ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ, ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಮಿತಿ ಕಟಪಾಡಿಯ ವಿಧ್ಯಾನಿಧಿ ಸೇವಾರ್ಥ ಉಡುಪಿ ಜಿಲ್ಲೆಯ ಬಿಲ್ಲವ ಸಮಾಜದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವರ್ಷಂಪ್ರತಿ ನೀಡುತ್ತಿದ್ದು, ಈ ವರ್ಷವೂ ತಮ್ಮ ಆಸುಪಾಸಿನ ಸಂಘ ಸಂಸ್ಥೆಯ ಮೂಲಕ ಎಸ್ಸೆಸ್ಸೆಲ್ಸಿ(ತಲಾ 1 ವಿದ್ಯಾರ್ಥಿ) ಮತ್ತು ದ್ವಿತೀಯ ಪಿಯುಸಿ(ತಲಾ 1 ವಿದ್ಯಾರ್ಥಿ) ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ಅರ್ಜಿ ಫಾಮ್ ರ್ ನ್ನು ಸ್ಥಳೀಯ ಸಂಘದ ಮೂಲಕ ಪಡೆದು ಭರ್ತಿ ಮಾಡಿ ಸಂಘದ ಅಧಿಕೃತ ಪತ್ರ, ಅಂಕ ಪ್ರತಿಯೊಂದಿಗೆ ಅ.1ರೊಳಗೆ ಕ್ಷೇತ್ರಕ್ಕೆ ಕಳುಹಿಸಿಕೊಡಬೇಕು. ಯಾವುದೇ ಸಂಘದ ವ್ಯಾಪ್ತಿಯಲ್ಲಿರಾರ ಯಂಕ್ ಪಡೆದ ವಿದ್ಯಾರ್ಥಿಗಳಿದ್ದಲ್ಲಿಪತ್ರದ ಮುಖೇನ ತಿಳಿಸಬೇಕಾಗಿ ಕ್ಷೇತ್ರದ ಆಡಳಿತ ಮಂಡಳಿ ಪರವಾಗಿ ಗೌರವ ಪ್ರಧಾನ ಕಾರ್ಯದರ್ಶಿ ಸುಧೀರ್ ಡಿ.ಬಂಗೇರ ಪ್ರಕಟಣೆಯಲ್ಲಿತಿಳಿಸಿದ್ದಾರೆ.