ಕೆರೆಗಳಿಗೆ ಹೇಮೆ ನೀರಿನ ಹರಿವು

Contributed byshekargraphics1@gmail.com|Vijaya Karnataka
hemavathi water flow mla responds to farmer protest
ವಿಕ ಸುದ್ದಿಲೋಕ ಚಿಕ್ಕನಾಯಕನಹಳ್ಳಿ

ತಾಲೂಕಿಗೆ ಈಗಾಗಲೇ ಹರಿಯುತ್ತಿರುವ ಹೇಮಾವತಿ ನೀರನ್ನು ಸಾಸಲು ಹಾಗೂ ದಬ್ಬೇಘಟ್ಟ ಭಾಗದ ಕೆರೆಗಳಿಗೆ ಹಂಚಿಕೆಯ ಪ್ರಮಾಣದಲ್ಲಿತುಂಬಿಸಲಾಗುವುದು ಎಂದು ಶಾಸಕ ಸಿ.ಬಿ. ಸುರೇಶ್ ಬಾಬು ಹೇಳಿದರು.
ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿಶೆಟಿಕೆರೆ ಸಾಸಲು, ಪೆಮ್ಮಲದೇವರಹಳ್ಳಿ, ಚಿಕ್ಕನಾಯಕನಹಳ್ಳಿ ಭಾಗದ ರೈತರು ತಮ್ಮ ಭಾಗಕ್ಕೆ ಸರಿಯಾಗಿ ನೀರು ಹರಿಯುತ್ತಿಲ್ಲಹಾಗೂ ಇನ್ನು ಬಾಕಿ ಇರುವಂತಹ ಕಾಮಗಾರಿಯನ್ನು ಮುಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಈಗಾಗಲೇ ಸಾಸಲು ಕೆರೆ ಹಾಗೂ ದಬ್ಬೇಘಟ್ಟ ಕೆರೆ ಕಡೆಗಳಿಗೆ ನೀರು ಹರಿಯುತ್ತಿದೆ. ರೈತರು ಸಹಕಾರ ನೀಡಬೇಕು. ನನಗೆ ಎಲ್ಲಾಭಾಗದ ರೈತರು ಒಂದೇ. ರೈತರೇ ಒಗ್ಗಟ್ಟಾಗಿ ತಮ್ಮ ಕೆರೆಗಳಿಗೆ ಹಂಚಿಕೆ ಮಾಡಿರುವಂತಹ ನೀರಿನ ಪ್ರಮಾಣವನ್ನು ಗಮನಿಸಿ. ಯಾರು ಸಹ ಚಾನಲ್ ಗೆ ಪೈಪ್ , ಮೋಟಾರ್ ಅಳವಡಿಸುವುದು ಸರಿಯಲ್ಲ. ಇಂತಹ ಕೆಲಸ ಮಾಡಬೇಡಿ ಎಂದರು.

ತಹಸೀಲ್ದಾರ್ ಮಮತಾ ಎಂ. ಮಾತನಾಡಿ, ನೀರು ಹರಿಯುವಾಗ ಸಮಸ್ಯೆಗಳು ಬರುತ್ತವೆ. ಆದ್ದರಿಂದ ಅಧಿಕಾರಿಗಳಾದ ನಾವು ಅಗತ್ಯ ಕ್ರಮಕೈಗೊಳ್ಳುತ್ತೇವೆ. ರೈತರು ಯಾವುದೇ ಕಾರಣಕ್ಕೂ ಚಾನಲ್ ಗೆ ಪೈಪ್ ಹಾಕುವುದು, ಮೋಟಾರ್ ಆಳವಡಿಸಿದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಹೇಮಾವತಿ ಎಂಜಿನಿಯರ್ ಪ್ರಭಾಕರ್ ಮಾತನಾಡಿ, ಈಗಾಗಲೇ ದಬ್ಬೇಘಟ್ಟ, ಕೊಡಲಾಗರ ಕೆರೆಗಳು ತುಂಬಿದ್ದು, ನವಿಲೆ ಭಾಗಕ್ಕೆ ನೀರು ಹರಿಯುತ್ತಿದೆ. ಅದೇ ರೀತಿ ನೀರು ಹಂಚಿಕೆ ಮಾಡಿರುವ ಪ್ರಮಾಣದಷ್ಟು ಸಾಸಲು ಕೆರೆ ಭಾಗಕ್ಕೂ ಹರಿಯುತ್ತದೆ. ವಾಲ್ ಗಳನ್ನು ಸರಿಯಾಗಿ ಲಾಕ್ ಮಾಡಿಸಿ, ಇಲಾಖೆಯ ಅಧಿಕಾರಿಗಳೇ ಅದನ್ನು ಗಮನಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿಶೆಟ್ಟಿಕೆರೆ ಅರುಣ್ ಭಟ್ , ಕೇಬಲ್ ರಾಜು, ಲಿಂಗರಾಜು, ಯೋಗೀಶ್ , ಸ್ವಾಮಿ, ಮಾರಸಂದ್ರ ದಿನೇಶ್ , ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ , ಪಟ್ಟಣದ ರೈತ ಸಂಘದ ಅಧ್ಯಕ್ಷ ಮೈಲಾರಯ್ಯ, ಅಜ್ಜೇನಹಳ್ಳಿ ಶರತ್ ಸೇರಿದಂತೆ ಕೃಷ್ಣಮೂರ್ತಿ, ಧರ್ಮಪಾಲ್ ಇತರರು ಇದ್ದರು.

ಪೋಟೊ 07 ಸಿ ಎನ್ ಹಳ್ಳಿ : ಪಟ್ಟಣದ ಆಡಳಿತ ಸೌಧದ ಮುಂಭಾಗದಲ್ಲಿನಡೆದ ರೈತರ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಶಾಸಕ ಸಿ.ಬಿ. ಸುರೇಶ್ ಬಾಬು ಮತ್ತು ಅಧಿಕಾರಿಗಳು ಮಾತನಾಡಿದರು.