ನಂದೇಶ್ವರ: ಸಮೀಪದ ಸತ್ತಿ ಗ್ರಾಮದ ಶ್ರೀ ಬೀರೇಶ್ವರ ದೇವರ ಜಾತ್ರೆಯು ನಾನಾ ಧಾರ್ಮಿಕ ಆಚರಣೆಗಳೊಂದಿಗೆ ಸಂಪನ್ನಗೊಂಡಿತು. ಜಾತ್ರೆ ನಿಮಿತ್ತ ವಿಶೇಷ ಪೂಜೆ, ಅಭಿಷೇಕ, ನೈವೇದ್ಯ ಅರ್ಪಣೆ, ಕೃಷ್ಣಾ ನದಿಯ ಪುಣ್ಯ ಸ್ನಾನ, ಪಲ್ಲಕ್ಕಿ ಉತ್ಸವ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಗಳು ಜರುಗಿದವು. ನಾನಾ ಕಡೆಗಳ ಡೊಳ್ಳಿನ ಪದಗಳ ತಂಡಗಳು ಜಾತ್ರೆಯಲ್ಲಿಭಾಗವಹಿಸಿ ಸೇವೆ ಸಲ್ಲಿಸಿದವು. ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ವಸಂತ ಸೋಲಂಕರ, ಬಸವರಾಜ ದಳವಾಯಿ, ಅಲ್ಲಪ್ಪ ತಟ್ರಿ, ಹನುಮಂತ ಪಟೇಕರ, ಭರಮು ತಟ್ರಿ, ವಿಠ್ಠಲ ತಟ್ರಿ, ಬಾಳು ಕರಜಗಿ, ಮುರಿಗೆಪ್ಪ ತಟ್ರಿ ಮತ್ತಿತರರಿದ್ದರು.
-7ಎನ್ ಡಿಆರ್ 1ಸತ್ತಿ ಗ್ರಾಮದ ಶ್ರೀ ಬೀರೇಶ್ವರ ಜಾತ್ರೆಯ ಅಂಗವಾಗಿ ಪಲ್ಲಕ್ಕಿ ಉತ್ಸವ ಜರುಗಿತು.