ಚೇತರಿಸಿದ ತೋಟಗಾರಿಕೆ ಟೆಕ್ನಾಲಜಿ ಪಾರ್ಕ್ !ಶ್ರೀಕಾಂತ ಅಕ್ಕಿ ಕೊಪ್ಪಳ
ಏಷ್ಯಾದ ಮೊದಲ ತೋಟಗಾರಿಕೆ ಟೆಕ್ನಾಲಜಿ ಪಾರ್ಕ್ ನಿರ್ಮಾಣದ ಕಾಮಗಾರಿಯೂ ಕನಕಗಿರಿ ತಾಲೂಕಿನ ಸಿರಿವಾರದಲ್ಲಿಚುರುಕುಗೊಂಡಿದ್ದು ಬಂಡವಾಳ ಹೂಡಲು 5 ಕಂಪನಿಗಳು ಮುಂದೆ ಬಂದಿವೆ.
ಕಾಮಗಾರಿಗೆ ಜಿಲ್ಲಾಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಚಾಲನೆ ನೀಡಿದ್ದಾರೆ. 240 ಎಕರೆ ಪ್ರದೇಶದಲ್ಲಿಬೆಳೆದ ಮುಳ್ಳು-ಜಾಲಿ, ಕಂಟಿಗಳನ್ನು ಹಿಟಾಚಿ ಮತ್ತು ಜೆಸಿಬಿ ಮೂಲಕ ಸ್ವಚ್ಛಗೊಳಿಸಿ, ನೆಲವನ್ನು ಸಮತಟ್ಟು ಮಾಡಲಾಗುತ್ತಿದೆ. ಬಳಿಕ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲೇ ಐದು ಕಂಪನಿಗಳು ಬಂಡವಾಳ ಹೂಡಿಕೆಗೆ ಮುಂದೆ ಬಂದಿರುವುದು ಯೋಜನೆಗೆ ಶುಕ್ರದೆಸೆ ಆರಂಭವಾಗಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿಅನುಷ್ಠಾನಗೊಳ್ಳಲಿರುವ ಯೋಜನೆ ಕುರಿತು ಬೆಂಗಳೂರಿನಲ್ಲಿಸಭೆ ನಡೆಸಿ ಚರ್ಚಿಸಲಾಗಿದೆ. ದೇಶದ ಪ್ರಮುಖ ಐದು ಕಂಪನಿಗಳು ಬಂಡವಾಳ ಹೂಡಲು ಆಸಕ್ತಿ ತೋರಿಸಿವೆ. ಮತ್ತೊಂದು ಸಭೆ ನಡೆಸಿ ಅಂತಿಮ ಹಂತದ ಚರ್ಚೆ ಪೂರ್ಣಗೊಳಿಸುವುದು ಬಾಕಿಯಿದೆ.
ಏನಿದು ಯೋಜನೆ?: ಮಾಜಿ ಸಿಎಂ ಬಿ.ಎಸ್ . ಯಡಿಯೂರಪ್ಪ ನೇತೃತ್ವದ ಸರಕಾರ 2020ರ ಬಜೆಟ್ ನಲ್ಲಿತೋಟಗಾರಿಕೆ ಟೆಕ್ನಾಲಜಿ ಪಾರ್ಕ್ ಸ್ಥಾಪಿಸುವುದಾಗಿ ಘೋಷಿಸಲಾಗಿತ್ತು. ಘೋಷಣೆಯಾದ ಬಳಿಕ ಯೋಜನೆ ನನೆಗುದಿಗೆ ಬಿದ್ದಿತ್ತು. ಖಾಸಗಿ ಕಂಪನಿಗಳ ಸಹಯೋಗದಲ್ಲಿಒಟ್ಟು 240 ಎಕರೆ ಪ್ರದೇಶದಲ್ಲಿಯೋಜನೆ ರೂಪಿಸಲಾಗಿತ್ತು. ಆದರೆ, ಬದಲಾದ ಪರಿಸ್ಥಿತಿಯಲ್ಲಿಯೋಜನೆ ಅನುಷ್ಠಾನ ವಿಳಂಬವಾಗಿತ್ತು.
ಮೂಲಸೌಕರ್ಯ ಕಲ್ಪಿಸಿದರೆ ದೇಶ-ವಿದೇಶಗಳ ಕಂಪನಿಗಳು ಬಂಡವಾಳ ಹೂಡಬಹುದು ಎಂಬ ಉದ್ದೇಶದಿಂದ ಯೋಜನೆ ರೂಪಿಸಲಾಗಿತ್ತು. ಆದರೆ, ಹಿಂದಿನ ಸರಕಾರದ ನಿರ್ಲಕ್ಷ್ಯದಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಆದರೆ ಸಚಿವ ಶಿವರಾಜ್ ತಂಗಡಗಿ, ಕ್ಷೇತ್ರಕ್ಕೆ ಘೋಷಿಸಲಾಗಿದ್ದ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂಬ ಉದ್ದೇಶದಿಂದ ಕಳೆದ 2-3 ವರ್ಷಗಳಿಂದ ಪ್ರಯತ್ನ ನಡೆಸಿದ್ದಾರೆ. ಇದರ ಫಲವಾಗಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ್ ಹಾಗೂ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣ ಉಕ್ಕುಂದ ಅವರ ನಿರಂತರ ಸಚಿವರೊಂದಿಗೆ ಸಮನ್ವಯ ಸಾಧಿಸಿದ್ದಾರೆ. ಮೂಲಸೌಕರ್ಯ ಕಲ್ಪಿಸಲು ಕೆಕೆಆರ್ ಡಿಬಿಯಿಂದ 10 ಕೋಟಿ ರೂ. ಅನುದಾನ ದೊರೆತಿದೆ. ಸರಕಾರದಿಂದ ಇನ್ನೂ 2 ಕೋಟಿ ರೂ. ಅನುದಾನ ಬರಬೇಕಿದೆ. ಉಳಿದ 80 ಕೋಟಿ ರೂ. ಖಾಸಗಿ ಕಂಪನಿಗಳು ಒಡಂಬಡಿಕೆ ಮೂಲಕ ಹೂಡಿಕೆ ಮಾಡಲಿವೆ.
===
ನೆರೆ ಜಿಲ್ಲೆಯ ಬೆಳೆಗಾರರಿಗೆ ಅನುಕೂಲ
ವರ್ಷದಿಂದ ವರ್ಷಕ್ಕೆ ಕೊಪ್ಪಳ ತೋಟಗಾರಿಕೆ ಹಬ್ ಆಗಿ ಬೆಳೆಯುತ್ತಿದೆ. ಜಿಲ್ಲೆಯ ಏಳು ತಾಲೂಕುಗಳಲ್ಲೂರೈತರು ತೋಟಗಾರಿಕೆ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿಬೆಳೆಯುತ್ತಿದ್ದಾರೆ.
ತೋಟಗಾರಿಕೆ ಟೆಕ್ನಾಲಜಿ ಪಾರ್ಕ್ ಆರಂಭವಾದರೆ ರೈತರಿಗೆ ಮಾತ್ರವಲ್ಲದೆ ಸುತ್ತಲಿನ 10 ಜಿಲ್ಲೆಗಳ ತೋಟಗಾರಿಕೆ ಬೆಳೆಗಾರರಿಗೂ ಅನುಕೂಲವಾಗಲಿದೆ. ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ,
ಸಂಗ್ರಹಣೆ ಹಾಗೂ ಮಾರುಕಟ್ಟೆ ವ್ಯವಸ್ಥೆಗೆ ಪಾರ್ಕ್ ಸಹಕಾರಿಯಾಗಲಿದೆ.
===========
ಕೋಟ್
ಕನಕಗಿರಿ ತಾಲೂಕಿನ ಸಿರಿವಾರದಲ್ಲಿನಿರ್ಮಿಸಲು ಉದ್ದೇಶಿಸಿರುವ ತೋಟಗಾರಿಕೆ ಟೆಕ್ನಾಲಜಿ ಪಾರ್ಕ್ಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಹಿಂದಿನ ಬಿಜೆಪಿ ಸರಕಾರ ಅನುದಾನ ಒದಗಿಸದ ಕಾರಣ ಯೋಜನೆ ವಿಳಂಬವಾಗಿತ್ತು. ಸರಕಾರ ಮೂಲಸೌಕರ್ಯಕ್ಕೆ ಅನುದಾನ ನೀಡಿದೆ. ಯೋಜನೆ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು. - ಶಿವರಾಜ್ ತಂಗಡಗಿ, ಜಿಲ್ಲಾಉಸ್ತುವಾರಿ ಸಚಿವರು, ಕೊಪ್ಪಳ
========
ಕೋಟ್
ಟೆಕ್ನಾಲಜಿ ಪಾರ್ಕ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾಮಗಾರಿ ಆರಂಭವಾಗಿದ್ದು, ಭೂಮಿ ಸ್ವಚ್ಛತಾ ಕಾರ್ಯ ಮುಕ್ತಾಯದ ಹಂತದಲ್ಲಿದೆ. ಯೋಜನೆಯಡಿ ತೊಡಗಿಸಿಕೊಳ್ಳಲು ಕಂಪನಿಗಳು ಮುಂದೆ ಬಂದಿವೆ. ಸಾರ್ವಜನಿಕರ ಸಹಭಾಗಿತ್ವದಲ್ಲಿಯೋಜನೆ ಅನುಷ್ಠಾನಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು. - ಕೃಷ್ಣ ಉಕ್ಕುಂದ, ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಕೊಪ್ಪಳ
ಚಿತ್ರ ವಿವರಣೆಗಳು:
ತೋಟಗಾರಿಕೆ ಪಾರ್ಕ್ ಕಾಮಗಾರಿಯ ಭಾಗವಾಗಿ ಸ್ವಚ್ಛತಾ ಕಾರ್ಯ ಆರಂಭವಾಗಿರುವುದು.