ವಿದ್ಯುತ್ ವ್ಯತ್ಯಯ ಇಂದು

Contributed byayyanagowdara@gmail.com|Vijaya Karnataka
power cut areas today
ವಿದ್ಯುತ್ ವ್ಯತ್ಯಯ ಇಂದು

ಹಗರಿಬೊಮ್ಮನಹಳ್ಳಿ : ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿತಾಲೂಕಿನ 66/11 ಕೆ.ವಿ.ವಿದ್ಯುತ್ ವಿತರಣೆ ಉಪಕೇಂದ್ರಗಳಾದ ಹನಸಿ, ಕೋಗಳಿ, ಮೋರಿಗೇರಿ, ಹಂಪಸಾಗರ ಮತ್ತು ತಂಬ್ರಹಳ್ಳಿ ವ್ಯಾಪ್ತಿಯ ಗ್ರಾಮಗಳಲ್ಲಿಸೆ.10ರಂದು ಬೆಳಗ್ಗೆ 10ರಿಂದ ಸಂಜೆ 6ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ. ಅಂದು ತಾಲೂಕಿನ ಕೋಗಳಿ, ತಾಂಡಾ, ಅಲಬೂರು, ಅಂಬಳಿ, ಕುಡತಿನಮಗ್ಗಿ, ದಿಬ್ಬದಹಳ್ಳಿ, ಕೆ.ಕೋಡಿಹಳ್ಳಿ, ಹೊಸಕೇರಿ, ಆನೇಕಲ್ , ಕಣಿವಾನಾಯಕನಹಳ್ಳಿ, ಕಲ್ಲಹಳ್ಳಿ ತಾಂಡಾ, ಬೆಣ್ಣೆಕಲ್ಲು, ಉಪ್ಪಾರಗಟ್ಟಿ, ಹೊಸ್ಕೇರಿ, ದಶಮಾಪುರ, ಅನೇಕಲ್ , ಮೋರೆಗೇರಿ, ಸೊನ್ನ, ಗದ್ದಿಕೇರಿ, ಬನ್ನಿಕಲ್ಲು, ಜಿ.ಕೋಡಿಹಳ್ಳಿ, ನಂದಿಪುರ, ಹಂಪಸಾಗರ ಸೇರಿ ಸುತ್ತಲಿನ ಗ್ರಾಮಗಳಲ್ಲಿವಿದ್ಯುತ್ ನಿಲುಗಡೆಯಾಗಲಿದೆ ಎಂದು ಜೆಸ್ಕಾಂ ಎಇಇ ಆರ್ .ಹೇಮರೆಡ್ಡಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.