ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರ ಫೋಟೋ ಮಾಫಿಂರ್ ಗ್ ಜಾಲ: ಎಚ್ಚರಿಕೆ ವಹಿಸಲು ರಕ್ಷಕ ಶಿಕ್ಷಕ ಸಂಘಗಳಿಗೆ ಆಗ್ರಹ

Contributed byshreemolu.93@gmail.com|Vijaya Karnataka
teachers photo morphing a call for caution in school environment
ವಿಕ ಸುದ್ದಿಲೋಕ ಕುಂಬಳೆ

ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರ ಫೋಟೋ ಮತ್ತು ವೀಡಿಯೋಗಳನ್ನು ಮಾಫ್ ರ್ ಮಾಡಿ ಅಸಭ್ಯ ಚಿತ್ರಗಳಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಶಾಲೆಗಳಲ್ಲಿಇಂತಹ ಚಿತ್ರೀಕರಣಕ್ಕೆ ಕಟ್ಟುನಿಟ್ಟಿನ ನಿಯಂತ್ರಣ ಹೇರಬೇಕು ಹಾಗೂ ರಕ್ಷಕ ಶಿಕ್ಷಕ ಸಂಘಗಳು ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಮೋಗ್ರಾಲ್ ದೇಶೀಯ ವೇದಿ ಒತ್ತಾಯಿಸಿದೆ.
ರಾಜ್ಯದ ನಾನಾ ಕಾಲೇಜುಗಳಲ್ಲಿನಡೆದಿರುವ ಇಂತಹ ಘಟನೆಗಳಿಂದ ಪೋಷಕರಲ್ಲಿತೀವ್ರ ಆತಂಕ ಮೂಡಿದೆ. ಪೊಲೀಸರು ವಶಪಡಿಸಿಕೊಂಡ ವಿದ್ಯಾರ್ಥಿಗಳ ಮೊಬೈಲ್ ನಲ್ಲಿದ್ದ ಮಾಫ್ ರ್ ಮಾಡಿದ ಫೋಟೋಗಳು ಬೆಚ್ಚಿಬೀಳಿಸುವಂತಿವೆ. ಮಾನಸಿಕ ವೈಕಲ್ಯವೇ ಇಂತಹ ಕೃತ್ಯಗಳಿಗೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸುತ್ತಿದ್ದರೂ, ಮಾಫ್ ರ್ ಮಾಡಿದ ಚಿತ್ರಗಳನ್ನು ಆರ್ಥಿಕ ಲಾಭದ ಉದ್ದೇಶದಿಂದ ಕಾರ್ಯನಿರ್ವಹಿಸುವ ಜಾಲಗಳಿಗೆ ಕಳುಹಿಸುತ್ತಿರುವ ಶಂಕೆಯೂ ಇದೆ. ಇದು ಪೋಷಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಶಾಲೆಗಳಲ್ಲಿಸಾರ್ವಜನಿಕ ಕಾರ್ಯಕ್ರಮಗಳ ವೇಳೆ ರೀಲ್ಸ್ ಚಿತ್ರೀಕರಣದ ಮರೆಯಲ್ಲಿವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಫೋಟೋ-ವೀಡಿಯೋಗಳನ್ನು ಸಂಗ್ರಹಿಸಿ ನಂತರ ಮಾಫ್ ರ್ ಮಾಡಲಾಗುತ್ತಿದೆ. ಶಾಲೆಗೆ ಮೊಬೈಲ್ ತರುವುದಕ್ಕೆ ನಿಷೇಧವಿದ್ದರೂ ಈ ನಿಯಮಗಳು ಉಲ್ಲಂಘನೆಯಾಗುತ್ತಿವೆ. ಈ ದುರ್ಬಳಕೆಯನ್ನು ತಡೆಯಲು ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೇಶೀಯ ವೇದಿ ಆಗ್ರಹಿಸಿದೆ.