ಹುಮನಾಬಾದ್ ಪಟ್ಟಣದ ಹೃದಯ ಭಾಗದಲ್ಲಿರುವ ಬಾಲಾಜಿ ದೇವಸ್ಥಾನ ಬಾಲಾಜಿ ದೇವಸ್ಥಾನದ ಕಟ್ಟಡ ತೆರವಿಗೆ ಅನುಮತಿ
ವಿಕ ಸುದ್ದಿಲೋಕ ಹುಮನಾಬಾದ್
ಶಿಥಿಲಗೊಂಡಿರುವ ಪಟ್ಟಣದ ಬಾಲಾಜಿ ದೇವಾಲಯ ಕಟ್ಟಡ ತೆರವಿಗೆ ಧಾರ್ಮಿಕ ದತ್ತಿ ಇಲಾಖೆಯ ಉಪ ಆಯುಕ್ತರು ಅನುಮತಿ ನೀಡಿದ್ದಾರೆ.
ಪ್ರವರ್ಗ ಸಿ ದೇವಾಲಯವಾಗಿರುವ 150ರಿಂದ 200 ವರ್ಷಗಳಷ್ಟು ಹಳೆಯದಾಗಿರುವ ಪುರಾತನ ಬಾಲಾಜಿ ದೇವಸ್ಥಾನ ಸಂಪೂರ್ಣ ಶಿಥಿಲಾವಸ್ಥೆಗೆ ತೆರಳಿದ ಹಿನ್ನೆಲೆ ಜಿಲ್ಲಾಧಿ ಕಾರಿಗಳು ಮಾರ್ಗದರ್ಶನ ನೀಡಲು ಸರಕಾರಕ್ಕೆ ಕೋರಿದ್ದರು. ್ಲದೆ ಶಾಸಕ ಡಾ.ಸಿದ್ದು ಪಾಟೀಲ್ ,ಎಮ್ ಎಲ್ ಸಿ ಡಾ.ಚಂದ್ರಶೇಖರ ಪಾಟೀಲ್ , ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರು ದೇವಸ್ಥಾನ ೕರ್ಣೋದ್ಧಾರ ಮಾಡಬೇಕು ಎಂದು ಆಗ್ರಹಿಸಿದ್ದರು.ಈ ಸಂಬಂಧ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದರು.ಕರ್ನಾಟಕ ರಾಜ್ಯ ವಾಸ್ತು ಶಿಲ್ಪ ಸಮಿತಿಯರ ಸಭೆಯಲ್ಲಿದೇವಸ್ಥಾನದ ಹಾಲಿ ಕಟ್ಟಡ ತೆರವುಗೊಳಿಸಬಹುದು ಎಂದು 4 ಪ್ರಮುಖ ಷರತ್ತು ವಿಧಿಸಿ ಅನುಮತಿ ನೀಡಲಾಗಿದೆ.
***ಕೋಟ್ ..
ನೂತನ ಮಂದಿರ ನಿರ್ಮಾಣ ಕಾರ್ಯಕ್ಕಾಗಿ ಹಾಲಿ ಬಾಲಾಜಿ ದೇವಸ್ಥಾನದ ಕಟ್ಟಡವನ್ನು ತೆರವುಗೊಳಿಸಲು ಸರಕಾರ ಸೂಚಿಸಿದ್ದು, ಕ್ಷೇತ್ರದ ಶಾಸಕನಾಗಿ ಹಾಗೂ ಬಾಲಾಜಿ ದೇವಸ್ಥಾನದ ಭಕ್ತನಾಗಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ.
- ಡಾ.ಸಿದ್ದು ಪಾಟೀಲ್ , ಶಾಸಕ
****
ಜನತೆಗೆ ಕೊಟ್ಟ ಮಾತಿನಂತೆ ಪುರಾತನ ಮತ್ತು ಧಾರ್ಮಿಕ ಮಹತ್ವ ಹೊಂದಿರುವ ಬಾಲಾಜಿ ದೇವಸ್ಥಾನ ತೆರವುಗೊಳಿಸಲು ಸರಕಾರ ಅನುಮತಿ ನೀಡಿ. ಸರಕಾರದಿಂದ ಅಗತ್ಯ ಅನುಮತಿ ಪಡೆಯಲಾಗಿದೆ.
ಡಾ.ಚಂದ್ರಶೇಖರ ಪಾಟೀಲ್ ,ಎಂಎಲ್ ಸಿ.
***
ಬಾಲಾಜಿ ದೇವಸ್ಥಾನ ಜೀಣೋದ್ಧಾರಕ್ಕಾಗಿ ಜನತೆಗೆ ನೀಡಿದ ಮಾತು ತಪ್ಪಿಸಿಸ್ಲ. ಜನರ ನಂಬಿಕೆ,ಭಾವನೆ ಮತ್ತು ಹಿತಾಸಕ್ತಿಯೇ ನಮ್ಮ ಮೊದಲ ಆದ್ಯತೆ.