ಬೆಂಗಳೂರು ಗ್ರಾಮಾಂತರ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ 2026-27 ನೇ ಸಾಲಿಗೆ ಅಲ್ಪಸಂಖ್ಯಾತರ ವಿಧ್ಯಾರ್ಥಿಗಳಿಗೆ (ಕ್ರಿಶ್ಚಿಯನ್ ಸಮುದಾಯ ಹೊರತುಪಡಿಸಿ) ಅರಿವು ಸಾಲ ಮತ್ತು ವಿದೇಶಿ ವಿಧ್ಯಾಭ್ಯಾಸ ಸಾಲ ಯೋಜನೆಯಡಿ (ವಿದ್ಯಾಭ್ಯಾಸ ಸಾಲ) (ನವೀಕರಣ) ಸಾಲ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವೃತ್ತಿಪರ ಕೋರ್ಸ್ ಗಳಲ್ಲಿಪದವಿ ಮತ್ತು ಸ್ನಾತಕೋತ್ತರ, ಎಂಜಿನಿಯರಿಂಗ್ , ಟೆಕ್ನಾಲಜಿ ಹಾಗೂ ಇತರೆ ಕೋರ್ಸ್ ಗಳಲ್ಲಿಆಯ್ಕೆಯಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆ. 30 ಕೊನೆ ದಿನ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಪ್ರತಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಜಿಲ್ಲಾವ್ಯವಸ್ಥಾಪಕರ ಕಚೇರಿ, ನಂ 1599, ವೈ.ಎನ್ .ಬಿಲ್ಡಿಂಗ್ , ಹೊಸ ಬಸ್ ಸ್ಟಾಂಡ್ ಹಿಂಭಾಗ, ಯಲಹಂಕ ಬೀದಿ, ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಇಲ್ಲಿನ ನಿಗಮದ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ. 080-27681786ಗೆ ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾವ್ಯವಸ್ಥಾಪಕರು ಪ್ರಕಟಣೆಯಲ್ಲಿತಿಳಿಸಿದ್ದಾರೆ.