ವಿಕ ಸುದ್ದಿಲೋಕ ಮುಳಗುಂದಮಹಿಳೆಯರು ಆರೋಗ್ಯ ರಕ್ಷಣೆಗೆ ಪ್ರಮುಖ ಮಹತ್ವ ನೀಡಬೇಕು ಎಂದು ಸೆರೆಂಟಿಕ್ ರಿನಿವೆಬಲ್ ಸಂಸ್ಥೆಯ ರಾಜೇಂದ್ರ ಪ್ರಸಾದ ಹೇಳಿದರು.
ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದಲ್ಲಿಎಸ್ ಜೆಜೆಎಂ ಸಂಯುಕ್ತ ಪದವಿ ಪೂರ್ವ ಮಾಹಾವಿದ್ಯಾಲಯ, ಸೆರೆಂಟಿಕ್ ರಿನಿವೆಬಲ್ ಸಂಸ್ಥೆ, ಸಂಘಿಘೀನಿ ಪಿಂಕ್ ಪ್ಯಾಡ್ ಆಶ್ರಯದಲ್ಲಿಋುತು ಚಕ್ರ ಅರಿವು ಕಾರ್ಯಕ್ರಮದಲ್ಲಿಮಕ್ಕಳಿಗೆ ಸ್ಯಾನಿಟರ್ ಪ್ಯಾಡ್ ವಿತರಿಸಿ ಮಾತನಾಡಿದರು.
ಮಹಿಳೆಯರಲ್ಲಿಸಾಮಾನ್ಯ ಪ್ರಕ್ರಿಯೇ ಋುತು ಚಕ್ರವಾಗಿದೆ. ಇದನ್ನು ಹಿಂದಿನ ಕಾಲದಲ್ಲಿಮಹಿಳೆಯರಿಗೆ 3ದಿನಗಳ ಕಾಲ ಸಾಮಾಜಿಕ ಕಟ್ಟು ಪಾಡಿನಿಂದ ಸಾಕಷ್ಟು ನಿರ್ಬಂಧ ಹೇರಲಾಗುತ್ತಿತ್ತು. ಇದರಿಂದ ಮಹಿಳೆಯರು ಸಾಕಷ್ಟು ಸಮಸ್ಯೆಯಿಂದ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದರು. ಆದರೆ ಇಂದು ಮಹಿಳೆಯರಿಗೆ ಆತ್ಮವಿಶ್ವಾಸ ಹೆಚ್ಚಿಸಲು, ಆರೋಗ್ಯ ಹಿತದೃಷ್ಟಿಯಿಂದ ಅವರನ್ನು ಗೌರವದಿಂದ ಕಾಣಲಾಗುತ್ತಿದೆ. ಸರಿಯಾದ ಸಮಯದಲ್ಲಿಮಕ್ಕಳಿಗೆ ಅರಿವು ನೀಡುವುದರಿಂದ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದರು.
ಡಾ.ಎಸ್ .ಸಿ.ಚವಡಿ ಮಾತನಾಡಿ, ಋುತುಚಕ್ರ ಸಮಯದಲ್ಲಿಸಮಸ್ಯೆ ಕಂಡು ಬಂದಲ್ಲಿಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದರು. ಎಂ.ಡಿ.ಬಟ್ಟೂರ, ವಿಜಯ ನೀಲಗುಂದ, ಎಸ್ .ಸಿ.ಚವಡಿ.ಸುಮಿತ್ರಾ ಹೊಂಬಳ, ಎ.ಎಂ.ಅಂಗಡಿ, ಭಾರತಿ ಗುಡ್ಲೂರ, ಅಕಿಲಾ ಅಡಗದ್ದಿ, ಸಿಖಂದರ ಕದಡಿ, ಕೊಪ್ಪಳ ಇದ್ದರು.
ಫೋಟೊ: 8 ಎಂಯುಎಲ್ 2
ಮುಳಗುಂದ ಪಟ್ಟಣದ ಎಸ್ ಜೆಜೆಎಂ ಸಂಯುಕ್ತ ಪಪೂ ಕಾಲೇಜಿನಲ್ಲಿನಡೆದ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿರಾಜೇಂದ್ರ ಪ್ರಸಾದ ಮಾತನಾಡಿದರು.