ಮಂಜೇಶ್ವರ: ಕುಳೂರು ಚಿನಾಲ ನವಯುವಕ ಕಲಾವೃಂದ ಗ್ರಂಥಾಲಯದ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮ ನಡೆಯಿತು.ಸಮಾರಂಭದ ಅಂಗವಾಗಿ ನಿವೃತ್ತ ಬಿ.ಬಿ.ಸಿ. ಇಬ್ರಾಹಿಂ ಅಧ್ಯಕ್ಷತೆಯಲ್ಲಿಹಿರಿಯ ನಿವೃತ್ತ ಅಧ್ಯಾಪಕ ಬಾಬುರಾಯ ಆಚಾರ್ಯ ಅವರನ್ನು ಅವರ ಸ್ವಗ್ರಹ ಮಿಯಪದವು ಬೇರಿಕೆಯಲ್ಲಿಸನ್ಮಾನಿಸಲಾಯಿತು.
ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ದಾಸಪ್ಪ ಮಾಸ್ಟರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ‘ಶಿಕ್ಷಕರ ಪಾತ್ರ ಹಾಗೂ ಗ್ರಂಥಾಲಯಗಳ ಮಹತ್ವ ಮತ್ತು ಅರಿವನ್ನು ಆರಾಧಿಸುವ, ಜ್ಞಾನ ಸಂಸ್ಕೃತಿಗೆ ತಲೆಬಾಗುವ ಸಂಸ್ಕಾರ ಬೆಳೆಯಬೇಕಾಗಿದೆ’ ಎಂದರು.
ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯದರ್ಶಿ ಕಮಲಾಕ್ಷ ಡಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ತ್ರಿಲತಾ ಅವರು ಸನ್ಮಾನ ಪತ್ರ ಓದಿದರು.
ಕಾರ್ಯಕ್ರಮದಲ್ಲಿಹೊಸಂಗಡಿ ಬಿ. ಎಂ. ರಾಮಯ್ಯ ಶೆಟ್ಟಿ ಗ್ರಂಥಾಲಯದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಡಾ. ಅಕ್ಷಯ ಕುಮಾರ್ ಎಲಿಯಣ, ಸರಸ್ವತಿ, ಕು. ಪದ್ಮಜ, ಮೋನಪ್ಪ ಪೂಜಾರಿ,ಮೊಹಮ್ಮದ್ ಚಿನಾಲ ಹಾಗೂ ಗ್ರಂಥಾಲಯದ ಸಕ್ರಿಯ ಸದಸ್ಯರು, ಗ್ರಂಥಪಾಲಕಿಯರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಸಂದೀಪ್ ಸಭೆಯಲ್ಲಿಸ್ವಾಗತಿಸಿದರೆ, ಜತೆ ಕಾರ್ಯದರ್ಶಿ ಉದಯ ಸಿ. ಎಚ್ . ವಂದಿಸಿದರು. ರವೀಂದ್ರ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.