ಮಾಜಿ ಶಾಸಕ ಬಿ.ಸ್ವಾಮಿರಾವ್ ರಿಂದ ಉಪವಾಸ ಸತ್ಯಾಗ್ರಹ

Contributed bynews.raviraja18@gmail.com|Vijaya Karnataka

ಹೊಸನಗರ ತಾಲೂಕು ಆರ‍್ಯ ಈಡಿಗ ಸಂಘದ ಪದಾ ಧಿಕಾರಿಗಳ ರಾಜೀನಾಮೆಗೆ ಆಗ್ರಹಿಸಿ ಮಾಜಿ ಶಾಸಕ ಬಿ.ಸ್ವಾಮಿರಾವ್‌ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಸಂಘದಲ್ಲಿ ಭ್ರಷ್ಟಾಚಾರ ನಡೆದಿದೆ, ಆಡಳಿತ ಸಮಿತಿ ಬದಲಾಗಿಲ್ಲ, ವಾರ್ಷಿಕ ಸಭೆಗಳೂ ನಡೆದಿಲ್ಲ ಎಂದು ಆರೋಪಿಸಿದ್ದಾರೆ. ತಮ್ಮ ಹೋರಾಟಕ್ಕೆ ಜಯ ಸಿಗುವ ವರೆಗೂ ಉಪವಾಸ ಮುಂದುವರಿಸುವುದಾಗಿ ತಿಳಿಸಿದ್ದಾರೆ. ದೀವರ ಹಿತರಕ್ಷಣಾ ವೇದಿಕೆ ಹಾಗೂ ಯುವ ವೇದಿಕೆ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ.

b swamiravs hunger strike demanding resignation from arya ediga association

ವಿಕ ಸುದ್ದಿಲೋಕ ಹೊಸನಗರ ತಾಲೂಕು ಆರ ್ಯ ಈಡಿಗ ಸಂಘದ ಪದಾ ಧಿಕಾರಿಗಳ ರಾಜೀನಾಮೆಗೆ ಆಗ್ರಹಿಸಿ ಮಾಜಿ ಶಾಸಕ, ಈಡಿಗ ಸಮುದಾಯದ ಹಿರಿಯ ಮುತ್ಸದ್ಧಿ, 95 ವರ್ಷದ ಬಿ.ಸ್ವಾಮಿರಾವ್ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇಲ್ಲಿನ ಆರ ್ಯ ಈಡಿಗ ಸಂಘದ ಕಚೇರಿ ಸಮೀಪ ಅವರು ತಮ್ಮ ಬೆಂಬಲಿಗರ ಜತೆ ಬುಧವಾರ ಧರಣಿ ಆರಂಭಿಸಿದ್ದು, ತಮ್ಮ ಹೋರಾಟಕ್ಕೆ ಜಯ ಸಿಗುವ ವರೆಗೂ ಉಪವಾಸ ಸತ್ಯಾಗ್ರಹ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಸತ್ಯಾಗ್ರಹ ಆರಂಭಿಸುವ ಮುನ್ನ ಅವರು ಮಾತನಾಡಿ, ತಾಲೂಕು ಆರ ್ಯ ಈಡಿಗ ಸಂಘದಲ್ಲಿವ್ಯಾಪಕ ಭ್ರಷ್ಟಾಚಾರ ನಡೆದಿದೆ. ಕಳೆದ 15 ವರ್ಷಗಳಿಂದ ಸಂಘದ ಆಡಳಿತ ಸಮಿತಿ ಬದಲಾಗಿಲ್ಲ. ವಾರ್ಷಿಕ ಸಭೆಗಳನ್ನು ನಡೆಸಿಲ್ಲ. ಹಣಕಾಸು ಲೆಕ್ಕಾಚಾರಗಳನ್ನು ಪಾರದರ್ಶಕವಾಗಿ ಇಟ್ಟಿಲ್ಲಎಂದು ಆರೋಪಿಸಿದರು. ಕಳೆದ ವಾರ ಸಂಘದ ಕಟ್ಟಡದ ಉದ್ಘಾಟನಾ ಸಮಾರಂಭದಂದೇ ನಾನು ಪ್ರತಿಭಟನೆ ನಡೆಸಲು ಮುಂದಾಗಿದ್ದೆ. ಆದರೆ, ಈಡಿಗ ಸಮುದಾಯದ ಹಿರಿಯರು ತಮ್ಮನ್ನು ತಡೆದರು. ಸಮಾರಂಭದ ಬಳಿಕ ಎಲ್ಲಪದಾಧಿಕಾರಿಗಳೂ ಸಾಮೂಹಿಕ ರಾಜೀನಾಮೆ ಸಲ್ಲಿಸಲಿದ್ದಾರೆ. ಉಪವಾಸ ಸತ್ಯಾಗ್ರಹ ನಡೆಸಬೇಡಿ ಎಂದು ಮನವಿ ಮಾಡಿದ್ದರು. ಆದರೆ ಈಗ ಎಲ್ಲವೂ ಸುಳ್ಳಾಗಿದೆ ಎಂದರು. ದೀವರ ಹಿತರಕ್ಷಣಾ ವೇದಿಕೆ ಹಾಗೂ ಯುವ ವೇದಿಕೆ ಸದಸ್ಯರು ಮಾಜಿ ಶಾಸಕರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಸ್ಥಳದಲ್ಲಿಹಾಜರಿದ್ದರು. ಪ್ರಮುಖರಾದ ಸೊನಲೆ ಶ್ರೀನಿವಾಸ್ , ಸುರೇಶ್ ಸ್ವಾಮಿರಾವ್ , ನೇರಲೆ ಸ್ವಾಮಿ, ನಗರ ನಿತಿನ್ , ನೇರಲೆ ರಮೇಶ್ , ತಿಮ್ಮಪ್ಪ , ಮಹಾಬಲರಾವ್ , ಕುಮಾರ ಮಂಡಾನಿ, ಶ್ರೀಧರ ಹಾರೇಗೊಪ್ಪ, ವಾಸಪ್ಪ ಮಾಸ್ತಿಕಟ್ಟೆ ಮತ್ತಿತರರು ಹಾಜರಿದ್ದರು.