ಸ್ಪರ್ಧಾತ್ಮಕ ಜಗತ್ತಿನಲ್ಲಿಸಾಧನೆಗೆ ಶಿಕ್ಷಣ ದ ಜತೆಗೆ ನಿರಂತರ ಪರಿಶ್ರಮ, ಆತ್ಮವಿಶ್ವಾಸ ಹಾಗೂ ಛಲ ಅಗತ್ಯ. ಸಮುದಾಯದ ಹೆಣ್ಣುಮಕ್ಕಳು ಶಿಕ್ಷಣ, ಉದ್ಯೋಗ, ಆಡಳಿತ, ಕ್ರೀಡೆ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿಸಾಧನೆಯ ಹೆಜ್ಜೆ ಗುರುತು ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಂಕೇಶ್ವರ ಮರಾಠಾ ಸಮಾಜ ಸೊಸೈಟಿ ಅಧ್ಯಕ್ಷ ಅಮರ ನಲವಡೆ ಹೇಳಿದರು.ಪಟ್ಟಣದ ಮರಾಠಾ ಸಮಾಜ ಸೊಸೈಟಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘‘ಸಮುದಾಯದಿಂದ ದೊರೆತ ಸೌಲಭ್ಯ ಮತ್ತು ಸಹಕಾರವನ್ನು ಸದುಪಯೋಗಪಡಿಸಿಕೊಳ್ಳುವುದರ ಜತೆಗೆ, ಸಮಾಜದ ಅಭಿವೃದ್ಧಿಗೆ ತಾವು ನೀಡಬಹುದಾದ ಕೊಡುಗೆಯ ಬಗ್ಗೆಯೂ ಪ್ರತಿಯೊಬ್ಬರು ಚಿಂತಿಸಬೇಕು. ವೈಯಕ್ತಿಕ ಪ್ರಗತಿಯ ಜತೆಗೆ ಸಮುದಾಯದ ಉನ್ನತಿಗೂ ಕೈ ಜೋಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು,’’ ಎಂದು ಕರೆ ನೀಡಿದರು.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿಉತ್ತಮ ಸಾಧನೆಗೈದ ಹುಕ್ಕೇರಿ ತಾಲೂಕಿನ ವಿದ್ಯಾರ್ಥಿಗಳು ಹಾಗೂ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿಗಮನಾರ್ಹ ಸಾಧನೆಗೈದ ಪ್ರತಿಭಾವಂತರನ್ನು ಶಿಕ್ಷಣ ಇಲಾಖೆಯ ನಿವೃತ್ತ ಅಧಿಧಿಕಾರಿ ಡಾ. ಆನಂದ ಬಿ. ಪುಂಡಲೀಕ ಹಾಗೂ ಕೆಎಲ್ ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಸಂಸ್ಥೆಯ (ಸ್ವಾಯತ್ತ) ಕಾಲೇಜು ಪ್ರಾಚಾರ್ಯೆ ಡಾ. ಜ್ಯೋತಿ ಎಸ್ . ಕವಳೆಕರ ಅವರ ಉಪಸ್ಥಿತಿಯಲ್ಲಿಸನ್ಮಾನಿಸಲಾಯಿತು.
ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಹತನೂರಿ, ಎಲ್ .ಪಿ. ಶೆಂಡಗೆ, ಶಿವಾಜಿ ಕಳವಿಕಟ್ಟಿಕರ್ , ಇಂದುರಾವ್ ಮೋರೆ, ಅಭಿಜಿತ್ ಕುರಣಕರ್ , ಅಪ್ಪಾ ಮೋರೆ, ಅವಿನಾಶ ನಲವಡೆ, ರವೀಂದ್ರ ನಾರ್ವೇಕರ್ , ಜಯಪ್ರಕಾಶ ಸಾವಂತ, ರಾಜೇಶ ಗಾಯಕವಾಡ, ಭರತ ಸುಂಜಿ, ಪ್ರಕಾಶ ಪಾಟೀಲ, ಶಿವರಾಮ ಶೇಲಾರ, ಮಹಾದೇವ ಕ್ಷೀರಸಾಗರ, ಜಯಪ್ರಕಾಶ ಖಾಡೆ, ಸುಧಾಕರ ಓತಾರೆ, ರಿತೇಶ ಸಾವಗಾಂವಕರ, ವಿಷ್ಣು ಜಾಧವ, ಸವಿತಾ ಸಾವಂತ, ರಾಜು ಜಾಧವ ಸೇರಿದಂತೆ ಸಮುದಾಯದ ಮುಖಂಡರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.