ವಿದ್ಯುತ್ ಬೆಳಕಿಗಾಗಿ ಜೆನ್ ಜಿ ಪ್ರತಿಭಟನೆ

Contributed bymhkhnl25@gmail.com|Vijaya Karnataka
gen z students protest for street lights a fight against darkness in honnali
ಕಿಕ್ಕರ್ : ಹೊನ್ನಾಳಿಯ ಹತ್ತಾರು ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

----
ವಿದ್ಯುತ್ ಬೆಳಕಿಗಾಗಿ ಜೆನ್ ಜಿ ಪ್ರತಿಭಟನೆ

ವಿಕ ಸುದ್ದಿಲೋಕ ಹೊನ್ನಾಳಿ

ಪಟ್ಟಣದಲ್ಲಿಹಾದು ಹೋಗಿರುವ ರಾಜ್ಯ ಹೆದ್ದಾರಿ, ಜಿಲ್ಲಾಮುಖ್ಯ ರಸ್ತೆಗಳಲ್ಲಿಅಳವಡಿಸಿರುವ ಅಲಂಕಾರಿಕ ವಿದ್ಯುತ್ ಬೀದಿ ದೀಪಗಳು ಐದಾರು ವರ್ಷಗಳಿಂದ ಬೆಳಕು ನೀಡುತ್ತಿಲ್ಲಎಂದು ಆರೋಪಿಸಿ ಪಟ್ಟಣದ ನಾನಾ ಕಾಲೇಜುಗಳ ವಿದ್ಯಾರ್ಥಿಗಳು ಬುಧವಾರ ಪಟ್ಟಣದಲ್ಲಿಪ್ರತಿಭಟನೆ ನಡೆಸಿದರು.

ನಾನಾ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಜಮಾಯಿಸಿ ಪ್ರತಿಭಟನೆ ನಡೆಸಿ, ಮನವಿ ಪತ್ರವನ್ನು ಉಪವಿಭಾಗಾಧಿಕಾರಿಗಳ ಕಚೇರಿಗೆ ಸಲ್ಲಿಸಿ ಹಿಂಬರಹವನ್ನು ಪಡೆದುಕೊಂಡರು.

‘ಕೋಟ್ಯಂತರ ರೂ. ಖರ್ಚು ಮಾಡಿ ಅಲಂಕಾರಿಕ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಆದರೆ, ಬೀದಿಗಳು ಮಾತ್ರ ಬೆಳಗುತ್ತಿಲ್ಲ. ಆದ್ದರಿಂದ ಕೂಡಲೇ ಪುರಸಭೆಯವರು ಹಾಗೂ ಸಂಬಂಧಪಟ್ಟ ಇಲಾಖೆಯವರು ಬೀದಿ ದೀಪಗಳು ಬೆಳಕು ನೀಡುವಂತೆ ಕ್ರಮ ಕೈಗೊಳ್ಳಬೇಕು’ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

‘ಕಳೆದ ಐದಾರು ವರ್ಷಗಳಿಂದ ಬೀದಿ ದೀಪಗಳು ಬೆಳಗುತ್ತಿಲ್ಲ. ಇದರಿಂದ ಹೊನ್ನಾಳಿ ಪಟ್ಟಣ ಇಡೀ ರಾತ್ರಿ ಕತ್ತಲೆಯಲ್ಲಿಮುಳುಗಿರುತ್ತದೆ. ಹಬ್ಬ ಹರಿದಿನಗಳಲ್ಲಿಮಾತ್ರ ಬೀದಿ ದೀಪಗಳನ್ನು ಬೆಳಗುವಂತೆ ವಿದ್ಯುತ್ ಅಲಂಕಾರ ಮಾಡುವವರಿಗೆ ಗುತ್ತಿಗೆ ನೀಡಿರುತ್ತಾರೆ. ಅದನ್ನು ಹೊರತುಪಡಿಸಿದರೆ ಇಡೀ ರಾತ್ರಿ ಎಲ್ಲಿನೋಡಿದರೂ ಕತ್ತಲು ಆವರಿಸಿರುತ್ತದೆ’ ಎಂದು ವಿದ್ಯಾರ್ಥಿಗಳ ಆರೋಪಿಸಿದರು.

ಪ್ರತಿಭಟನೆಯಲ್ಲಿವಿದ್ಯಾರ್ಥಿಗಳಾದ ಸಚಿನ್ ಕವಳಿ, ಗೌಸ್ ದಾದಾ, ದಚ್ಚು ಬೀರೇಶ್ , ಅಭಿಷೇಕ್ , ಮನೋಜ್ ಕೆಫೆ, ತರುಣ್ , ಆದಿತ್ಯ, ನರಸಿಂಹ, ಸಿದ್ದೇಶ್ , ಯೋಗಿತಾ ಕುಂಬಾರ ಸೇರಿದಂತೆ ಯುವಕರು ಭಾಗವಹಿಸಿದ್ದರು.

-----

ಬಾಕ್ಸ್ ...

ವಿದ್ಯುತ್ ಗಾಗಿ ಶಾಸಕರಿಗೆ ಮನವಿ

‘ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಟ್ರಾಫಿಕ್ ಸಿಗ್ನಲ್ ಅಳವಡಿಸಿಲ್ಲ, ಅಪಘಾತಗಳು ಸಂಭವಿಸಿದ್ದು, ಕೆಲವರ ಜೀವಗಳು ಹೋಗಿವೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ದುರ್ಗಿಗುಡಿ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿಬೀದಿ ದೀಪಗಳು ಅಲ್ಲಲ್ಲಿಬೆಳಗುವುದಿಲ್ಲ. ಇದರಿಂದ ಪುರಸಭೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷತ್ರ್ಯ ವಹಿಸಿದ್ದಾರೆ. ರಸ್ತೆಗಳಲ್ಲಿಗುಂಡಿಗಳು ಬಿದ್ದಿದ್ದು, ಬೀದಿ ದೀಪಗಳು ಇಲ್ಲದಿರುವುದರಿಂದ ರಸ್ತೆಯಲ್ಲಿನ ಗುಂಡಿಗಳು ಕಾಣದೇ ಎಷ್ಟೋ ಜನ ಕೈಕಾಲು ಮುರಿದುಕೊಂಡಿದ್ದು, ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಶಾಸಕ ಡಿ.ಜಿ. ಶಾಂತನಗೌಡ ಅವರು ಬೀದಿ ದೀಪಗಳು ಬೆಳಗುವಂತೆ ಕ್ರಮ ಕೈಗೊಳ್ಳಬೇಕು’ ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.

----

9ಎಚ್ ಎನ್ ಎಲ್ 3

ಹೊನ್ನಾಳಿಯಲ್ಲಿಹಾದು ಹೋಗಿರುವ ರಾಜ್ಯ ಹೆದ್ದಾರಿ, ಜಿಲ್ಲಾಮುಖ್ಯ ರಸ್ತೆಗಳಲ್ಲಿಅಳವಡಿಸಿರುವ ಅಲಂಕಾರಿಕ ವಿದ್ಯುತ್ ಬೀದಿ ದೀಪಗಳು ಐದಾರು ವರ್ಷಗಳಿಂದ ಬೆಳಕು ನೀಡುತ್ತಿಲ್ಲಎಂದು ಆರೋಪಿಸಿ ಪಟ್ಟಣದ ನಾನಾ ಕಾಲೇಜುಗಳ ವಿದ್ಯಾರ್ಥಿಗಳು ಬುಧವಾರ ಪಟ್ಟಣದಲ್ಲಿಪ್ರತಿಭಟನೆ ನಡೆಸಿದರು.