ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಲ್ಲಿಪಠ್ಯದ ಜತೆಗೆ ಪೂರಕವಾದ ಹೊಸ ಹುರುಪು ಮೂಡಿಸಲು ಮತ್ತು ಭಾಷಾಭಿಮಾನವನ್ನು ಬೆಳೆಸಲು, ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ‘ ಗಮಕ ಶ್ರಾವಣ’ ಕಾರ್ಯಕ್ರಮ ಗುರುವಾರ ಮಧ್ಯಾಹ್ನ ಆಯೋಜಿಸಲಾಯಿತು. ಸಂಪೂರ್ಣವಾಗಿ ವಿದ್ಯಾರ್ಥಿಗಳಿಂದಲೇ ನಿರ್ವಹಿಸಲ್ಪಟ್ಟು ಗಮನ ಸೆಳೆಯಿತು. ಕರ್ನಾಟಕ ಗಮಕ ಕಲಾ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿಮತ್ತು ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸಹಯೋಗದೊಂದಿಗೆ ಈ ಸಾಂಸ್ಕೃತಿಕ ಹಬ್ಬ ನಡೆಯಿತು.ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಗಳ ಸಮೃದ್ಧಿಯನ್ನು ಹೊಸ ತಲೆಮಾರಿಗೆ ಪರಿಚಯಿಸಲು ಗಮಕ ಕಲಾ ಪರಿಷತ್ ನ ವಿಶಿಷ್ಟ ಕಾರ್ಯಯೋಜನೆ ಸ್ತುತ್ಯರ್ಹವಾದುದು. ಸೌಖ್ಯ ಸಮಾಜ ನಿರ್ಮಾಣದಲ್ಲಿಇಂತಹ ಕ್ರಿಯಾತ್ಮಕ ಕಾರ್ಯಕ್ರಮಗಳು ಪ್ರೇರಕವಾದುದು ಎಂದು ತಿಳಿಸಿದರು.
ಗಮಕ ಪರಿಷತ್ ನ ಕಾರ್ಯದರ್ಶಿ ವಿ.ಬಿ. ಕುಳಮರ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ಎಡನೀರು ಮಠದಲ್ಲಿಉದ್ಘಾಟನೆಗೊಂಡ ಈ ಸರಣಿ ಕಾರ್ಯಕ್ರಮದಲ್ಲಿವಿದ್ಯಾರ್ಥಿಗಳೇ ವಾಚನ ಮತ್ತು ವ್ಯಾಖ್ಯಾನವನ್ನು ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಗಮಕ ಪರಿಷತ್ ನ ಕೇರಳ ಘಟಕದ ಅಧ್ಯಕ್ಷ ತೆಕ್ಕೆಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಶಿವಪ್ರಕಾಶ್ ಎಂ.ಕೆ. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಶಾಲೆಯಲ್ಲಿವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗಳಿಗೆ ಬೆಂಬಲ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಲು ಸದಾ ಸನ್ನದ್ಧವಾಗಿದೆ. ದೊರಕುವ ಎಲ್ಲಅನುಕೂಲತೆಗಳನ್ನು ಬಳಸುವ ಸಾಮರ್ಥ್ಯ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ನಿಚೇತ್ತ ಪ್ರಿನ್ಸಿಪಾಲ ಪ್ರೊ.ಪಿ.ಎನ್ .ಮೂಡಿತ್ತಾಯ, ಶಿಕ್ಷಕಿಯರಾದ ಶೈಲಜಾ ಎ., ಡಾ. ವಿದ್ಯಾಲಕ್ಷಿತ್ರ್ಮ ಬೇಳ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಶರಧಿ, ವೈಷ್ಣವಿ ಪ್ರಾರ್ಥನೆ ಹಾಡಿದರು. ಸುಕೃತಾರಾಜ್ ಸಿ. ಸ್ವಾಗತಿಸಿದರು. ಪ್ರಣಮ್ಯ ಎಂ.ಜಿ. ವಂದಿಸಿದರು. ಶ್ರೇಯ ಕೆ.ಎಸ್ . ಕಾರ್ಯಕ್ರಮ ನಿರೂಪಿಸಿದಳು.
‘ಸೀತಾ ಪ್ರಲಾಪ-ಚೂಡಾಮಣಿ’ ಕಾವ್ಯ ಭಾಗವನ್ನು ಮಧುರಾ ಎಚ್ .ಕೆ. ಮತ್ತು ಶ್ರದ್ಧಾ ಎಂ.ಆರ್ . ವಾಚಿಸಿದರು. ಅನಘ ಡಿ. ಮತ್ತು ಪೃಥ್ವಿ ವ್ಯಾಖ್ಯಾನಿಸಿದರು.