ಪೊನ್ನಂಪೇಟೆ ತಾಲೂಕಿನ ನೆಮ್ಮಲೆ ಗ್ರಾಮದ ಬೊಮ್ಮಂಜಿ ನದಿ ದಡದ ರಿವರ್ ರಾರ ಯಫ್ಟಿಂಗ್ ಸ್ಥಳದಲ್ಲಿಸರಕಾರಿ ಜಾಗದಲ್ಲಿಯಾವುದೇ ಅನುಮತಿ ಹಾಗೂ ಪರವಾನಗಿ ಇಲ್ಲದೆ ಕ್ಯಾಂಟೀನ್ ಮಾದರಿಯ ಶೆಡ್ ನಿರ್ಮಿಸಲಾಗಿದ್ದು, ಅಲ್ಲಿಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ನೆಮ್ಮಲೆ ಗ್ರಾಮಾಭಿವೃದ್ಧಿ ಸಮಿತಿ ಪ್ರಮುಖರು ಆರೋಪಿಸಿದ್ದಾರೆ.
‘‘ಬರಪೊಳೆ ರಿವರ್ ರಾರ ಯಫ್ಟಿಂಗ್ ನಡೆಯುವ ನದಿ ದಡದಲ್ಲಿಕೆಲವು ವ್ಯಕ್ತಿಗಳು ಅನುಮತಿ ಇಲ್ಲದೆ ಶೆಡ್ ನಿರ್ಮಿಸಿಕೊಂಡು ಮದ್ಯ ಸೇವನೆ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳಲ್ಲಿತೊಡಗಿದ್ದಾರೆ,’’ ಎಂದು ಗ್ರಾಮ ಸಮಿತಿ ಸದಸ್ಯ ಚೆಟ್ಟಂಗಡ ರಂಜು ಕರುಂಬಯ್ಯ ಸುದ್ದಿಗೋಷ್ಠಿಯಲ್ಲಿಆರೋಪಿಸಿದರು.
‘‘ಅಕ್ರಮ ಶೆಡ್ ನಿಂದ ಗ್ರಾಮದಲ್ಲಿಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಸರಕಾರಿ ಜಾಗದಲ್ಲಿಯಾವುದೇ ಅನುಮತಿ ಮತ್ತು ಪರವಾನಗಿ ಇಲ್ಲದೆ ನಿರ್ಮಿಸಿರುವ ಶೆಡ್ ನ್ನು ಕೂಡಲೇ ತೆರವುಗೊಳಿಸಬೇಕು,’’ ಎಂದು ಆಗ್ರಹಿಸಿದರು.
ನೆಮ್ಮಲೆ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಂಞಂಗಡ ಬಿ.ಕೃಷ್ಣ, ಕಾರ್ಯದರ್ಶಿ ಮಾಣೀರ ಉಮೇಶ್ , ಮಾಜಿ ಅಧ್ಯಕ್ಷರಾದ ಮಾಣೀರ ವಿಜಯ್ ನಂಜಪ್ಪ, ಚೆಟ್ಟಂಗಡ ಡಾಲಿ ಹಾಗೂ ಗ್ರಾಮಸ್ಥ ಚೆಟ್ಟಂಗಡ ಕಾರ್ಯಪ್ಪ ಉಪಸ್ಥಿತರಿದ್ದರು.
ಫೋಟೊ: ಎಂಡಿಕೆ08ಎನ್ ನೆಮ್ಮಲೆ ಪ್ರೆಸ್ ಮೀಟ್
ಕ್ಯಾಪ್ಷನ್ : ಸುದ್ದಿಗೋಷ್ಠಿಯಲ್ಲಿನೆಮ್ಮಲೆ ಗ್ರಾಮಾಭಿವೃದ್ಧಿ ಸಮಿತಿ ಪ್ರಮುಖರು ಮಾತನಾಡಿದರು.