ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2024 ಮತ್ತು 2025ನೇ ಸಾಲಿನ ಪುಸ್ತಕ ಬಹುಮಾನ ಪ್ರಕಟಿಸಲಾಗಿದೆ. 2024ರ ಸಾಲಿನ ಕವಿತೆ ವಿಭಾಗದ ಪುರಸ್ಕಾರಕ್ಕೆ ಯಶೋದಾ ಮೋಹನ್ ಅವರ ‘ತಡ್ಯ ಕಡಪುನಗ’ ಕೃತಿ ಆಯ್ಕೆಯಾಗಿದೆ. 2024ನೇ ಸಾಲಿನ ನಾಟಕ ಪುಸ್ತಕ ವಿಭಾಗದ ಪುರಸ್ಕಾರಕ್ಕೆ ಅಕ್ಷತಾರಾಜ್ ಪೆರ್ಲ ಅವರ ‘ಮಂದಾರ ಮಲಕ’ ಕೃತಿ ಆಯ್ಕೆಯಾಗಿದೆ.2025ನೇ ಸಾಲಿನ ಕಾದಂಬರಿ ವಿಭಾಗದ ಪುರಸ್ಕಾರಕ್ಕೆ ರೂಪಕಲಾ ಆಳ್ವ ಅವರ ‘ಪಮ್ಮಕ್ಕೆನ ಪೊರ್ ಂಬಾಟ’ ಕೃತಿ ಆಯ್ಕೆಯಾಗಿದೆ. 2025ನೇ ಸಾಲಿನ ಕವಿತೆ ವಿಭಾಗದ ಪುರಸ್ಕಾರಕ್ಕೆ ಅಶೋಕ ಎನ್ .ಕಡೇಶಿವಾಲಯ ಅವರ ‘ಬದ್ ್ಕ ಬಾಗ್ಯೊದ ಬೊಲ್ಪು’ ಕೃತಿ ಆಯ್ಕೆಯಾಗಿದೆ. ಈ ಪುರಸ್ಕಾರ ತಲಾ 25ಸಾವಿರ ರೂ.ಗಳ ಬಹುಮಾನ ಮೊತ್ತ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಅ.4ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.