ಶ್ರೀ ಆದಿನಾಥ ಮಲ್ಲಿಪರಸಪ್ಪ ಸೌಹಾರ್ದ ಸಹಕಾರ ಸಂಘವು ಪ್ರಸಕ್ತ ಆರ್ಥಿಕ ವರ್ಷದಲ್ಲಿ1.20 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಶೀತಲಕುಮಾರ ಸಿದ್ದಪ್ಪಾ ಖೇಮಲಾಪುರೆ ಹೇಳಿದರು.ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿನಡೆದ ಸಂಘದ 26ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘‘ಪ್ರಸ್ತುತ ಸಂಘವು 466 ಜನ ಸದಸ್ಯರು, 16.24 ಲಕ್ಷ ರೂ. ಶೇರು ಬಂಡವಾಳ, 26.71 ಕೋಟಿ ರೂ. ಠೇವಣಿ, 7.19 ಕೋಟಿ ರೂ. ನಿಧಿ, 34.07 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಸದಸ್ಯರ ಕೃಷಿ, ವ್ಯಾಪಾರ ಮತ್ತು ವೈಯಕ್ತಿಕ ಅಗತ್ಯಗಳಿಗಾಗಿ ಈವರೆಗೆ 22.90 ಕೋಟಿ ರೂ. ಸಾಲ ವಿತರಿಸಲಾಗಿದೆ,’’ ಎಂದರು.
ಉಪಾಧ್ಯಕ್ಷ ಮರೆಪ್ಪಾ ಮುನ್ನೋಳಿ, ನಿರ್ದೇಶಕ ಅಪ್ಪಾಸಾಹೇಬ ಖೇಮಲಾಪುರೆ, ಶ್ರೀಧರ ಖೇಮಲಾಪುರೆ, ಮಹಾವೀರ ಮುನ್ನೋಳಿ, ಶ್ರೀಕಾಂತ ಹಲಕರ್ಣಿ, ಧನ್ಯಕುಮಾರ ಮುನ್ನೋಳಿ, ಸಂದೀಪ ಮುನ್ನೋಳಿ, ಆದಿನಾಥ ನೇಗಿನಹಾಳ, ದುಂಡಪ್ಪಾ ಹಿಡಕಲ್ , ಭರತೇಶ ಹಲಕರ್ಣಿ, ಲಕ್ಷ್ಮೇ ಖೇಮಲಾಪುರೆ, ಸನ್ಮತಿ ತೇಜನ್ನವರ, ಸಲಹಾ ಸಮಿತಿ ಸದಸ್ಯರಾದ ದೇಶಪ್ಪತ್ರೆಪ್ಪಾ ಖೇಮಲಾಪುರೆ, ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
- 8 ಹುಕ್ಕೇರಿ 01
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ಶ್ರೀ ಆದಿನಾಥ ಮಲ್ಲಿಪರಸಪ್ಪ ಸೌಹಾರ್ದ ಸಹಕಾರಿ ಸಂಘ ವಾರ್ಷಿಕ ಸಭೆ ಜರುಗಿತು.