ವರ್ಕಾಡಿ ಗಡಿ ಪ್ರದೇಶವಾದ ನರಿಂಗಾನ ಬಾವಳಿಗುಳಿಯಲ್ಲಿ12ನೇ ವರ್ಷದ ಗಣೇಶೋತ್ಸವವು 14ರಂದು ಅದ್ಧೂರಿಯಾಗಿ ಜರುಗಲಿದೆ.ಅಂದು ಬೆಳಗ್ಗೆ ವರ್ಕಾಡಿ ದಿನೇಶ್ ಕೃಷ್ಣ ತಂತ್ರಿ ಮುಂದಾಳತ್ವದಲ್ಲಿವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಮಧ್ಯಾಹ್ನ ಮಹಾಪೂಜೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.ಶಾಂತಿಪಳಿಕೆ ಶ್ರೀ ಮಹಮ್ಮಾಯ ಭಜಕ ವೃಂದದವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 11:30ರಿಂದ ದತ್ತಾಂಜನೇಯ ಕಲಾಬಳಗ ರಾಮಾಡಿ ಕಣ್ವತೀರ್ಥದ 70 ಕಲಾವಿದರಿಂದ ಭರತ ವರ್ಷ ವೈಭವ, ಮಧ್ಯಾಹ್ನ 1:30ರಿಂದ ಫ್ರೆಂಡ್ಸ್ ಮಂಗಳೂರು ಅವರಿಂದ ’ತೆಲಿಕೆ ಬಾಯಿ ನಿಲಿಕೆ’ ಎಂಬ ಹಾಸ್ಯ ಕಾರ್ಯಕ್ರಮ, ಸಂಜೆ 3:30ರಿಂದ ಶ್ರೀ ದುರ್ಗಾ ನಾಟ್ಯಾಲಯ ಅವರಿಂದ ಶಾಸ್ತ್ರೀಯ ಹಾಗೂ ಜಾನಪದ ನೃತ್ಯ ಸಂಗಮ ನಡೆಯಲಿದೆ.
ನಂತರ ಗಣಪತಿ ಪೂಜೆ, ಸುಡು ಮದ್ದು ಸೇವೆ ನಡೆದು ಗಣೇಶನ ಭವ್ಯ ಶೋಭಾ ಯಾತ್ರೆಯು ಕೆದುಂಬಾಡಿ ನೆತ್ತಿಲ ಪದವು ಬಾವಳಿಗುಳಿ, ತೌಡುಗೋಳಿಯಾಗಿ ಶಾಂತಿಪಳಿಕೆ ಮಾರಿಗುಡಿ ಬಳಿ ಕೆರೆಯಲ್ಲಿವಿಸರ್ಜಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.