ಮೂಲ್ಕಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಸುತ್ತೋಲೆಯಂತೆ ರಾಜ್ಯ ವ್ಯಾಪ್ತಿಯೊಳಗಿನ ಕಡಲು ಅಥವಾ ಸಮುದ್ರ ಮತ್ತು ರಾಜ್ಯದ ನೀರಿನ ಇತರೆ ಮೂಲಗಳಾದ ನದಿ, ತೊರೆ, ಹಳ್ಳ, ಕೆರೆ, ಬಾವಿ ಇವುಗಳ ನೀರು ಮಾಲಿನ್ಯಗೊಳ್ಳದಂತೆ ಸಂರಕ್ಷಿಸುವ ಉದ್ದೇಶದಿಂದ ಜಲಮೂಲ ರಕ್ಷಿಸಲು ರಾಸಾಯನಿಕಯುಕ್ತ ಗಣೇಶನ ಮೂರ್ತಿ ಬಳಸದೆ ಮಣ್ಣಿನ ವಿಗ್ರಹವನ್ನು ಬಳಸಿ ಹಾಗೂ ನಿರ್ದಿಷ್ಟ ಸ್ಥಳಗಳಲ್ಲಿಯೇ ಮೂರ್ತಿ ವಿಸರ್ಜಿಸಿ ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ ಆಚರಿಸಲು ಮೂಲ್ಕಿ ನಗರ ಪಂಚಾಯಿತಿ ಮನವಿ ಮಾಡಿದೆ.
ಮೂರ್ತಿ ವಿಸರ್ಜಿಸುವಾಗ ಹೂವಿನ ಹಾರ, ಇತರ ಅಪಾಯಕಾರಿ ಸಾಮಗ್ರಿಗಳನ್ನು ತೆಗೆಯಬೇಕು. ಆರಾಧನೆ ವೇಳೆ ಬಳಸುವ ವಸ್ತುವನ್ನು ನೀರಿನ ಮೂಲಗಳಲ್ಲಿವಿಸರ್ಜಿಸುವಂತಿಲ್ಲ. ಧಾನ್ಯ, ಹೂವಿನ, ತರಕಾರಿ ಬೀಜ ಒಳಗೊಂಡ ಮೂರ್ತಿ ನಿರ್ಮಾಣಕ್ಕೆ ಆದ್ಯತೆ ನೀಡಿ ಪರಿಸರಸ್ನೇಹಿ ಗೌರಿ ಗಣೇಶ ಹಬ್ಬ ಆಚರಿಸಿ ನ.ಪಂ.ನೊಂದಿಗೆ ಸಹಕರಿಸುವಂತೆ ಮುಖ್ಯಾಧಿಕಾರಿ ಮಧುಕರ್ ಕೆ. ಪ್ರಕಟಣೆಯಲ್ಲಿತಿಳಿಸಿದ್ದಾರೆ.