ಇಂದು ಬಳಸಿ.....

Contributed byutkolekar@gmail.com|Vijaya Karnataka
farmers protest by locking hescom office demanding continuous power supply
ಹೆಸ್ಕಾಂ ಕಚೇರಿಗೆ ಬೀಗ ಹಾಕಿ ರೈತರ ಪ್ರತಿಭಟನೆ

ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹ
ವಿಕ ಸುದ್ದಿಲೋಕ ಇಂಡಿ

‘‘ಹಗಲು ಹೊತ್ತು 7 ತಾಸು ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು’’ ಎಂದು ಆಗ್ರಹಿಸಿ ರೈತರು ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು.

ಶಿರಶ್ಯಾಡದ ರೈತ ಮುಖಂಡ ಬಾಳು ಮುಳಜಿ ಮಾತನಾಡಿ, ‘‘ವಿದ್ಯುತ್ ಸರಬರಾಜಿನಲ್ಲಿಪದೇ ಪದೆ ವ್ಯತ್ಯಯ ಉಂಟಾಗುತ್ತಿದೆ. ರಾತ್ರಿ 3ರಿಂದ ಬೆಳಗ್ಗೆ 10ರವರೆಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ರಾತ್ರಿ 10ರ ನಂತರ ಸಿಂಗಲ್ ಫೇಜ್ ವಿದ್ಯುತ್ ನೀಡಲಾಗುತ್ತಿದೆ. ಅನೇಕ ಕಡೆ ವಿದ್ಯುತ್ ವ್ಯತ್ಯಯದಿಂದ ವಿದ್ಯಾರ್ಥಿಗಳು ಹಾಗೂ ರೈತರು ತೊಂದರೆ ಅನುಭವಿಸಬೇಕಾಗುತ್ತಿದೆ. ಆದ್ದರಿಂದ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸಿ ಅನುಕೂಲ ಮಾಡಿಕೊಡಬೇಕು’’ ಎಂದು ಒತ್ತಾಯಿಸಿದರು.

ಹೆಸ್ಕಾಂ ಅಧಿಕಾರಿಗಳು ಹಗಲು 7 ಗಂಟೆ ನಿರಂತರ ವಿದ್ಯುತ್ ಪೂರೈಕೆಯ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆಯನ್ನು ಹಿಂಪಡೆದರು. 500ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿಭಾಗವಹಿಸಿದ್ದರು.

ಅನೀಲಗೌಡ ಬಿರಾದಾರ, ಭೀಮಾಶಂಕರ ಮಸಳಿ, ಅಶೋಕ ಅಕಲಾದಿ, ಪ್ರಶಾಂತ ಲಾಳಸಂಗಿ, ಮಲ್ಲುದೇವರ, ರಾಮು ಮೇತ್ರಿ, ರಾಜು ಕಟಕಧೋಂಡ, ಮೋಹನ ಮೇತ್ರಿ, ಕುಮಾರ ಪ್ರಚಂಡಿ, ಬಾಗೇಶ.ಎಚ್ , ಪ್ರಶಾಂತ ಅವಟಿ, ಜ್ಯೋತಿಬಾ ಕದಂ, ದಶರಥ ಕದಂ, ಇರಸಂಗಪ್ಪ ನೂಲೂರ ಮತ್ತಿತರರಿದ್ದರು.

ಫೋಟೋ- 9 ಇಂಡಿ 01

ನಿರಂತರ ವಿದ್ಯುತ್ ಆಗ್ರಹಿಸಿ ರೈತರು ಇಂಡಿ ಹೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.