ಗುಡಸ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 1.66 ಕೋಟಿ ಲಾಭ

Contributed bypressbasu78@gmail.com|Vijaya Karnataka
gudas agricultural producers cooperative society achieves 166 crore profit celebrating the 97th annual general meeting
ವಿಕ ಸುದ್ದಿಲೋಕ ಹುಕ್ಕೇರಿ

ತಾಲೂಕಿನ ಗುಡಸ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಪ್ರಸಕ್ತ ಸಾಲಿನಲ್ಲಿ1. 66 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ನರಸನ್ನವರ ಹೇಳಿದರು.
ಗ್ರಾಮದಲ್ಲಿಬುಧವಾರ ನಡೆದ ಸಂಘದ 97ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘‘ಸದಸ್ಯರಿಗೆ ಶೇ. 25 ರಷ್ಟು ಡಿವಿಡೆಂಡ್ ನೀಡಲಾಗಿದೆ. ಈ ಸಂಸ್ಥೆಯು ಶಿರಢಾಣ, ಝಾಂಗಟಿಹಾಳ, ಗುಡಸ ಮತ್ತು ಕೊಟಬಾಗಿ ಗ್ರಾಮಗಳ ಕಾರ್ಯವ್ಯಾಪ್ತಿಯಲ್ಲಿಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ,’’ ಎಂದು ತಿಳಿಸಿದರು.

ಮಹಾಸಭೆಯಲ್ಲಿವಾರ್ಷಿಕ ವರದಿ ಮಂಡಿಸಿದ ಮುಖ್ಯ ಕಾರ್ಯನಿರ್ವಾಹಕ ಎಸ್ .ಎಸ್ . ಮಲ್ಲಾಪೂರೆ, ‘‘ಸಂಘವು 2,798 ಸದಸ್ಯರನ್ನೊಳಗೊಂಡಿದ್ದು, 1.74 ಕೋಟಿ ರೂ. ಶೇರು ಬಂಡವಾಳ, 73. 04 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. 43.13 ಕೋಟಿ ರೂ. ಠೇವಣಿ ಸಂಗ್ರಹವಾಗಿದ್ದು, 51.81 ಕೋಟಿ ಸಾಲ ವಿತರಿಸಲಾಗಿದೆ,’’ ಎಂದು ವಿವರಿಸಿದರು. ಇದೇ ವೇಳೆ ನಿವೃತ್ತ ಯೋಧರನ್ನು ಹಾಗೂ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಗೌರವಿಸಿ ಸನ್ಮಾನಿಸಲಾಯಿತು. ಅಕಾಲಿಕವಾಗಿ ಮೃತಪಟ್ಟ 16 ಸದಸ್ಯರ ವಾರಸುದಾರರಿಗೆ ಒಟ್ಟು 22 ಲಕ್ಷ ರೂ. ಮೊತ್ತದ ವಿಮಾ ಪರಿಹಾರದ ಚೆಕ್ ಗಳನ್ನು ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷ ರಾಯಪ್ಪಾ ಡೂಗ, ನಿರ್ದೇಶಕರಾದ ಸದಾನಂದ ಹಿರೇಮಠ, ಶಿದಗೌಡ ಪಾಟೀಲ, ಬಾಬು ಜಾರಕಿಹೊಳಿ, ಅಲಗೌಡ ದೊಡ್ಡನ್ನವರ, ಅಡಿವೆಪ್ಪಾ ಮಗದುಮ್ಮ, ಮಹಾದೇವಿ ಪಾಟೀಲ, ಮೀನಾಕ್ಷಿ ಚಂದರಗಿ, ರಾಜು ಬಂಗಾರಿ, ಮಲಗೌಡ ದೇಸಾಯಿ ಹಾಗೂ ಮುಖಂಡರಾದ ಭೀಮಗೌಡ ಪಾಟೀಲ, ಬಸವರಾಜ ಮರಡಿ, ಗುರುಲಿಂಗ ಮಲ್ಲಾಪೂರೆ, ಶಿವಲಿಂಗ ನಾಯಿಕ, ರಾಜಶೇಖರ ಕರೋಶಿ, ಸತ್ಯಪ್ಪಾ ಚಂದರಗಿ, ಶಿವನಗೌಡ ಪಾಟೀಲ ಮತ್ತು ಘಟಿಗೆಪ್ಪಾ ಪೋಕಳಿ ಉಪಸ್ಥಿತರಿದ್ದರು. ಸಿಇಒ ಶಿವಾನಂದ ಮಲ್ಲಾಪೂರೆ ಸ್ವಾಗತಿಸಿದರು. ಆರ್ .ಜಿ. ನೇರ್ಲಿ, ಬಸವರಾಜ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಸುನಿಲ ಮುದಿಗೌಡ ವಂದಿಸಿದರು.

-09ಹುಕ್ಕೇರಿ2

ಗುಡಸ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 97ನೇ ವಾರ್ಷಿಕ ಮಹಾಸಭೆಯನ್ನು ಆಡಳಿತ ಮಂಡಳಿಯವರು ಉದ್ಘಾಟಿಸಿದರು.