ವಿಕ ಸುದ್ದಿಲೋಕ ಬೆಂಗಳೂರುಹಾಲಿ ಚಾಂಪಿಯನ್ ಅಲ್ಪೈನ್ ಎಪಿಎಲ್ ಪೈಪರ್ಸ್ ತಂಡವು ತನ್ನ ನಿಕಟ ಪ್ರತಿಸ್ಪರ್ಧಿ ಚೆಕ್ ಮುಂಬಾ ಮಾಸ್ಟರ್ಸ್ ವಿರುದ್ಧ ಸತತ 2ನೇ ಜಯ ಗಳಿಸಿ ಅಂಕಪಟ್ಟಿಯಲ್ಲಿಅಗ್ರಸ್ಥಾನಕ್ಕೇರಿದೆ. ಮತ್ತೊಂದೆಡೆ, ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ ತಂಡವನ್ನು ಮಣಿಸಿದ ಗಂಗಸ್ ಗ್ರ್ಯಾಂಡ್ ಮಾಸ್ಟರ್ಸ್ ಆರು ಸುತ್ತುಗಳ ಬಳಿಕ ಎರಡನೇ ಸ್ಥಾನಕ್ಕೆ ಜಿಗಿದಿದೆ.
ಜಾಗತಿಕ ಚೆಸ್ ಲೀಗ್ ನ ನಾಲ್ಕನೇ ಆವೃತ್ತಿಯ ಐದನೇ ದಿನದ ಸ್ಪರ್ಧೆಯ ಮೊದಲ ಪಂದ್ಯದಲ್ಲಿಪೈಪರ್ಸ್ ತಂಡವು ಮುಂಬಾ ಮಾಸ್ಟರ್ಸ್ ವಿರುದ್ಧ 11-6 ಅಂತರದ ಗೆಲುವು ದಾಖಲಿಸಿತು. ಬಳಿಕ ಗಂಗಸ್ ತಂಡವು ಎರಡು ಬಾರಿಯ ಚಾಂಪಿಯನ್ ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ ತಂಡವನ್ನು 15-3 ಅಂತರದಿಂದ ಮಣಿಸಿತು. ಮುಂಬಾ ಮಾಸ್ಟರ್ಸ್ ಮತ್ತೊಂದು ಪಂದ್ಯದಲ್ಲಿಪಿಬಿಜಿ ಅಲಾಸ್ಕನ್ ನೈಚ್ ವಿರುದ್ಧವೂ 6-11 ಅಂತರದಿಂದ ಸೋಲು ಕಂಡಿತು.
ಬುಧವಾರ ಬಿಳಿ ಕಾಯಿಗಳೊಂದಿಗೆ ಆಡಿದ ಪೈಪರ್ಸ್ ಆಟಗಾರರು ಬಹುತೇಕ ಬೋರ್ಡ್ ಗಳಲ್ಲಿಸಂಪೂರ್ಣ ಹಿಡಿತ ಸಾಧಿಸಿದರು. ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾಲ್ ರ್ ಸನ್ 31ನೇ ನಡೆಗಳಲ್ಲಿಮ್ಯಾಕ್ಸಿಮ್ ವಾಚಿಯರ್ -ಲಾಗ್ರೇವ್ ಅವರನ್ನು ಮಣಿಸಿದರು.