ವಿಕ ಸುದ್ದಿಲೋಕ ಬೋರಗಾಂವಸದಲಗಾ ಪಟ್ಟಣದ ಸದಲಗಾ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ್ ಗೆ ಕಳೆದ ಆರ್ಥಿಕ ವರ್ಷದಲ್ಲಿ40.58 ಲಕ್ಷ ರೂ. ನಿವ್ವಳ ಲಾಭ ಲಭಿಸಿದೆ ಎಂದು ಅಧ್ಯಕ್ಷ ಪ್ರಕಾಶ ಪಾಟೀಲ ತಿಳಿಸಿದರು.
ಅವರು ಬ್ಯಾಂಕ್ ನ 65 ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿಪಾಲ್ಗೊಂಡು ಮಾತನಾಡಿದರು. ‘‘ಬ್ಯಾಂಕ್ ನಿಂದ ಜಮೀನು ಸಾಲವನ್ನು 50 ಸಾವಿರದಿಂದ 1ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದ್ದು, ಸದಸ್ಯರ ಸಾಲದ ಮೇಲಿನ ಬಡ್ಡಿದರವನ್ನು ಶೇ.1 ರಷ್ಟು ಕಡಿಮೆ ಮಾಡಲಾಗಿದೆ. ಈಗಾಗಲೇ ಚಿಕ್ಕೋಡಿ, ನಿಪ್ಪಾಣಿ, ಅಥಣಿ ತಾಲೂಕುಗಳ ಎಲ್ಲಶಾಖೆಗಳಲ್ಲೂಡಿಜಿಟಲ್ ಬ್ಯಾಂಕಿಂಗ್ ಸೇವೆ ಕಲ್ಪಿಸಲಾಗಿದೆ. ಸದ್ಯ ಬ್ಯಾಂಕ್ ತನ್ನ ಎಲ್ಲಶಾಖೆಗಳ ಮುಖಾಂತರ ಜನಸಾಮಾನ್ಯರ ಸೇವೆಯಲ್ಲಿನಿರತವಾಗಿದೆ,’’ ಎಂದರು.
ಸಚಿನ್ ಪಾಟೀಲ ಹಾಗೂ ರಾಜ ಬೋಮಾಲ್ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಾಹಕ ಎಸ್ .ಎಂ. ಪಾರೀಸ್ ಖೋತ್ ವರದಿ ವಾಚಿಸಿ, ‘‘ಪ್ರಸ್ತುತ ಬ್ಯಾಂಕ್ 7928 ಸದಸ್ಯರು, 3.93 ಕೋಟಿ, ಶೇರು ಬಂಡವಾಳ, 167.09 ಕೋಟಿ ರೂ. ದುಡಿಯುವ ಬಂಡವಾಳ, 8.39 ಕೋಟಿ ನಿಧಿ, 152.93 ಕೋಟಿ ರೂ. ಠೇವು ಹೊಂದಿದ್ದು, 77.89 ಕೋಟಿ ರೂ. ಸಾಲ ನೀಡಿ ಸಕಾಲಕ್ಕೆ ಮರುಪಾವತಿಸಿಕೊಳ್ಳಲಾಗಿದೆ,’’ ಎಂದು ತಿಳಿಸಿದರು.
ಸಭೆಯಲ್ಲಿನಿವೃತ್ತ ಸಿಬ್ಬಂದಿ ರಾಜೇಂದ್ರ ಮಾಜನ್ನವರ ಹಾಗೂ ಶ್ರೇಣಿಕ ಪ್ರಧಾನ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ದರ್ಶನ ಹಾಲಪ್ಪನವರ, ಮಾಜಿ ಉಪಾಧ್ಯಕ್ಷ ಉದಯಕುಮಾರ ಪಾಟೀಲ, ರಜನಿಕಾಂತ ಚೌಗುಲೆ, ಬಾಬಣ್ಣ ಖೋತ್ , ಅಶೋಕ ಪಾಟೀಲ, ಸತೀಶ ಪಾಟೀಲ, ಪ್ರಶಾಂತ ಪಾಟೀಲ, ರಷೀದ್ ಮುಜಾವರ ಮತ್ತಿತರರಿದ್ದರು. ಬ್ಯಾಂಕ್ ನಿರ್ದೇಶಕ ಸತೀಶ ಪಾಟೀಲ ಸ್ವಾಗತಿಸಿದರು. ಶ್ರೀಪಾಲ ಮುನ್ನೋಳೆ ವಂದಿಸಿದರು.
- 7ಐಸಿಹೆಚ್ 5
ಸದಲಗಾ ಅರ್ಬನ್ ಸೌಹಾರ್ದ ಬ್ಯಾಂಕ್ ನ 65ನೇ ವಾರ್ಷಿಕ ಸಭೆಯಲ್ಲಿಅಧ್ಯಕ್ಷ ಪ್ರಕಾಶ ಪಾಟೀಲ ಮಾತನಾಡಿದರು.