ಜೆನ್ ಜಿ ಕನಸಿನ ಭಾರತ

Contributed bygurudatta.bhat@timesofindia.com|Vijaya Karnataka
agricultural rights the dream india of gen z
ಜೆನ್ ಜಿ ರೈತರಿಗೆ ಬೇಕು ಸ್ಪೂರ್ತಿ

ಕೃಷಿಕರಾಗಲು ಯುವ ಜನತೆಗೂ ಬಹಳಷ್ಟು ಆಸಕ್ತಿಯಿದೆ. ಆದರೆ ರೈತನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಿರುವುದು ಯುವಕರನ್ನು ಈ ಕ್ಷೇತ್ರದಿಂದ ದೂರವಿಡುತ್ತಿದೆ.
ರೈತನ ಶ್ರಮ ಕೇವಲ ಆತನ ಕುಟುಂಬದ ಬದುಕಿಗೆ ಸೀಮಿತವಲ್ಲ. ದೇಶದ ಪ್ರತಿಯೊಬ್ಬರ ಊಟದ ಹಿಂದೆ ಆತನ ಬೆವರಿನ ಹನಿಗಳಿವೆ. ಆದರೆ ಅನ್ನ ನೀಡುವ ಕೈಗೆ ಆರ್ಥಿಕ ಭದ್ರತೆ ಸಿಗದಿರುವುದು ಇಂದಿಗೂ ದೊಡ್ಡ ಸವಾಲಾಗಿದೆ.

ಆಧುನಿಕ ತಂತ್ರಜ್ಞಾನ ಬಳಸಿ ಉತ್ತಮ ಗುಣಮಟ್ಟದ ಕೃಷಿ ಮಾಡಲು ಸಾಧ್ಯವಿದ್ದರೂ ಸರಕಾರದಿಂದ ಅಗತ್ಯ ಪ್ರೋತ್ಸಾಹ, ಬಂಡವಾಳ ಹೂಡಿಕೆಗೆ ಕೈ ಹಿಡಿಯುವ ಹಣಕಾಸು ಸಂಸ್ಥೆಗಳ ನೆರವು ಇನ್ನೂ ಬೇಕಿದೆ. ಒಂದೊಮ್ಮೆ ಮೊದಲ ಪ್ರಯತ್ನದಲ್ಲಿಹಿನ್ನಡೆಯಾದರೂ ನೆರವು ನೀಡಬಹುದಾದ ಕೈಗಳ ಅಗತ್ಯವಿದೆ.

ಬೀಜ ಬಿತ್ತುವಾಗಿನಿಂದ ಫಸಲು ಮನೆ ಸೇರುವವರೆಗೂ ರೈತನಿಗೆ ನೂರಾರು ಸವಾಲುಗಳು ಎದುರಾಗುತ್ತವೆ. ಕೃಷಿ ಉಳಿಯಬೇಕಾದರೆ ರೈತನ ಬದುಕು ಉಳಿಯಬೇಕು. ಸೂಕ್ತ ಬೆಲೆ, ಸಮಯಕ್ಕೆ ಸಾಲ, ಗುಣಮಟ್ಟದ ಬೀಜ-ಗೊಬ್ಬರ ಹಾಗೂ ವೈಜ್ಞಾನಿಕ ಮಾರ್ಗದರ್ಶನ ದೊರೆತರೆ ಕೃಷಿ ಮತ್ತಷ್ಟು ಬಲಿಷ್ಠವಾಗಬಹುದು. ಯುವಜನತೆ ಕೃಷಿಯತ್ತ ಆಕರ್ಷಿತರಾಗಲು ಸಾಧ್ಯ.

-ಸಮೀರ್ ಜಿ. ಹುದ್ದಾರ, ಪ್ರಥಮ ಪಿಯುಸಿ, ಎಂಆರ್ ಎಂ ಕಾಲೇಜ್ , ಹಾವೇರಿ

ಫೋಟೊ: 9 ಗುರುದತ್ತ 1: ಸಮೀರ್ ಹುದ್ದಾರ