ಮೀಯಪದವಿನಲ್ಲಿಗಮಕ ಶ್ರಾವಣ ಸರಣಿ ಕಾರ್ಯಕ್ರಮ

Contributed byyajjupnagar@gmail.com|Vijaya Karnataka
successful shravana gamaka series programme in miyapada
ಮೀಯಪದವು: ಕರ್ನಾಟಕ ಗಮಕ ಕಲಾ ಪರಿಷತ್ , ಬೆಂಗಳೂರು ಕೇರಳ ಗಡಿನಾಡ ಘಟಕ, ಕಾಸರಗೋಡು ಮತ್ತು ಸಿರಿಗನ್ನಡ ವೇದಿಕೆ, ಬೆಂಗಳೂರು ಕೇರಳ ಗಡಿನಾಡ ಘಟಕ, ಕಾಸರಗೋಡು ಇವುಗಳ ಸಂಯುಕ್ತ ಆಶ್ರಯದಲ್ಲಿಗಮಕ ಶ್ರಾವಣ ಸರಣಿ ಕಾರ್ಯಕ್ರಮ ಇಲ್ಲಿನ ಶ್ರೀ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿಜರುಗಿತು. ಶಾಲಾ ಪ್ರಭಂದಕ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿವೃತ್ತ ಅಧ್ಯಾಪಕ ವಿ.ಬಿ. ಕುಳಮರ್ವ ಅಧ್ಯಕ್ಷತೆ ವಹಿಸಿದ್ದರು.

ಬಳಿಕ ಮಾತನಾಡಿದ ಅವರು, ಗಮಕ ಕಲೆ ಪಂಡಿತ, ಪಾಮರ ಎಂಬ ಕಂದಕವನ್ನು ಇಲ್ಲದೆ ಮಾಡುವ ಸಂಪರ್ಕ ಸೇತುವಾಗಿದ್ದು, ನಡುಗನ್ನಡ ಸಾಹಿತ್ಯದ ಹಿರಿಮೆಯನ್ನು ಪಸರಿಸಿದ ಅಪೂರ್ವ ಕಲೆಯಾಗಿದೆ. ಯುವ ಪೀಳಿಗೆಗೆ ಗಮಕದ ಮಹತ್ವವನ್ನು ಪರಿಚಯಿಸಲು ಈ ಸರಣಿ ಕಾರ್ಯಕ್ರಮ ಅಗತ್ಯ ಎಂದು ಅಭಿಪ್ರಾಯ ಪಟ್ಟರು.
ಉನ್ನತ ಪ್ರೌಢಶಾಲಾ ಪ್ರಾಂಶುಪಾಲರಾದ ರಮೇಶ ಕೆ.ಎನ್ . ಪ್ರೌಢ ಶಾಲಾ ಮುಖ್ಯಶಿಕ್ಷಕಿ ಮೃದುಲಾ ಕೆ.ಎಂ. ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಿವೃತ್ತ ಪ್ರಿನ್ಸಿಪಾಲ ಪ್ರೊಫೆಸರ್ ಪಿ. ನಾರಾಯಣ ಮೂಡಿತ್ತಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶ್ರೀ ವಿದ್ಯಾವರ್ಧಕ ಪ್ರೌಢಶಾಲಾ ನಿವೃತ್ತ ಮುಖ್ಯಶಿಕ್ಷಕ ರಾಜಾರಾಮ ರಾವ್ ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅನುಷಾ ಮತ್ತು ಸಾನಿಧ್ಯ ಅವರು ಹಾಸನದ ಪ್ರೊಫೆಸರ್ ನರಹರಿ ಅವರು ಬರೆದ ಕಾವ್ಯ ಭಾಗವನ್ನು ವಾಚನ ವ್ಯಾಖ್ಯಾನ ಮಾಡಿದರು. ವಿದ್ಯಾರ್ಥಿಗಳಾದ ಅನಿರುದ್ಧ ಸ್ವಾಗತಿಸಿದರು. ಕೌಶಿಕ್ ಕಾರ್ಯಕ್ರಮ ನಿರೂಪಿಸಿದರು. ಸ್ನೇಹಿನ್ ಕುಮಾರ್ ವಂದಿಸಿದರು.

8ಎಂಜೆಗಮಕ