ಚೂರುಗಳು

Contributed bysantoshettyp@gmail.com|Vijaya Karnataka

ಲಿಂಗದಹಳ್ಳಿ ಗ್ರಾಮದ ರಂಭಾಪುರಿ ಶಾಖಾ ಸಂಸ್ಥಾನ ಹಿರೇಮಠದಲ್ಲಿ ಡಾ. ವೀರಭದ್ರ ಶಿವಾಚಾರ್ಯರ ಜನ್ಮ ಷಷ್ಟ್ಯಬ್ದಿ ಮಹೋತ್ಸವ ನಡೆಯಲಿದೆ. ಮಾ. 26 ಮತ್ತು 27 ರಂದು ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವ ಜರುಗಲಿದೆ. ಗುರು ಜಂಗಮರ ಮಂಟಪ ಪೂಜೆ ಹಾಗೂ ಧರ್ಮಸಭೆ ಕೂಡ ಏರ್ಪಡಿಸಲಾಗಿದೆ. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

shrimathas adde pallakki mahotsav organizing dharma sabha and pooja

ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ 26ಕ್ಕೆ

ವಿಕ ಸುದ್ದಿಲೋಕ ರಾಣೇಬೆನ್ನೂರ

ತಾಲೂಕಿನ ಲಿಂಗದಹಳ್ಳಿ ಗ್ರಾಮದ ರಂಭಾಪುರಿ ಶಾಖಾ ಸಂಸ್ಥಾನ ಹಿರೇಮಠದ ಡಾ. ವೀರಭದ್ರ ಶಿವಾಚಾರ್ಯರ ಜನ್ಮ ಷಷ್ಟ್ಯಬ್ದಿ ಪ್ರಯುಕ್ತ ಶ್ರೀಮಠದಲ್ಲಿಮಾ.26 ಹಾಗೂ 27ರಂದು ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವ , 105 ಗುರು ಪರಂಪರೆಯ ಶಿವಾಚಾರ್ಯರ ಮತ್ತು ವಿರಕ್ತ ಪರಂಪರೆಯ ನಿರಂಜನಮೂರ್ತಿಗಳ ಗುರು ಜಂಗಮರ ಮಂಟಪ ಪೂಜಾ ಹಾಗೂ ಧರ್ಮಸಭೆ ಏರ್ಪಡಿಸಲಾಗಿದೆ.

ಮಾ.26ರ ಬೆಳಗ್ಗೆ 8ಕ್ಕೆ ಪಂಚಾಚಾರ್ಯ ಧ್ವಜಾರೋಹಣ ನೆರವೇರಿಸಲಾಗುವುದು. ಮಧ್ಯಾಹ್ನ 3ಕ್ಕೆ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು, ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಕೇದಾರ ಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಪೀಠದ ಜಗದ್ಗುರು ಡಾ. ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿಸಂಚರಿಸಿ ಸಂಜೆ 7ಕ್ಕೆ ಶ್ರೀಮಠದಲ್ಲಿಧರ್ಮಸಭೆ ಜರುಗಲಿದೆ.

ಕನಕಾಭಿಷೇಕ :

ಮಾ.27ರ ಬೆಳಗ್ಗೆ 5.30ಕ್ಕೆ ಜಗದ್ಗುರು ಪಂಚಪೀಠಾಧೀಶ್ವರರ ಸಾನ್ನಿಧ್ಯದಲ್ಲಿಷಷ್ಟ್ಯಬ್ದಿ ನಿಮಿತ್ತ ವೀರಭದ್ರ ಶಿವಾಚಾರ್ಯರಿಗೆ ಕನಕಾಭಿಷೇಕ, ಮಂಗಲ ಸ್ನಾನ ಕಾರ್ಯಕ್ರಮ ಜರುಗುವುದು. ಬೆಳಗ್ಗೆ 10.30ಕ್ಕೆ 108 ಶಿವಾಚಾರ್ಯ ಮಠಾಧೀಶ್ವರ ಸ್ವಾಮಿಗಳ ಮತ್ತು ವಿರಕ್ತ ಮಠಾಧೀಶ್ವರ ಸ್ವಾಮಿಗಳ 108 ಮಂಟಪ ಪೂಜೆ ಹಾಗೂ 11.30 ಕ್ಕೆ ಧರ್ಮಸಭೆ ಜರುಗುವುದು.

ಕುಣಿಗಲ್ ತಾಲೂಕು ಯಡಿಯೂರಿನ ರೇಣುಕ ಶಿವಾಚಾರ್ಯರು, ವಿಜಯಪುರ ಸಿಂದಗಿ ಸಾರಂಗಧರ ಗಚ್ಚಿನಮಠ ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಬೆಳಗಾವಿ ಜಿಲ್ಲೆಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಉಪಾಧ್ಯಕ್ಷ ಡಾ.ಚಂದ್ರಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು.

ಶಾಸಕ ಪ್ರಕಾಶ ಕೋಳಿವಾಡ ಕಾರ್ಯಾಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.