ಮೂಡುಬಿದಿರೆ : ಕಂಬಳ ಅಕಾಡೆಮಿಯಿಂದ 7ನೇ ವರ್ಷದ ಕಂಬಳ ತರಬೇತಿ ಶಿಬಿರ ಸೆ.26ರಿಂದ ಹತ್ತು ದಿನಗಳವರೆಗೆ ಇಲ್ಲಿನ ಕಡಲಕೆರೆಯ ಸೃಷ್ಟಿ ಗಾರ್ಡನಲ್ಲಿನಡೆಯಲಿದೆ ಎಂದು ಕಂಬಳ ಅಕಾಡಮಿ ಸಂಚಾಲಕ ಗುಣಪಾಲ ಕಡಂಬ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ಸೆ.12ರಂದು ಮೊದಲ ಸುತ್ತಿನ ಆಯ್ಕೆ ನಡೆದರೆ, ರಾಷ್ಟ್ರೀಯ ತರಬೇತುದಾರರು ಎರಡನೇ ಸುತ್ತಿನಲ್ಲಿಅಂತಿಮ 40 ಮಂದಿಯನ್ನು ಆಯ್ಕೆ ಮಾಡಲಿದ್ದಾರೆ ಎಂದರು.ಆಯ್ಕೆಯಾದ ಶಿಬಿರಾರ್ಥಿಗಳಿಗೆ ಸೆ.26ರಿಂದ 10 ದಿನಗಳ ಕಾಲ ಕಂಬಳ ಕ್ಷೇತ್ರದ ನಾನಾ ಅನುಭವಿಗಳಿಂದ ತರಬೇತಿ ನೀಡಲಾಗುವುದು. ಕೋಣಗಳನ್ನು ಓಡಿಸುವುದು, ಕೋಣಗಳ ಸಾಕಣೆ, ಆಹಾರ ಪದ್ದತಿ, ಹಗ್ಗ ನೇಯ್ಗೆ, ಯೋಗ, ಆತ್ಮಸ್ಥೈರ್ಯ ಹೆಚ್ಚಿಸಲು ಮಾನಸಿಕ ತಜ್ಞರಿಂದ ಮಾಹಿತಿ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ನಡೆಯಲಿದೆ ಎಂದರು.
ಕಂಬಳ ಕ್ಷೇತ್ರಕ್ಕೆ ಮಹಿಳೆಯರನ್ನು ಆಕರ್ಷಿಸುವ ನಿಟ್ಟಿನಲ್ಲಿಅವರಿಗೆ ತೀರ್ಪುಗಾರರು ಹಾಗೂ ಉದ್ಘೋಷಕರಾಗಿ ಕಾರ ್ಯನಿರ್ವಹಿಸುವ ಬಗ್ಗೆ ತರಬೇತಿ ನೀಡಲಾಗುವುದು. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾವ್ಯಾಪ್ತಿಗೊಳಪಡುವ 18 ವರ್ಷ ಮೇಲ್ಪಟ್ಟ ಆಸಕ್ತರು ಸ್ಥಳದಲ್ಲೆತಮ್ಮ ಹೆಸರು ನೋಂದಾಯಿಸಬಹುದು ಎಂದರು.