ಬರ ನೆರವು - 2 ದಿನಗಳಲ್ಲಿಕೇಂದ್ರಕ್ಕೆ ಮನವಿ

Contributed byKENCHE GOWDA|Vijaya Karnataka
request to the center for rain management decision in 2 days
ವಿಕ ಸುದ್ದಿಲೋಕ ಬೆಂಗಳೂರು

ಬರ ಪರಿಸ್ಥಿತಿ ನಿರ್ವಹಿಸಲು ನೆರವಿಗೆ ಸಂಬಂಧಿಸಿದಂತೆ ಒಂದೆರಡು ದಿನಗಳಲ್ಲಿಕೇಂದ್ರ ಸರಕಾರಕ್ಕೆ ಮನವಿ ರೂಪದ ಪ್ರಸ್ತಾವನೆ ಕಳಿಸಲಾಗುತ್ತಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.
‘‘ರಾಜ್ಯದಲ್ಲಿಮೊದಲ ಹಂತದಲ್ಲಿಬರ ಘೋಷಣೆ ಮಾಡಲಾದ 101 ತಾಲೂಕುಗಳಲ್ಲಿ18 ಸಾವಿರ ಕೋಟಿ ರೂ. ಬೆಳೆ ನಷ್ಟವಾಗಿದ್ದು, ಎನ್ ಡಿಆರ್ ಎಫ್ ಮಾರ್ಗಸೂಚಿಯಂತೆ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ’’ ಎಂದು ಸುದ್ದಿಗೋಷ್ಠಿಯಲ್ಲಿತಿಳಿಸಿದರು.

‘‘ಬರ ಪೀಡಿತ ಎಂದು ಘೋಷಣೆ ಮಾಡಲಾದ 101 ತಾಲೂಕುಗಳ ಜತೆಗೆ, ಇನ್ನೂ 42 ತಾಲೂಕುಗಳಲ್ಲಿಗ್ರೌಂಡ್ ಟ್ರುಥಿಂಗ್ ನಡೆದಿದ್ದು, ಮಂಗಳವಾರದ ವರೆಗೆ 24 ತಾಲೂಕುಗಳಲ್ಲಿಮುಗಿದಿದ್ದು, ಗುರುವಾರ ಇನ್ನೂ 18 ತಾಲೂಕುಗಳಲ್ಲಿಗ್ರೌಂಡ್ ಟ್ರುಥಿಂಗ್ ಮುಗಿಯಲಿದೆ. ಆ ಬಳಿಕ ಈ ತಾಲೂಕುಗಳಲ್ಲೂಬರ ಘೋಷಣೆಗೆ ತಯಾರಿ ಮಾಡಿಕೊಳ್ಳಲಾಗಿದೆ’’ ಎಂದು ತಿಳಿಸಿದರು.

‘‘ಸದ್ಯ ಕೇಂದ್ರಕ್ಕೆ ಮನವಿ ಕಳಿಸಿಕೊಡಲಾಗುತ್ತಿದ್ದು, ಇನ್ನಷ್ಟು ತಾಲೂಕುಗಳಲ್ಲಿಬರ ಘೋಷಣೆಯಾದ ಬಳಿಕ ಅಂತಿಮ ಪ್ರಸ್ತಾವನೆಯೊಂದಿಗೆ ಖುದ್ದು ಮುಖ್ಯಮಂತ್ರಿಗಳು ದಿಲ್ಲಿಗೆ ಸರ್ವಪಕ್ಷ ನಿಯೋಗದಲ್ಲಿತೆರಳಿ ಮನವಿ ಸಲ್ಲಿಸಲು ಬಯಸಿದ್ದಾರೆ’’ ಎಂದು ಹೇಳಿದರು.