ತೋಕೂರು: ಸೆ. 13ರಂದು ತೆನೆಹಬ್ಬ

Contributed byhkhejmadybs@gmail.com|Vijaya Karnataka
tnehebh in tokoor on sep 13 and laksha tulasi archane in shimanturu
ಮೂಲ್ಕಿ: ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿಸೆ. 13ರಂದು ಬೆಳಗ್ಗೆ 6ಕ್ಕೆ ತೆನೆಹಬ್ಬ ನಡೆಯಲಿದೆ. ಸೆ.14ರಂದು ಗಣೇಶ ಚತುರ್ಥಿಯ ಪ್ರಯುಕ್ತ ಬೆಳಗ್ಗೆ ಗಣಹೋಮ ಮಧ್ಯಾಹ್ನ ಮಹಾಪೂಜೆ ಹಾಗೂ ಸಂಜೆ ಗಣಪತಿ ರಂಗಪೂಜೆ ಹಾಗೂ ಗಣಪತಿ ದೇವರಿಗೆ ಅಪ್ಪದಸೇವೆ ನಡೆಯಲಿದೆ.ಸೆ. 15ರಂದು ಸಂಜೆ 4ಕ್ಕೆ ಮೊಸರುಕುಡಿಕೆ, ಸಂಜೆ 6.30ಕ್ಕೆ ಗಣಪತಿ ವಿಸರ್ಜನೆ ನಡೆಯಲಿದೆ.

**
ಶಿಮಂತೂರು : 17ರಂದು ಲಕ್ಷ ತುಳಸಿ ಅರ್ಚನೆ, ನೂತನ ಭೋಜನ ಶಾಲೆ ಅತಿಥಿ ಗೃಹ, ವಿಶಾಲ ಸಭಾಂಗಣ ಲೋಕಾರ್ಪಣೆ

ಮೂಲ್ಕಿ: ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಶಿಮಂತೂರು ಶ್ರೀದಿ ಜನಾರ್ದನ ದೇವಸ್ಥಾನದಲ್ಲಿಸೆ.17ರಂದು ಬೆಳಗ್ಗೆ ದೇವರಿಗೆ ಲಕ್ಷ ತುಳಸಿ ಅರ್ಚನೆ ಬಳಿಕ 11 ಗಂಟೆಗೆ ನೂತನವಾಗಿ ನಿರ್ಮಾಣಗೊಂಡಿರುವ ನೂತನ ಭೋಜನ ಶಾಲೆ, ನಾಲ್ಕು ಸುಸಜ್ಜಿತ ಅತಿಥಿ ಗೃಹಗಳು ಹಾಗೂ ವಿಶಾಲ ಸಭಾಂಗಣದ ಲೋಕಾರ್ಪಣಾ ಕಾರ್ಯಕ್ರಮ ನಡೆಯಲಿದೆ. ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಬೆಂಗಳೂರು ಎಂ.ಆರ್ .ಜಿ. ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಡಾ.ಪಿ.ವಿ. ಶೆಟ್ಟಿ, ದ.ಕ.ಜಿಲ್ಲಾಧಾರ್ಮಿಕ ಪರಿಷತ್ ಸದಸ್ಯ ಸುಬ್ರಹ್ಮಣ್ಯ ಪ್ರಸಾದ್ ಕೊರಿಯಾರ್ ಮತ್ತಿತರರು ಉಪಸ್ಥಿತರಿರುವರು ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಉದಯ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.