ಎಲ್ ಪಿಜಿ

Contributed byShrividya Rao|Vijaya Karnataka
indian team achieves historic feat at pickleball world cup
ವಿಯೆಟ್ನಾಂನ ದಾ ನಾಂಗ್ ನಲ್ಲಿಇತ್ತೀಚೆಗೆ ಮುಕ್ತಾಯಗೊಂಡ ‘ಪಿಕಲ್ ಬಾಲ್ ವಿಶ್ವಕಪ್ 2026’ರಲ್ಲಿಭಾರತೀಯ ತಂಡವು ಒಟ್ಟು 41 ಪದಕಗಳನ್ನು ಗೆಲ್ಲುವ ಮೂಲಕ 82 ದೇಶಗಳ ಪೈಕಿ 4ನೇ ಸ್ಥಾನ ಪಡೆದುಕೊಂಡು ಐತಿಹಾಸಿಕ ಸಾಧನೆ ಮಾಡಿದೆ. ಭಾರತವು ಈ ಕೂಟದಲ್ಲಿ7 ಚಿನ್ನ, 17 ಬೆಳ್ಳಿ ಮತ್ತು 17 ಕಂಚಿನ ಪದಕಗಳನ್ನು ತನ್ನದಾ ಗಿಸಿ ಕೊಂಡಿದೆ. ಕಳೆದ ಬಾರಿಯ ವಿಶ್ವಕಪ್ ನಲ್ಲಿಭಾರತ ಏಳನೇ ಸ್ಥಾನ ಪಡೆದಿತ್ತು. ಈ ವಿಶ್ವಕಪ್ ನಲ್ಲಿಭಾರತದಿಂದ 48 ಕ್ರೀಡಾಪಟುಗಳ ತಂಡ ಭಾಗವಹಿಸಿತ್ತು. ಕಿಡ್ಸ್ , ಜೂನಿಯರ್ಸ್ , ಓಪನ್ , ಸೀನಿಯರ್ಸ್ ಮತ್ತು ಮಾಸ್ಟರ್ಸ್ ವಿಭಾಗಗಳಲ್ಲಿಭಾರತೀಯ ಆಟಗಾರರು ಸ್ಪರ್ಧಿಸಿದ್ದರು. 18 ವರ್ಷದೊಳಗಿನವರ ಬಾಲಕರ ಸಿಂಗಲ್ಸ್ ವಿಭಾಗದಲ್ಲಿಪೂರ್ವಂಶ್ ಪಟೇಲ್ ಚಿನ್ನದ ಪದಕ ಗೆದ್ದರು. 60ಕ್ಕೂ ಹೆಚ್ಚು ವಯೋಮಿತಿಯ ವಿಭಾಗದಲ್ಲಿಪುರುಷರ ಸಿಂಗಲ್ಸ್ , ಡಬಲ್ಸ್ ಮತ್ತು ಮಿಕ್ಸ್ ಡ್ ಡಬಲ್ಸ್ ನಲ್ಲಿಭೂಷಣ್ ಅಕುಟ್ ಒಟ್ಟು ಮೂರು ಚಿನ್ನದ ಪದಕಗಳನ್ನು ಗೆದ್ದು ಮಿಂಚಿದರು.