4 ತಿಂಗಳ ನೀರಿನ ಸೋರುವಿಕೆಗೆ ಕೊನೆಗೂ ಪರಿಹಾರ

Contributed bycrastalp19@gmail.com|Vijaya Karnataka
final solution to 4 months of water leakage installation of new pipes
ಜಲಪ್ರಾಧಿಕಾರದ ಒಡೆದ ಸಿಮೆಂಟ್ ಪೈಪ್ ಗಳು ತೆರವು

ಕಾಸರಗೋಡು: ಪಡುವಡ್ಕ-ಕೋಪ ರಸ್ತೆಯಲ್ಲಿಅಂಗನವಾಡಿಗೆ ತೆರಳುವ ಮುನ್ನ ನಾಲ್ಕು ಸ್ಥಳಗಳಲ್ಲಿತಿಂಗಳುಗಳಿಂದ ಕುಡಿಯುವ ನೀರು ಪೋಲಾಗುತ್ತಿದ್ದ ಜಲಪ್ರಾಧಿಕಾರದ ಹಳೆಯದಾದ ಸಿಮೆಂಟ್ ಪೈಪ್ ಗಳನ್ನು ತೆರವು ಮಾಡಿ ಸೋಮವಾರ ಬದಲಿ ಪೈಪ್ ಗಳನ್ನು ಅಳವಡಿಸಲಾಯಿತು.
ತಿಂಗುಳುಗಳಿಂದ ನೀರು ಸೋರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ನಾಗರಿಕರು ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಒಡೆದ ಪೈಪ್ ಗಳನ್ನು ದುರಸ್ತಿಗೊಳಿಸದೇ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣಗಿತ್ತು. ಇದರಿಂದ ಜಲಪ್ರಾಧಿಕಾರ ಕಾಸರಗೋಡು ವಿಭಾಗೀಯ ಸಹಾಯಕ ಕಾರ ್ಯ ನಿರ್ವಾಹಕ ಎಂಜಿನಿಯರ್ ಪೈಪ್ ಗಳನ್ನು ತೆರವುಗೊಳಿಸಲು ತುರ್ತು ಆದೇಶ ನೀಡಿದ್ದರು.ಕುಡಿಯುವ ನೀರು ಪೋಲಾಗುವುದಲ್ಲದೆ ರಸ್ತೆಯಲ್ಲಿಕೆಸರು, ನೀರು ಕಟ್ಟಿ ನಿಂತು ರಸ್ತೆ ಹಾನಿಗೀಡಾಗಲು ಕಾರಣವಾಗಿತ್ತು. ಪೈಪ್ ತೆರವುಗೊಳಿಸಿದ್ದರಿಂದ ಈ ಪ್ರದೇಶದ ಕುಡಿಯುವ ನೀರು ವಿತರಣೆಯು ಸಾಮಾನ್ಯ ಸ್ಥಿತಿಗೆ ತಲುಪಿರುವುದಾಗಿಯೂ, ಪೈಪ್ ಗಳು ಒಡೆದು ಕುಡಿಯುವ ನೀರು ಪೋಲಾಗುವುದನ್ನು ತಡೆಗಟ್ಟಲು ಹಳೆಯದಾದ ಪೈಪ್ ಗಳನ್ನು ತೆರವುಗೊಳಿಸಿ ಹೊಸ ಪೈಪ್ ಗಳನ್ನು ಸ್ಥಾಪಿಸಬೇಕು ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.

ಚಿತ್ರ: 8ಕೆಎಸ್ ಎಲ್ ಪೈಪ್