Indian Supreme Court Directs Cbse To Grant Exemption In Trilingual Policy
ಸುದ್ದಿಮಿಂಚು
Contributed by: Shrividya Rao|Vijaya Karnataka•
ತ್ರಿಭಾಷೆ ನೀತಿಗೆ ವಿನಾಯಿತಿ ನೀಡಿ ಪ್ರಸ್ತುತ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ 6ನೇ ತರಗತಿಯ ವಿದ್ಯಾರ್ಥಿಗಳಿಗೆ ತ್ರಿಭಾಷಾ ನೀತಿ ಯಿಂದ ವಿನಾಯಿತಿ ನೀಡುವ ಸಾಧ್ಯತೆ ಯನ್ನು ಪರಿಶೀಲಿಸುವಂತೆ ಭಾರತೀಯ ಸುಪ್ರೀಂ ಕೋರ್ಟ್ ಸಿಬಿಎಸ್ ಇಗೆ ಸೂಚನೆ ನೀಡಿದೆ. ಸಿಬಿಎಸ್ ಇಯ ತ್ರಿಭಾಷಾ ನೀತಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 17ಕ್ಕೆ ಮುಂದೂಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ6ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸುಪ್ರೀಂ ಕೋರ್ಟ್ ನ ಈ ಸೂಚನೆಯಿಂದ ದೊಡ್ಡ ಸಮಾಧಾನ ಸಿಗುವ ಸಾಧ್ಯತೆಯಿದೆ. 40 ಲಕ್ಷ ಜನರಿಗೆ ತೊಂದರೆ ಕಳೆದ 5 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬಿಹಾರದ 14 ಜಿಲ್ಲೆಗಳಲ್ಲಿ40 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ತೊಂದರೆ ಗೊಳಗಾಗಿದ್ದು, ಹಲವು ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ‘ವಿವಿಧ ಜಿಲ್ಲೆ ಗಳಲ್ಲಿಎಡೆಬಿಡದೆ ಸುರಿಯುತ್ತಿರುವ ಮಳೆ ಯಿಂದಾಗಿ ನದಿ ಮತ್ತು ತೊರೆಗಳು ಉಕ್ಕಿ ಹರಿ ಯುತ್ತಿವೆ. ಇದಲ್ಲದೆ, ನೇಪಾಳದ ಜಲಾನಯನ ಪ್ರದೇಶಗಳಲ್ಲಿಸುರಿದ ಭಾರಿ ಮಳೆಯು ಹಲವು ಸ್ಥಳಗಳಲ್ಲಿನದಿಗಳು ಅಪಾಯದ ಮಟ್ಟಕ್ಕಿಂತ ಎತ್ತರದಲ್ಲಿಹರಿಯಲು ಕಾರಣವಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ವಿದ್ಯಾರ್ಥಿಗಳ ಉಚ್ಚಾಟನೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧಗಳು ಕ್ಷೀಣಿಸುತ್ತಿರುವ ಬೆನ್ನಲ್ಲೇ, ಪಾಕಿಸ್ತಾನ ಸರಕಾರವು ದೇಶಾದ್ಯಂತ ಇರುವ ವೈದ್ಯಕೀಯ ಸಂಸ್ಥೆಗಳಿಗೆ ಆಫ್ಘನ್ ವಿದ್ಯಾರ್ಥಿಗಳನ್ನು ತಕ್ಷಣವೇ ಉಚ್ಚಾಟಿಸುವಂತೆ ಹಾಗೂ ಹೊಸ ಸೇರ್ಪಡೆಗಳನ್ನು ಸ್ಥಗಿತ ಗೊಳಿಸುವಂತೆ ಆದೇಶಿಸಿದೆ. ಈ ನಿರ್ಧಾರದಿಂದ ಪಾಕಿಸ್ತಾನದಲ್ಲಿವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿರುವ ನೂರಾರು ಆಫ್ಘನ್ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆ ಯಲ್ಲಿದೆ. ಪದವಿ ಪೂರ್ಣಗೊಳಿಸ ಬೇಕಿದ್ದ ಹಿರಿಯ ವಿದ್ಯಾರ್ಥಿಗಳೂ ಈ ನಿಷೇಧದ ಭೀತಿಯಲ್ಲಿದ್ದಾರೆ.