ಕೋಥಳಿ- ಕುಪ್ಪಾನವಾಡಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ40.05 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.12 ರಷ್ಟು ಲಾಭಾಂಶ ಹಂಚಿಕೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಸುನಿಲ ವಂಟಗೂಡೆ ತಿಳಿಸಿದರು.ಅವರು, ಸಂಘದ 49 ನೇ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ‘‘ರೈತರ ಆರ್ಥಿಕ ಪ್ರಗತಿಯೇ ಸಂಸ್ಥೆಯ ಮುಖ್ಯ ಉದ್ದೇಶ,’’ ಎಂದರು.
ಶಾಸಕ ಹಾಗೂ ಬಿಡಿಡಿಸಿ ಬ್ಯಾಂಕ್ ನಿರ್ದೇಶಕ ಗಣೇಶ ಹುಕ್ಕೇರಿ ಅವರು ಸಂಘಕ್ಕೆ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಕೋಥಳಿ ಶಾಖೆಯ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು. ತಾವು ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಸಂಘದ ಬೆಳವಣಿಗೆಗೆ ಸದಾ ಸಿದ್ಧ ಎಂದರು.
ಮುಖ್ಯ ಕಾರ್ಯನಿರ್ವಾಹಕ ಪ್ರಕಾಶ ಹುಜ್ಜಕ್ಕೆ ವಾರ್ಷಿಕ ವರದಿ ಮಂಡಿಸಿ, ‘‘ಸಂಘವು 151.50 ಲಕ್ಷ ರೂ. ಶೇರು ಬಂಡವಾಳ, 216.73 ಲಕ್ಷ ರೂ. ನಿಧಿ, 14.56 ಕೋಟಿ ರೂ. ಠೇವಣಿ ಹೊಂದಿದೆ. ಪ್ರಸಕ್ತ ವರ್ಷದಲ್ಲಿ22.20 ಕೋಟಿ ರೂ. ಬೆಳೆ ಹಾಗೂ ಇತರೆ ಸಾಲ ವಿತರಿಸಲಾಗಿದೆ,’’ ಎಂದರು.
ಸಹಕಾರಿಯ ಉಪಾಧ್ಯಕ್ಷ ಶಂಕರಗೌಡಾ ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ಬಾಹುಬಲಿ ದೊಡ್ಡಣ್ಣವರ, ಬಾಹುಬಲಿ ಉಪಾಧ್ಯೆ, ರಾಜೇಂದ್ರ ಪಾಟೀಲ, ಉಜ್ಜಲಾ ಆಳಗೌಡಾ, ರೇಖಾ ಮುದ್ದಾಪಗೋಳ, ಮಹಾದೇವ ಖೋತ್ , ಪೀರು ಕಾಂಬಳೆ, ಸುನೀಲ ಸನದಿ, ಜಯಶ್ರೀ ಬಾಬಗೌಡಾ, ಜಿನದತ್ತ ವಂದೂರೆ ಹಾಗೂ ಸಿಬ್ಬಂದಿ ಇದ್ದರು. ವಿಜಯ ಗುರವ ನಿರೂಪಿಸಿದರು. ಶ್ರೀಧರ ಗಜನ್ನವರ ವಂದಿಸಿದರು.
- 8ಸಿಕೆಡಿ 3
ಕೋಥಳಿ- ಕುಪ್ಪಾನವಾಡಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಮಹಾಸಭೆಗೆ ಗಣ್ಯರು ಚಾಲನೆ ನೀಡಿದರು.