ವಿಕ ಸುದ್ದಿಲೋಕ ಸಿರಿಗೆರೆಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಬಿ. ಲಿಂಗಯ್ಯ ವಸತಿ ಪದವಿಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಆವರಣದಲ್ಲಿಚಿತ್ರದುರ್ಗ ತಾಲೂಕು ಮಟ್ಟದ ಅಂಡರ್ -14 ಹಾಗೂ ಅಂಡರ್ -17 ವಿಭಾಗದ ಬಾಲಕ ಮತ್ತು ಬಾಲಕಿಯರ ನೆಟ್ ಬಾಲ್ ಪಂದ್ಯಾವಳಿ ಬುಧವಾರ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ನಿರ್ದೇಶನದಂತೆ ಆಯೋಜಿಸಿದ್ದ ಪಂದ್ಯಾವಳಿಯಲ್ಲಿತಾಲೂಕಿನ ನಾನಾ ಶಾಲೆಗಳ ನೂರಾರು ಕ್ರೀಡಾಪಟುಗಳು ಪಾಲ್ಗೊಂಡು ತಮ್ಮ ಕ್ರೀಡಾ ಪ್ರತಿಭೆ ಹಾಗೂ ಕೌಶಲ್ಯವನ್ನು ಪ್ರದರ್ಶಿಸಿದರು. ಹಲವು ಪಂದ್ಯಗಳು ತೀವ್ರ ಪೈಪೋಟಿಯಿಂದ ಕೂಡಿದ್ದು, ಕ್ರೀಡಾಭಿಮಾನಿಗಳ ಗಮನ ಸೆಳೆದವು.
ಅಂಡರ್ -14 ಬಾಲಕರ ವಿಭಾಗದಲ್ಲಿಎಸ್ .ಟಿ.ಜೆ.ಎನ್ .ಪಿ ಸಿರಿಗೆರೆ ತಂಡ ಪ್ರಥಮ, ಜಿ.ಎಂ.ಹೆಚ್ .ಪಿ.ಎಸ್ ಸಿರಿಗೆರೆ ತಂಡ ದ್ವಿತೀಯ, ಬಾಲಕಿಯರ ವಿಭಾಗದಲ್ಲಿಬಿ.ಎಲ್ .ಆರ್ .ಹೆಚ್ .ಎಸ್ ಸಿರಿಗೆರೆ ತಂಡ ಪ್ರಥಮ ಹಾಗೂ ಎಸ್ .ಟಿ.ಜೆ.ಎನ್ .ಪಿ ಸಿರಿಗೆರೆ ತಂಡ ದ್ವಿತೀಯ ಸ್ಥಾನ ಪಡೆದುಕೊಂಡವು.
ಅಂಡರ್ -17 ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿಎಸ್ .ಟಿ.ಜೆ.ಎನ್ .ಪಿ ಸಿರಿಗೆರೆ ತಂಡ ಪ್ರಥಮ, ಬಿ.ಎಲ್ .ಆರ್ .ಹೆಚ್ .ಎಸ್ ಸಿರಿಗೆರೆ ತಂಡ ದ್ವಿತೀಯ ಪಡೆದುಕೊಂಡವು.
ಪಂದ್ಯಾವಳಿಯ ಮುಖ್ಯ ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕ ಎಚ್ .ವಿ.ನವೀನ್ ಕುಮಾರ್ ಕಾರ್ಯನಿರ್ವಹಿಸಿದರು. ಪವನ್ ಕುಮಾರ್ , ಅರ್ಜುನ್ ರಾಥೋಡ್ , ಪ್ರಾಥಮಿಕ ಶಾಲಾ ಶಿಕ್ಷಕ ಎಸ್ .ಜೆ ಮಧು ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಶಿವಕುಮಾರ್ ಪಂದ್ಯಾವಳಿ ನಿರ್ವಹಣೆಗೆ ಸಹಕರಿಸಿದರು. ವಿಜೇತ ತಂಡಗಳಿಗೆ ಸಂಸ್ಥೆಯ ಆಡಳಿತ ಮಂಡಳಿ, ಉಪಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿ ಶುಭ ಹಾರೈಸಿದರು.
---
9 ಎಸ್ ಆರ್ ಜಿ ಪಿ 1
ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಬಿ. ಲಿಂಗಯ್ಯ ವಸತಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿಚಿತ್ರದುರ್ಗ ತಾಲೂಕು ಮಟ್ಟದ ಅಂಡರ್ -14 ಹಾಗೂ ಅಂಡರ್ -17 ವಿಭಾಗದ ಬಾಲಕ ಮತ್ತು ಬಾಲಕಿಯರ ನೆಟ್ ಬಾಲ್ ಪಂದ್ಯಾವಳಿ ಬುಧವಾರ ನಡೆಯಿತು.