ ಪ್ರತಿಪಾದಿಸುತ್ತಿದೆ. ಜತೆಗೆ ಕ್ಲಿಷ್ಟಕರ ಎನ್ನಬಹುದಾದ ಹಲವು ಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿ ರೋಗಿಗಳನ್ನು ಆರೋಗ್ಯಯುತವಾಗಿ ಅವರವರ ಮನೆಗೆ ಕಳುಹಿಸುವ ಉದಾತ್ತ ಕಾರ್ಯದಲ್ಲಿಆಸ್ಪತ್ರೆಯು ಮುಂಚೂಣಿಯಲ್ಲಿದೆ.
ಆರೋಗ್ಯ ಆರೈಕೆಯಲ್ಲಿವಿಶೇಷ ಗಮನ ನೀಡುವಿಕೆ, ನುರಿತ ಕ್ಲಿನಿಕಲ್ ಅನುಭವ ಹಾಗೂ ತಂತ್ರಜ್ಞಾನ ಹಾಗೂ ರೋಗಿಗಳ ಆರೈಕೆಯಲ್ಲಿಸಮರ್ಪಕ ಸಮನ್ವಯಗಳನ್ನು ಸಾಧಿಸುವುದು- ಈ ಅಂಶಗಳು ವಿಹಾನ್ ಆಸ್ಪತ್ರೆಯ ಮೂರು ವರ್ಷದ ಯಶಸ್ವಿ ಪ್ರಯಾಣದ ಪ್ರಮುಖ ಚಾಲನಾ ಶಕ್ತಿಯಾಗಿವೆ. ಇಂದು ವಿಹಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಭಿವೃದ್ಧಿಯು ಹೃದಯದ ಆರೈಕೆ, ಹೃದಯದ ಶಸ್ತ್ರಚಿಕಿತ್ಸೆ, ತೀವ್ರ ನಿಗಾ ವಹಿಸುವಿಕೆ, ಇಂಟರ್ ವೆನ್ಶನಲ್ ರೇಡಿಯಾಲಜಿ, ನ್ಯೂರಾಲಜಿ, ಗ್ಯಾಸ್ಟೊ್ರೕಎಂಟರಾಲಜಿ, ಯೂರಾಲಜಿ ಮತ್ತು ಇತರ ವಿಶೇಷ ಶಸ್ತ್ರಚಿಕಿತ್ಸಾ ಸೇವೆಗಳನ್ನು ಕಡಿಮೆ ದರದಲ್ಲಿನೀಡಲು ಮುಂದಾಗಿದೆ.
ವಿಹಾನ್ ಹಾರ್ಟ್ ಕೇರ್ ಆ್ಯಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮೂರು ವರ್ಷದ ವಾರ್ಷಿಕೋತ್ಸವ ಎಂದರೆ ಅದು ಕೇವಲ ಕಟ್ಟಡದ ಅಭಿವೃದ್ಧಿ ಅಲ್ಲ. ಇದಕ್ಕೆ ಬದಲಾಗಿ ಆಸ್ಪತ್ರೆಯ ಕ್ಲಿನಿಕಲ್ ಸಾಮರ್ಥ್ಯದ ಬಲಪಡಿಸುವಿಕೆ, ಗುಣಮಟ್ಟದ ಕಾರ್ಯ ವಿಧಾನಗಳು ಮತ್ತು ಶೈಕ್ಷಣಿಕ ಮೈಲಿಗಲ್ಲುಮತ್ತು ವಿಶೇಷ ಶಸ್ತ್ರಚಿಕಿತ್ಸಾ ಸೇವೆಗಳನ್ನು ಒಳಗೊಂಡಿದೆ.
//----
ಆಸ್ಪತ್ರೆಯ ಚಿಕ್ಕ ಫೋಟೋ
//----
ಹೃದಯದ ಮಾತು
· ನಿಮ್ಮ ಹೃದಯದ ಬಗ್ಗೆ ಅರಿತುಕೊಳ್ಳಿ.
· ಅಪಾಯದ ಮುನ್ಸೂಚನೆಗಳನ್ನು ಪತ್ತೆ ಹಚ್ಚಿ.
· ರೋಗ ತಡೆಗಟ್ಟುವ ಆರೋಗ್ಯ ಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿ.
· ಸಕಾಲಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆದುಕೊಳ್ಳಿ.
· ತುರ್ತು ಆರೈಕೆಯನ್ನು ಬೇಡುವ ರೋಗ ಲಕ್ಷಣಗಳನ್ನು ಎಂದಿಗೂ ಕಡೆಗಣಿಸಬೇಡಿ.
ಹೃದಯದ ಆರೈಕೆ ಸುತ್ತ ಹೆಣೆದುಕೊಂಡ ಯಾನ
ಆರಂಭದ ದಿನಗಳಿಂದಲೂ ವಿಹಾನ್ ಆಸ್ಪತ್ರೆಯ ಮುಖ್ಯ ಆಸಕ್ತಿಯ ವಿಷಯವೆಂದರೆ ಮಾನವ ಹೃದಯದ ಆರೋಗ್ಯಪೂರ್ಣ ಆರೈಕೆ. ಆಸ್ಪತ್ರೆಯು ಆರಂಭವಾದುದು ಅತ್ಯಾಧುನಿಕ ಹೃದಯ ಆರೈಕೆ ಮತ್ತು ಶಸ್ತ್ರಚಿಕಿತ್ಸೆಗಳಿಗೆ ಅತ್ಯಗತ್ಯವಾಗಿ ಬೇಕಾದ ಎರಡು ಸುಸಜ್ಜಿತ ಅತ್ಯಾಧುನಿಕ ಕ್ಯಾಥೆಟರೈಸೇಷನ್ ಪ್ರಯೋಗಾಲಯಗಳು, ಎರಡು ಮಾಡ್ಯುಲರ್ ಆಪರೇಷನ್ ಥಿಯೇಟರ್ ಗಳು ಮತ್ತು ಒಂದು ಮೈನರ್ ಆಪರೇಷನ್ ಥಿಯೇಟರ್ ನೊಂದಿಗೆ.
ಆಸ್ಪತ್ರೆ ಬೆಳೆದಂತೆಲ್ಲಅದರ ಮೂಲಭೂತ ಸೌಕರ್ಯ ಮತ್ತು ತಾಂತ್ರಿಕ ಸಾಮರ್ಥ್ಯಗಳೂ ಹೆಚ್ಚುತ್ತ ಹೋದವು. ಆಸ್ಪತ್ರೆಯಲ್ಲಿಆಪ್ಟಿಕಲ್ ಕೋಹೆರೆನ್ಸ್ ಟೋಮೋಗ್ರಫಿ (ಓಸಿಟಿ)ಯನ್ನು ಅಳವಡಿಸಲಾಯಿತು.
ಈ ಸೌಲಭ್ಯಗಳನ್ನು ಹೊಂದಿದ ಬಳಿಕ ಆಸ್ಪತ್ರೆಯ ಕ್ಲಿನಿಕಲ್ ಸೇವೆಗಳನ್ನು ಮತ್ತಷ್ಟು ವಿಸ್ತರಿಸಲು ಅನುಕೂಲ ಮಾಡಿಕೊಟ್ಟಿತು. ಇದರಿಂದಾಗಿ ಸಂಕೀರ್ಣ ರೋಗದ ಪ್ರಕರಣಗಳನ್ನು ಬಹು ಶಾಸ್ತ್ರೀಯ ವ್ಯವಸ್ಥೆಯ ಸಹಕಾರದೊಂದಿಗೆ ಸೇವೆಯನ್ನು ಮತ್ತಷ್ಟು ವಿಸ್ತರಿಸಲು ಸಾಧ್ಯವಾಯಿತು.
ಆಸ್ಪತ್ರೆಯ ವಿಸ್ತರಣಾ ಕಾರ್ಯದಲ್ಲಿಸಂಕೀರ್ಣ ರೋಗಿಗಳ ಸಮಸ್ಯೆಯನ್ನು ಬಹುಶಾಸ್ತ್ರೀಯ ವ್ಯವಸ್ಥೆಯ ಮೂಲಕ ಆಸ್ಪತ್ರೆಯ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶವೂ ಇತ್ತು. ಹೃದಯ ರೋಗ ಶಾಸ್ತ್ರ, ಹೃದಯ ಸಂಬಂಧೀ ಶಸ್ತ್ರಚಿಕಿತ್ಸೆ, ಹೃದಯ ಸಂಬಂಧಿ ಅರಿವಳಿಕೆ, ತೀವ್ರ ನಿಗಾದಲ್ಲಿರುವ ರೋಗಿಗಳ ಆರೈಕೆ, ವಿಕಿರಣ ಶಾಸ್ತ್ರ, ನರ್ಸಿಂಗ್ , ಲ್ಯಾಬೋರೇಟರಿ ಸೇವೆಗಳು, ತಂತ್ರಜ್ಞರು ಮತ್ತು ಇತರ ವಿಭಾಗಗಳ ಕೆಲಸಗಳನ್ನು ಸಮನ್ವಯ ಮಾಡಿ ರೋಗಿಗಳ ಅಗತ್ಯಕ್ಕೆ ತಕ್ಕಂತೆ ಆರೈಕೆ ಮಾಡುವುದು ಆಸ್ಪತ್ರೆಯ ವಿಸ್ತರಣಾ ಕಾರ್ಯದಲ್ಲಿಒಳಗೊಂಡಿತ್ತು. (ಎರಡು ಚಿಕ್ಕ ಚಿತ್ರಗಳಿವೆ.)
ಇದರ ಪರಿಣಾಮವಾಗಿ ಆಸ್ಪತ್ರೆಯ ಬೆಳವಣಿಗೆಯು ಬರೀ ಇತರ ಕಟ್ಟಡಗಳ ಬೆಳವಣಿಗೆ ಮತ್ತು ಉಪಕರಣಗಳ ಸಂಖ್ಯೆಯಲ್ಲಿಹೆಚ್ಚಳ ಮಾತ್ರವಲ್ಲ; ಇವುಗಳ ಜತೆ ಜತೆಗೆ ರೋಗಿಗಳಿಗೆ ಸಂಕೀರ್ಣ ರೋಗಗಳನ್ನು ಗುಣಪಡಿಸುವ ವ್ಯವಸ್ಥೆಯನ್ನೂ ಒಳಗೊಂಡಿದೆ.
ಸಾವಿರಾರು ರೋಗಿಗಳು; ಸಾವಿರಾರು ಚಿಕಿತ್ಸಾ ವಿಧಾನಗಳು
ವಿಹಾನ್ ಹಾರ್ಟ್ ಕೇರ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮೂರು ವರ್ಷಗಳ ಅವಧಿಯಲ್ಲಿನ ವಿಶೇಷ ಸಂಗತಿಯೆಂದರೆ, ಆಸ್ಪತ್ರೆಯು ತನ್ನ ನುರಿತ ತಜ್ಞ ವೈದ್ಯರ ಸಹಾಯ- ಸಹಕಾರದೊಂದಿಗೆ ಕೈಗೊಂಡ ಚಿಕಿತ್ಸಾ ವಿಧಾನಗಳು ವಿಸ್ತಾರವಾದ ಬಗೆಯನ್ನೂ ಎತ್ತಿ ತೋರಿಸುತ್ತದೆ.
ವಿಹಾನ್ ಆಸ್ಪತ್ರೆಯ ವಾರ್ಷಿಕ ಸಾಧನೆಗಳು
· 15 ಸಾವಿರಕ್ಕೂ ಹೆಚ್ಚು ಆ್ಯಂಜಿಯೋಗ್ರಫಿಗಳು
· 10 ಸಾವಿರಕ್ಕೂ ಹೆಚ್ಚು ಆ್ಯಂಜಿಯೋಪ್ಲಾಸ್ಟಿಗಳು
· 2 ಸಾವಿರಕ್ಕೂ ಅಧಿಕ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗಳು
· 2 ಸಾವಿರಕ್ಕೂ ಅಧಿಕ ಸಂಕೀರ್ಣದ ಹೃದಯ ಸಂಬಂಧಿ ಪ್ರಕರಣಗಳ ನಿರ್ವಹಣೆ
· 100ಕ್ಕೂ ಅಧಿಕ ಮಕ್ಕಳ ಶಸ್ತ್ರಚಿಕಿತ್ಸೆಗಳು
· 50ಕ್ಕೂ ಅಧಿಕ ರೋಬೋಟಿಕ್ ಶಸ್ತ್ರಚಿಕಿತ್ಸೆಗಳು
· 200ಕ್ಕೂ ಅಧಿಕ ಇಂಟರ್ ವೆನ್ಶನಲ್ ರೇಡಿಯಾಲಜಿ ವಿಧಾನಗಳು
ಈ ಅಂಕಿ ಅಂಶಗಳು ಕೇವಲ ಸಂಖ್ಯೆಗಳಲ್ಲ; ಬದಲಾಗಿ ವಿಹಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ಚಾಣಾಕ್ಷತೆಯ ಬಗ್ಗೆ ಭರವಸೆಯನ್ನು ಮೂಡಿಸಿದ ಸಂಗತಿಗಳು. ರೋಗ ಪತ್ತೆ, ಸಕಾಲದಲ್ಲಿಶಸ್ತ್ರಚಿಕಿತ್ಸೆ ಮತ್ತು ರೋಗಿಯು ಗುಣಮುಖವಾಗುವ ದಿಸೆಯಲ್ಲಿಸೂಕ್ತ ಚಿಕಿತ್ಸೆ ಮತ್ತು ಔಷಧೋಪಚಾರಗಳನ್ನು ನೀಡುವ ನಿಟ್ಟಿನಲ್ಲಿಹುಬ್ಬಳ್ಳಿ- ಧಾರವಾಡ ಅವಳಿ ನಗರ ಹಾಗೂ ಸುತ್ತಮುತ್ತಲಿನ ಸಾವಿರಾರು ಕುಟುಂಬಗಳು ಇಲ್ಲಿಯ ವೈದ್ಯರ ತಂಡದ ಮೇಲೆ ಅಪಾರ ವಿಶ್ವಾಸ ಹೊಂದಿವೆ.
/----
(ಎರಡು ಚಿತ್ರಗಳಿವೆ)
/----
ಬಹು ವಿಶೇಷ ವಿಧಾನದ ಚಿಕಿತ್ಸೆ
ಹೃದಯದ ಆರೈಕೆ ಕೇಂದ್ರವೆಂದರೆ ಅದು ವಿಹಾನ್ ಆಸ್ಪತ್ರೆ ಮಾತ್ರ, ಬೇರೊಂದಿಲ್ಲಎಂಬ ಅಪರಿಮಿತ ವಿಶ್ವಾಸ ರೋಗಿಗಳಲ್ಲಿಉಳಿದಿದ್ದು, ಆಸ್ಪತ್ರೆಯು ಬಹು ವಿಶೇಷತೆಗಳಲ್ಲಿಹಂತ ಹಂತವಾಗಿ ಮೇಲೇರುತ್ತಿದೆ. ಅದರಂತೆ ಹಂತ ಹಂತವಾಗಿ ಅದರ ಸಾಮರ್ಥ್ಯವನ್ನೂ ಅಭಿವೃದ್ಧಿಪಡಿಸಲಾಗಿದೆ.
ವಿಹಾನ್ ಹಾರ್ಟ್ ಕೇರ್ ಆ್ಯಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವಾರ್ಷಿಕೋತ್ಸವದ ಸಂದರ್ಭದ ವರದಿಯು ಗರ್ಭಾಶಯದ ಫೈಬ್ರಾಯ್ಡ್ ಮಧ್ಯಸ್ಥಿಕೆಗಳು, ಗುರುತುರಹಿತ ಥೈರಾಯ್ಡ್ ಅಬ್ಲೇಶನ್ , ಮೈಕ್ರೋವೇವ್ ಅಬ್ಲೇಶನ್ ಮತ್ತು ಟೇಸ್ ನಂತಹ ಕಾರ್ಯವಿಧಾನಗಳನ್ನು ಒಳಗೊಂಡಂತೆ ಇಂಟರ್ ವೆನ್ಶನಲ್ ರೇಡಿಯಾಲಜಿಯನ್ನು ಎತ್ತಿ ತೋರಿಸುತ್ತದೆ.
ಆಸ್ಪತ್ರೆಯು ಮೂರು ವರ್ಷಗಳ ಅವಧಿಯಲ್ಲಿನ್ಯೂರಾಲಜಿ (ನರರೋಗ ಶಾಸ್ತ್ರ), ಗ್ಯಾಸ್ಟೊ್ರೕಎಂಟರಾಲಜಿ, ಮೂಳೆ ಮುರಿತದ ಶಸ್ತ್ರಚಿಕಿತ್ಸೆ, ಯೂರಾಲಜಿ ಮತ್ತಿತರ ವಿಶೇಷ ಕ್ಷೇತ್ರಗಳಲ್ಲೂತನ್ನ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಿಕೊಂಡಿದ್ದು, ಇವುಗಳಿಗೆ ಪೂರಕವಾಗಿ ಅತ್ಯಾಧುನಿಕ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿಕೊಂಡಿದೆ. ಜತೆಗೆ ಈ ಕ್ಷೇತ್ರಗಳಲ್ಲಿನ ಪರಿಣಿತ ವೈದ್ಯರು ವಿಸಿಟಿಂಗ್ ಕನ್ಸಲ್ಟಂಟ್ ಗಳಾಗಿ ಭೇಟಿ ನೀಡುವ ಸೌಲಭ್ಯಗಳನ್ನೂ ಹೆಚ್ಚು ಮಾಡಿಕೊಂಡಿದೆ.
ರೋಗದ ಸಂಕೀರ್ಣತೆಯು ಹೆಚ್ಚಾಗಿರುವ ಸಂದರ್ಭದಲ್ಲಿಬಹುಶಾಸ್ತ್ರೀಯ ಪರಿಣಿತ ವೈದ್ಯರ ಸಲಹೆ- ಸೂಚನೆಗಳ, ಔಷಧೋಪಚಾರಗಳ ಅವಶ್ಯಕತೆಯೂ ರೋಗವನ್ನು ಗುಣಪಡಿಸುವ ನಿಟ್ಟಿನಲ್ಲಿಅತ್ಯಗತ್ಯವಾಗಿರುತ್ತದೆ. ಇಂಥ ರೋಗಿಗಳಿಗೆ ಒಂದಕ್ಕಿಂತ ಹೆಚ್ಚು ವಿಭಾಗಗಳ ವೈದ್ಯರ ಸಲಹೆಗಳು, ಔಷಧೋಪಚಾರಗಳ ಅಗತ್ಯವಿರುತ್ತದೆ.
ಈ ಎಲ್ಲಸೌಲಭ್ಯಗಳ ವಿಸ್ತರಣೆಯಿಂದಾಗಿ ಈ ಮೊದಲು ಕೇವಲ ಹೃದಯ ಸಂಬಂಧಿ ರೋಗಗಳಿಗೆ ಮಾತ್ರ ಸೀಮಿತವಾಗಿದ್ದ ವಿಹಾನ್ ಹಾರ್ಟ್ ಕೇರ್ ಆ್ಯಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿವಿಧ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯವುಳ್ಳ ಆಸ್ಪತ್ರೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
ಅತಿಕಡಿಮೆ ಛೇದನ, ರೋಬೋಟಿಕ್ ಶಸ್ತ್ರಚಿಕಿತ್ಸೆ
ವಿಹಾನ್ ಹಾರ್ಟ್ ಕೇರ್ ಆ್ಯಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮೂರು ವರ್ಷಗಳ ಅವಧಿಯಲ್ಲಿನ ಮತ್ತೊಂದು ಮಹತ್ವದ ಮೈಲಿಗಲ್ಲುಎಂದರೆ, ಅತಿ ಕಡಿಮೆ ಛೇದನ ಶಸ್ತ್ರಚಿಕಿತ್ಸೆಯಲ್ಲಿಪರಿಣತಿ ಮತ್ತು ರೋಬೋಟ್ ಗಳ ಸಹಾಯದಿಂದ ಶಸ್ತ್ರಚಿಕಿತ್ಸೆ ಕೈಗೊಳ್ಳುವ ಸಾಮರ್ಥ್ಯ. ಇದುವರೆಗೆ ಆಸ್ಪತ್ರೆಯಲ್ಲಿ50ಕ್ಕೂ ಅಧಿಕ ರೋಬೋಟ್ ಆಧಾರಿತ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳಲಾಗಿದ್ದು, ಇದೊಂದು ಸಾರ್ವಕಾಲಿಕ ದಾಖಲೆಯಾಗಿದೆ. ಇದು ಆಸ್ಪತ್ರೆಯ ಕೌಶಲ್ಯಕ್ಕೆ ಸಾಕ್ಷಿ ಎಂದು ವಿಹಾನ್ ಹಾರ್ಟ್ ಕೇರ್ ಆ್ಯಂಡ್ ಸೂಪರ್ ಸ್ಪೆಷಾಲಿಟಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ.
ವಿಮೆ ಸೌಲಭ್ಯ
ವಿಹಾನ್ ಹಾರ್ಟ್ ಕೇರ್ ಆ್ಯಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಇನ್ನೊಂದು ವಿಶೇಷವೆಂದರೆ, ಸರಕಾರಿ ಮತ್ತು ಖಾಸಗಿ ಆರೋಗ್ಯ ಆರೈಕೆ ವಿಮಾ ಯೋಜನೆಗಳು ಮತ್ತು ವಿವಿಧ ಯೋಜನೆಗಳಿಗೆ ತನ್ನನ್ನು ತಾನು ತೆರೆದುಕೊಂಡಿದೆ. ಅಂದರೆ ಈ ವಿಮಾ ಸೌಲಭ್ಯಗಳನ್ನು ಹೊಂದಿರುವವರು ಆಸ್ಪತ್ರೆಯಲ್ಲಿಆರೈಕೆ ಮಾಡಿಸಿಕೊಳ್ಳಬಹುದಾಗಿದೆ. ಸಿಜಿಎಚ್ ಎಸ್ ಎಂಪ್ಯಾನೆಲ್ ಮೆಂಟ್ ಮತ್ತು ಇತರ ಆರೋಗ್ಯ ರಕ್ಷಣಾ ಯೋಜನೆಯ ಸೌಲಭ್ಯಗಳೊಂದಿಗೆ ಖಾಸಗಿ ಆರೋಗ್ಯ ವಿಮೆಯ ಅಡಿಯಲ್ಲಿಬರುವ ರೋಗಿಗಳಿಗೆ ಸಂಸ್ಥೆಯು ಸಮಾಜದ ಎಲ್ಲವರ್ಗದ ಜನರಿಗೆ ವಿಶೇಷ ಮತ್ತು ಸುಧಾರಿತ ಚಿಕಿತ್ಸೆಯನ್ನು ನೀಡುವ ಗುರಿ ಹೊಂದಿದೆ. ಆಸ್ಪತ್ರೆಯ ವಿಮೆ ಮತ್ತು ಬಿಲ್ ಮಾಡುವ ತಂಡಗಳು ರೋಗಿಗಳು ಮತ್ತು ಅವರ ಕುಟುಂಬಗಳಿಗೆ ರೋಗಕ್ಕೆ ಸಂಬಂಧಿಸಿದ ಕಡತ, ಅನುಮೋದನೆ ಮತ್ತು ಕ್ಲೇಮ್ ಸಂಬಂಧಿತ ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಚಿಕಿತ್ಸೆಯ ಆಡಳಿತಾತ್ಮಕ ಭಾಗವನ್ನು ಹೆಚ್ಚು ಸಂಘಟಿತ ಮತ್ತು ಅನುಕೂಲಕರವಾಗಿಸಲು ಸಹಾಯ ಮಾಡುತ್ತದೆ. ಸರಕಾರಿ ಮತ್ತು ಖಾಸಗಿ ಆರೋಗ್ಯ ರಕ್ಷಣಾ ಪಾಲುದಾರಿಕೆಗಳ ಈ ಬೆಳೆಯುತ್ತಿರುವ ಜಾಲವು ಗುಣಮಟ್ಟದ ಮತ್ತು ವಿಶೇಷ ವೈದ್ಯಕೀಯ ಆರೈಕೆಗೆ ಪ್ರವೇಶವನ್ನು ವಿಸ್ತರಿಸುವ ವಿಹಾನ್ ಆಸ್ಪತ್ರೆಯ ಬದ್ಧತೆಯ ಪ್ರಮುಖ ಭಾಗವಾಗಿದೆ.
ಮಕ್ಕಳ ಹೃದಯ ಚಿಕಿತ್ಸೆ: ಒಂದು ವಿಶೇಷ ಜವಾಬ್ದಾರಿ
ವಿಹಾನ್ ಆಸ್ಪತ್ರೆಯ ಮೂರು ವರ್ಷಗಳ ಸಾಧನೆಯಲ್ಲಿಪ್ರಮುಖವಾದ ಅಂಶವೆಂದರೆ ಅದು ಆರಂಭದಿಂದಲೂ ಮಕ್ಕಳ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳುತ್ತಿರುವುದು. ಇದುವರೆಗೆ ನೂರಕ್ಕೂ ಹೆಚ್ಚು ಮಕ್ಕಳ ಹೃದಯ ಸಂಬಂಧಿ ಕಾಯಿಲೆಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಲು ವಿಹಾನ್ ಆಸ್ಪತ್ರೆಯ ವೈದ್ಯರ ತಂಡವು ಶಸ್ತ್ರಚಿಕಿತ್ಸೆಗಳನ್ನು ನಡೆಸಿ ಆರೋಗ್ಯವಂತ ಮಕ್ಕಳ ಬೆಳವಣಿಗೆಗೆ ನೆರವಾಗಿದೆ. ಮಕ್ಕಳ ಹೃದಯ ಆರೈಕೆ ಎಂಬುದು ವಿಶೇಷ ಕ್ಷೇತ್ರವಾಗಿದ್ದು, ಮಕ್ಕಳ ಹೃದಯ ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು, ತೀವ್ರ ನಿಗಾ ಘಟಕ (ಐಸಿಯು), ನರ್ಸಿಂಗ್ ಮತ್ತು ಶಸ್ತ್ರಚಿಕಿತ್ಸೆ ಬಳಿಕ ರೋಗಿಯ ನಿರ್ವಹಣೆಗೆ ಸಂಬಂಧಿಸಿದಂತೆ ವಿಶೇಷ ವಿಭಾಗಗಳ ಸಮರ್ಪಕ ಸಮನ್ವಯದ ಅಗತ್ಯವಿರುತ್ತದೆ.
ಹುಟ್ಟಿನಿಂದಲೇ ಹೃದಯದ ದೋಷಗಳನ್ನು ಹೊಂದಿರುವ ಅಥವಾ ಸಂಕೀರ್ಣವಾದ ಹೃದಯ ಚಿಕಿತ್ಸೆಗಳ ಅಗತ್ಯವಿರುವ ಮಕ್ಕಳ ಕುಟುಂಬಗಳಿಗೆ, ವಿಶೇಷ ಹೃದಯ ಚಿಕಿತ್ಸಾ ಸೇವೆಗಳ ಲಭ್ಯತೆಯು ವಿಶೇಷವಾಗಿ ಮುಖ್ಯವಾಗಬಹುದು. ಹೃದಯದ ದೋಷವಿರುವ ಮಕ್ಕಳ ಆರೈಕೆ ಕ್ಷೇತ್ರದಲ್ಲಿಕೆಲಸ ಮಾಡುತ್ತಿರುವುದು ವಿಹಾನ್ ಹಾರ್ಟ್ ಕೇರ್ ಆ್ಯಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವಿಶೇಷಗಳಲ್ಲಿಒಂದಲ್ಲದೇ ಮಹತ್ವದ್ದು ಕೂಡ ಆಗಿದೆ.
ವಿದ್ಯಾಸಂಸ್ಥೆಯನ್ನು ಸ್ಥಾಪನೆ ಯೋಜನೆ
ಆರೋಗ್ಯ ಆರೈಕೆ ಎಂಬುದು ಕೇವಲ ವೈದ್ಯರ ಮತ್ತು ತಂತ್ರಜ್ಞಾನ ಪರಿಕರಗಳ ಹೊಣೆಗಾರಿಕೆ ಮಾತ್ರವಲ್ಲ. ಕೌಶಲಯುತ, ಕರುಣಾಮಯಿ ಮತ್ತು ಉತ್ತಮ ರೀತಿಯಲ್ಲಿತರಬೇತಿ ಪಡೆದ ನರ್ಸ್ ಗಳ ಅವಶ್ಯಕತೆಯನ್ನೂ ಒಳಗೊಂಡಿರುತ್ತದೆ. ಈ ನಿಟ್ಟಿನಲ್ಲಿಇದರ ಮಹತ್ವವನ್ನು ಅರಿತು ವಿಹಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಮುಂಬರುವ ವರ್ಷಗಳಲ್ಲಿವಿಹಾನ್ ಇನ್ ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಎಂಬ ವಿದ್ಯಾಸಂಸ್ಥೆಯನ್ನು ಸ್ಥಾಪಿಸಲು ಮುಂದಾಗಿದೆ.
/----
ಚಿತ್ರ ಇದೆ.
/----
ನರ್ಸಿಂಗ್ ಇನ್ ಸ್ಟಿಟ್ಯೂಟ್ ಸ್ಥಾಪನೆಯು ವಿಹಾನ್ ನ ದೂರದೃಷ್ಟಿಯ ಒಂದು ಭಾಗವಾಗಿದೆ. ಅಂದರೆ ಕೇವಲ ಆರೋಗ್ಯ ಸೇವೆಗಳನ್ನು ಒದಗಿಸುವುದಕ್ಕೆ ಮಾತ್ರವೇ ತನ್ನನ್ನು ತಾನು ಸೀಮಿತಗೊಳಿಸಿಕೊಳ್ಳದೇ, ವಿಹಾನ್ ಆಸ್ಪತ್ರೆಯು ಭವಿಷ್ಯಕ್ಕಾಗಿ ತರಬೇತಿ ಪಡೆದ ಆರೋಗ್ಯ ವೃತ್ತಿಪರರ ಅಭಿವೃದ್ಧಿಗೂ ಕೊಡುಗೆ ನೀಡುವ ಹಂತಕ್ಕೆ ಇದು ಕೈಹಾಕಿದೆ.
ಇಂದಿನ ದಿನಗಳಲ್ಲಿಆಸ್ಪತ್ರೆಗಳು ಹೆಚ್ಚು ಹೆಚ್ಚಾಗಿ ವಿಶೇಷ ಅಥವಾ ಪ್ರತ್ಯೇಕವಾಗುತ್ತಿರುವುದರಿಂದ ಮತ್ತು ರೋಗಿಗಳ ಆರೈಕೆಗೆ ಹೆಚ್ಚಿನ ವೈದ್ಯಕೀಯ ಜ್ಞಾನ ಮತ್ತು ತಾಂತ್ರಿಕ ಕೌಶಲ್ಯದ ಮತ್ತು ತಂಡದ ರೀತಿಯಲ್ಲಿಕೆಲಸ ಮಾಡುವುದು ಅಗತ್ಯವಿರುವುದರಿಂದ ದಾದಿಯರ ಪಾತ್ರ ಎಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ. ರೋಗಿಯ ರೋಗ ನಿರ್ವಹಣೆ ಅಥವಾ ಗುಣಪಡಿಸುವಿಕೆಯ ಪ್ರಯಾಣದ ಪ್ರತಿ ಹಂತದಲ್ಲೂದಾದಿಯರು ಪ್ರಮುಖವಾಗಿ ಇದ್ದೇ ಇರುತ್ತಾರೆ. ಪ್ರವೇಶ ಮತ್ತು ಮೌಲ್ಯಮಾಪನದಿಂದ ಚಿಕಿತ್ಸೆಯ ಹಂತದಲ್ಲಿಮಾತ್ರವಲ್ಲ, ರೋಗಿಗಳ ಮೇಲ್ವಿಚಾರಣೆ, ಅವರ ಚೇತರಿಕೆ ಮತ್ತು ಅವರು ಗುಣಮುಖರಾಗಿ ಮನೆಗೆ ಡಿಸ್ಚಾಜ್ ರ್ ಆಗುವ ಹಂತದವರೆಗೆ ದಾದಿಯರ ಪಾತ್ರ ಬಹುಮುಖ್ಯ ಎಂಬುದನ್ನು ಅಲ್ಲಗಳೆಯಲಾಗದು.
ಆದ್ದರಿಂದ ನರ್ಸಿಂಗ್ ಸಂಸ್ಥೆಯು ಶೈಕ್ಷಣಿಕ ಉಪಕ್ರಮಕ್ಕಿಂತ ಹೆಚ್ಚಿನದು ಎಂಬುದರಲ್ಲಿಅನುಮಾನವೇ ಇಲ್ಲ. ಶಿಕ್ಷಣ, ಕ್ಲಿನಿಕಲ್ ಎಕ್ಸ್ ಪೋಜರ್ ಮತ್ತು ರೋಗಿಯ ಆರೈಕೆಯ ನಡುವೆ ಬಲವಾದ ಸಂಪರ್ಕವನ್ನು ಸೃಷ್ಟಿಸುವುದು ವಿಶಾಲ ದೃಷ್ಟಿಕೋನದ ಒಂದು ಭಾಗವಾಗಿದೆ.
ನರ್ಸಿಂಗ್ ಶಿಕ್ಷಣವನ್ನು ಓದುವ ವಿದ್ಯಾರ್ಥಿಗಳಿಗೆ ಕೇವಲ ತರಗತಿ ಆಧಾರಿತ ಕಲಿಕೆ ಮಾತ್ರವಲ್ಲದೇ ನೈಜ ಕ್ಲಿನಿಕಲ್ ಪರಿಸರಗಳಿಗೆ ಒಡ್ಡಿಕೊಳ್ಳುವುದು ಸಹ ಅಗತ್ಯವಾಗಿರುತ್ತದೆ. ಬೆಳೆಯುತ್ತಿರುವ ಸೂಪರ್ - ಸ್ಪೆಷಾಲಿಟಿ ಆರೋಗ್ಯ ರಕ್ಷಣಾ ಪರಿಸರ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿರುವುದರಿಂದ ರೋಗಿಗಳ ಆರೈಕೆಯ ಪ್ರಾಯೋಗಿಕ ವಾಸ್ತವಗಳೊಂದಿಗೆ ಶೈಕ್ಷಣಿಕ ಕಲಿಕೆಯನ್ನು ಜೋಡಿಸಲು ಇದು ಅವಕಾಶ ನೀಡುತ್ತದೆ.
ಮೂರು ವರ್ಷಗಳ ಹಿಂದೆ ಸ್ಥಾಪನೆಗೊಂಡ ವಿಹಾನ್ ಹಾರ್ಟ್ ಕೇರ್ ಆ್ಯಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪಯಣದಲ್ಲಿಈ ಸಂಸ್ಥೆಯ ಜೋಡಣೆಯು ಮತ್ತೊಂದು ಆಯಾಮ ಎಂದರೆ ತಪ್ಪಾಗಲಾರದು. ಅತ್ಯಾಧುನಿಕ ಹೃದಯ ಮತ್ತು ಸೂಪರ್ ಸ್ಪೆಷಾಲಿಟಿ ಆರೋಗ್ಯ ಸೇವೆಗಳನ್ನು ಅಭಿವೃದ್ಧಿಪಡಿಸುವುದರಿಂದ ಹಿಡಿದು ನರ್ಸಿಂಗ್ ಶಿಕ್ಷಣಕ್ಕೆ ಮೀಸಲಾದ ಸಂಸ್ಥೆಯನ್ನು ಸ್ಥಾಪಿಸುವವರೆಗೆ, ಸಂಸ್ಥೆಯು ಕ್ರಮೇಣ ಆರೋಗ್ಯ ಕ್ಷೇತ್ರದೊಳಗೆ ತನ್ನ ಪಾತ್ರವನ್ನು ವಿಸ್ತರಿಸುತ್ತಿದೆ.
ವಿಹಾನ್ ನ ಈ ಪಯಣವು ಇಂದು ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವುದಕ್ಕೆ ಮಿಗಿಲಾಗಿ ನಾಳೆ ರೋಗಿಗಳಿಗೆ ಕಾಳಜಿ ವಹಿಸುವ ಆರೋಗ್ಯ ವೃತ್ತಿಪರರನ್ನು ಸಿದ್ಧಪಡಿಸುವವರೆಗೆ ವಿಸ್ತರಿಸುವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.
/----
ವಿಹಾನ್ ಆಸ್ಪತ್ರೆಯ ಲೋಗೋ ಇದೆ.
/----
ಆರೋಗ್ಯ ಆರೈಕೆಯ ಹೊಸ ಯುಗ
ವಿಹಾನ್ ನಿಂದ ಶೀಘ್ರದಲ್ಲಿಹೊಸ ಬಹುವಿಶೇಷತೆಯುಳ್ಳ ಆಸ್ಪತ್ರೆಯ ಸ್ಥಾಪನೆ ದೃಷ್ಟಿಕೋನದ ವಿಸ್ತರಣೆ; ಆರೋಗ್ಯ ಆರೈಕೆಯ ಆಯಾಮಗಳನ್ನು ಮತ್ತಷ್ಟು ಬಲಪಡಿಸುವುದು. ಪ್ರತಿಯೊಂದು ಜೀವಿಯ ಸೇವೆ.
ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್
ಅತ್ಯಾಧುನಿಕ ತಂತ್ರಜ್ಞಾನ, ಕ್ಲಿನಿಕಲ್ ಶ್ರೇಷ್ಠತೆಯನ್ನು ಹೊಂದಿರುವ ವಿಹಾನ್ ನಿಂದ ಶೀಘ್ರದಲ್ಲೇ ವಿಹಾನ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಆರಂಭವಾಗಲಿದೆ. ಈ ಹೊಸ ಸೌಲಭ್ಯವು ಈಗಿರುವ ಸೌಲಭ್ಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯನ್ನು ಹೊಂದಿದೆ. ಈ ಮೂಲಕ ಇನ್ನೂ ಹೆಚ್ಚು ಹೆಚ್ಚು ರೋಗಿಗಳನ್ನು ಗುಣಮಟ್ಟದ ಚಿಕಿತ್ಸೆ ಮತ್ತು ಸೇವೆಯೊಂದಿಗೆ ತಲುಪುವ ಗುರಿ ಹೊಂದಲಾಗಿದೆ.
ಹೊಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸೌಲಭ್ಯಗಳು
· ಮುಂದುವರಿದ ವೈದ್ಯಕೀಯ ಮೂಲಸೌಕರ್ಯಗಳು
· ಆಧುನಿಕ ರೋಗ ಪತ್ತೆ ವ್ಯವಸ್ಥೆ ಮತ್ತು ಚಿಕಿತ್ಸಾ ವಿಧಾನಗಳು
· ಮಲ್ಟಿ ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಸೇವೆಗಳು
· ಸಮಗ್ರ ತೀವ್ರ ನಿಗಾ ಘಟಕ
· ಅನುಭವಿ ಸಮಾಲೋಚಕ ವೈದ್ಯರ ತಂಡ ಮತ್ತು ಸೇವೆಗೆ ಸಂಪೂರ್ಣ ಬದ್ಧರಾದ ಕ್ಲಿನಿಕಲ್ ತಂಡಗಳು
· ರೋಗಿ- ಕೇಂದ್ರಿತ ಆರೋಗ್ಯ ಆರೈಕೆ
· ಗುಣಮಟ್ಟ, ಸುರಕ್ಷತೆ ಮತ್ತು ಕ್ಲಿನಿಕಲ್ ನಲ್ಲಿಶ್ರೇಷ್ಠತೆ
· ವಿವಿಧ ಸ್ಪೆಷಾಲಿಟಿ ಘಟಕಗಳ ಮಧ್ಯೆ ನಿರಂತರ ಮತ್ತು ಅಬಾಧಿತವಾದ ಸಹಕಾರ
ವಿಹಾನ್ ಯಶಸ್ಸಿನ ಮುಖ್ಯ ಶಕ್ತಿ
ಹುಬ್ಬಳ್ಳಿಯ ವಿಹಾನ್ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಪೂರ್ವ ಬೆಳವಣಿಗೆಯು ಸಂಸ್ಥೆಯ ಅಧ್ಯಕ್ಷ ಡಾ.ವಿಜಯಕೃಷ್ಣ ಕೋಳೂರ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಶ್ವೇತಾ ಕೋಳೂರ ಅವರ ಬದ್ಧತೆ, ಕಠಿಣ ಪರಿಶ್ರಮ ಮತ್ತು ರೋಗಿಗಳ ಸೇವೆ ಮಾಡಬೇಕೆಂಬ ಕಳಕಳಿಯ ನಿದರ್ಶನವಾಗಿದೆ. ರೋಗಿಗಳಿಗೆ ಸುಧಾರಿತ ವೈದ್ಯಕೀಯ ಸೇವೆ ಒದಗಿಸಬೇಕೆಂಬ ಅವರ ದೃಢವಾದ ಬದ್ಧತೆ, ವೈದ್ಯಕೀಯ ಹಾಗೂ ಸಹಾಯಕ ತಂಡಗಳಿಗೆ ಅವರು ನೀಡುವ ನಿರಂತರ ಪ್ರೋತ್ಸಾಹ ಮತ್ತು ರೋಗಿಗಳಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿಅವರ ಅಪಾರ ಆಸಕ್ತಿಯು ವಿಹಾನ್ ನ ಮೂರು ವರ್ಷಗಳ ಪಯಣವನ್ನು ರೂಪಿಸುವಲ್ಲಿಪ್ರಮುಖ ಪಾತ್ರ ವಹಿಸಿವೆ. ಅವರ ದೂರದೃಷ್ಟಿ ಹಾಗೂ ನಾಯಕತ್ವ ಗುಣವು ಶ್ರೇಷ್ಠತೆಯನ್ನು ಸಾಧಿಸಲು ಹಾಗೂ ಪ್ರತಿಯೊಬ್ಬ ರೋಗಿಗೂ ಗುಣಮಟ್ಟದ ಮತ್ತು ಸಹಾನುಭೂತಿಯುಳ್ಳ ಆರೈಕೆಯನ್ನು ಒದಗಿಸಲು ಬದ್ಧರಾಗಿರಲು ಇಡೀ ‘ವಿಹಾನ್ ’ ಪರಿವಾರಕ್ಕೆ ನಿರಂತರವಾಗಿ ಸ್ಫೂರ್ತಿ ನೀಡುತ್ತವೆ.