ಕಾಸರಗೋಡು: ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಲ್ಲಿಪಠ್ಯಪೂರಕವಾಗಿ ಹೊಸ ಹುರುಪು ಮೂಡಿಸುವ ಮತ್ತು ಭಾಷಾಭಿಮಾನವನ್ನು ಬೆಳೆಸುವ ನಿಟ್ಟಿನಲ್ಲಿ ಜಿವಿಎಚ್ ಎಸ್ ಎಸ್ ಕಾರಡ್ಕ ಶಾಲೆಯಲ್ಲಿ ‘ಗಮಕ ಶ್ರಾವಣ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಸಂಪೂರ್ಣವಾಗಿ ವಿದ್ಯಾರ್ಥಿಗಳೇ ನಿರ್ವಹಿಸಿರುವುದು ಕಾರ ್ಯಕ್ರಮದ ವಿಶೇಷತೆಯಾಗಿತ್ತು.
ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಮತ್ತು ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸಹಯೋಗದೊಂದಿಗೆ ಈ ಸಾಂಸ್ಕೃತಿಕ ಹಬ್ಬ ಹೊಸ ರಂಗು ಪಡೆದುಕೊಂಡಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯ ಶಿಕ್ಷಕ ಸಂದೀಪ ಬಿ.ಎಸ್ . ಅವರು, ಗಮಕ ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆಯನ್ನು ಜನಸಾಮಾನ್ಯರ ಹತ್ತಿರಕ್ಕೆ ಕೊಂಡೊಯ್ಯಲು ಮತ್ತು ವಿದ್ಯಾರ್ಥಿಗಳಲ್ಲಿಭಾಷಾ ಪ್ರೇಮವನ್ನು ಜಾಗೃತಗೊಳಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಆದಿಗಮಕಿಗಳೆನಿಸಿರುವ ಕುಶಲ ಅವರು ಜನಿಸಿದ ಶ್ರಾವಣ ಮಾಸವನ್ನು ‘ಗಮಕ ಶ್ರಾವಣ’ ಎಂದು ಆಚರಿಸುವ ಸಂಪ್ರದಾಯದ ಬಗ್ಗೆ ಅವರು ಮಾಹಿತಿ ನೀಡಿದರು.
ಗಮಕ ಪರಿಷತ್ ನ ಕಾರ್ಯದರ್ಶಿ ವಿ.ಬಿ.ಕುಳಮರ್ವ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿ, ಈ ಸರಣಿ ಕಾರ್ಯಕ್ರಮದಲ್ಲಿವಿದ್ಯಾರ್ಥಿಗಳೇ ವಾಚನ ಮತ್ತು ವ್ಯಾಖ್ಯಾನವನ್ನು ನಡೆಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು. ನಿವೃತ್ತ ಶಿಕ್ಷಕ ಕೃಷ್ಟೋಜಿ ರಾವ್ ವಿದ್ಯಾರ್ಥಿಗಳಿಗೆ ಹಿತವಚನಗಳನ್ನು ನೀಡಿದರು.
ಗಮಕ ಪರಿಷತ್ ನ ಕೇರಳ ಘಟಕದ ಅಧ್ಯಕ್ಷ ತೆಕ್ಕೆಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕಿ ಜ್ಯೋತಿ ಪಾಣೂರು ಉಪಸ್ಥಿತರಿದ್ದರು. ಅನಘ ಸರಸ್ವತಿ ಪ್ರಾರ್ಥನೆಯನ್ನು ಹಾಡಿದರು. ವೈಷ್ಣವಿ ವಿ. ಸ್ವಾಗತಿಸಿದರು. ಯುಕ್ತಿ ವಂದಿಸಿದರು. ಗ್ರೀಷ್ಮ ಕೆ. ಎಸ್ . ಕಾರ ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಡಾ.ಶ್ರೀಶ ಪಂಜಿತ್ತಡ್ಕ, ರತೀಶ ಡಿ., ನಯನ ಕುಮಾರಿ ಮತ್ತು ವರ್ಷ ಅವರು ಅಭಿಪ್ರಾಯಗಳನ್ನು ಹಂಚಿಕೊಂಡರು. ‘ಸೀತಾ ಪರಿತ್ಯಾಗ’ ಎಂಬ ಕಾವ್ಯ ಭಾಗವನ್ನು ದೇವಿಕಾ ಕೆ.ಆರ್ .ಭಾವಪೂರ್ಣವಾಗಿ ವಾಚಿಸಿದರು. ಕೀರ್ತೇಶ್ ವ್ಯಾಖ್ಯಾನಿಸಿದರು. ಈ ‘ಗಮಕ ಶ್ರಾವಣ’ ಕಾರ್ಯಕ್ರಮವು ಕಾರಡ್ಕ ಶಾಲೆಯ ವಿದ್ಯಾರ್ಥಿಗಳಲ್ಲಿಭಾಷಾಭಿಮಾನ, ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಯಿತು.
.....
ಚಿತ್ರ: 03 ಬಿಎ ಕಾರಡ್ಕ
ಕಾರಡ್ಕ ಶಾಲೆಯಲ್ಲಿ ಗಮಕ ಶ್ರಾವಣ’ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.