ವಿಕ ಸುದ್ದಿಲೋಕ ಪುತ್ತೂರು
ಅನಾರೋಗ್ಯದಿಂದ ಬಳಲುತ್ತಿರುವ ಇಬ್ಬರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಟ್ಟು 5 ಲಕ್ಷ ರೂ. ನೆರವು ಬಿಡುಗಡೆಯಾಗಿದೆ.
ಶಾಸಕ ಅಶೋಕ್ ರೈ ಶಿಫಾರಸ್ಸಿನಂತೆ ಪೆರುವಾಯಿ ಗ್ರಾಮದ ಕೆಳಗಿನ ಮನೆ ನಿವಾಸಿ ವಾರಿಜಾ ಅವರಿಗೆ 2 ಲಕ್ಷ ರೂ. ಹಾಗೂ ಸರ್ವೆ ಗ್ರಾಮದ ಮಹಮ್ಮದ್ ಅವರಿಗೆ 3 ಲಕ್ಷ ರೂ ಪರಿಹಾರ ಧನ ಮಂಜೂರಾಗಿದೆ. ಪರಿಹಾರ ಮೊತ್ತ ಫಲಾನುಭವಿಗಳ ಖಾತೆಗೆ ನೇರ ಜಮಾವಣೆಯಾಗಲಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.
ಬೆಂಕಿ ಆಕಸ್ಮಿಕ ಪರಿಹಾರ : ಬೆಂಕಿ ಅಕಸ್ಮಿಕದಿಂದ ಅಂಗಡಿ ನಾಶವಾದ ಪ್ರಕರಣದಲ್ಲಿಅಂಗಡಿ ಮಾಲೀಕರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂ. ಪರಿಹಾರ ಮಂಜೂರಾಗಿದೆ. ವಿಟ್ಲಹೊರವಲಯದ ಕುಡ್ತಮುಗೇರು ಕೊಳ್ನಾಡು ಸಂತೋಷ್ ಅವರ ಎಲೆಕ್ಟ್ರಿಕಲ್ ಅಂಗಡಿ ಬೆಂಕಿ ಅವಘಡದಿಂದ ಸುಟ್ಟು ಹೋಗಿ ಸುಮಾರು 80 ಲಕ್ಷ ರೂ. ನಷ್ಟ ಸಂಭವಿಸಿತ್ತು. ಪರಿಹಾರಕ್ಕಾಗಿ ಶಾಸಕ ಅಶೋಕ್ ರೈ ಅವರಿಗೆ ಮನವಿ ಮಾಡಿದ್ದರು. ಶಾಸಕರ ಶಿಫಾರಸ್ಸಿನಂತೆ 5 ಲಕ್ಷ ಪರಿಹಾರ ಮಂಜೂರಾಗಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.

