ಕನ್ನಡಿಗ ಅಧಿಕಾರಿಗಳಿಂದಲೇ ಭಾಷೆ ಬಗ್ಗೆ ಅನಾದಾರ

Contributed bykugweprakash@gmail.com|Vijaya Karnataka

ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಕನ್ನಡಿಗ ಅಧಿಕಾರಿಗಳು ಕನ್ನಡ ಮಾತನಾಡಲು ಹಿಂದೇಟು ಹಾಕುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಹೊರ ರಾಜ್ಯದ ಅಧಿಕಾರಿಗಳು ಕನ್ನಡ ಕಲಿಯುತ್ತಾರೆ. ಸರಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ಕಾರ್ಯಾಂಗ ಮತ್ತು ಶಾಸಕಾಂಗ ಒಟ್ಟಾಗಿ ಕೆಲಸ ಮಾಡಬೇಕು. ನೌಕರರ ಸಹಕಾರ ಜನಪ್ರತಿನಿಧಿಗಳಿಗೆ ಅಗತ್ಯ. ಸರಕಾರಿ ನೌಕರರ ಕನ್ನಡಾಭಿಮಾನ ಸ್ಮರಣೀಯವಾಗಿದೆ.

disparity in language by kannada officials legislators tweets

ವಿಕ ಸುದ್ದಿಲೋಕ ಸಾಗರ ಹೊರ ರಾಜ್ಯಗಳಿಂದ ಬ ರುವ ಐಎಎಸ್ , ಐಪಿಎಸ್ ಅಧಿಕಾರಿಗಳು ಕನ್ನಡ ಭಾಷೆ ಕಲಿತು ಚೆನ್ನಾಗಿ ಮಾತನಾಡುತ್ತಾರೆ. ಕನ್ನಡಿಗ ಅಧಿಕಾರಿಗಳೇ ಕನ್ನಡ ಮಾತನಾಡಲು ಅನಾದಾರ ತೋರುವುದು ವಿಷಾದನೀಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಬೇಸರ ವ್ಯಕ್ತಪಡಿಸಿದರು. ಇಲ್ಲಿನ ನೌಕರ ಭವನದಲ್ಲಿತಾಲೂಕು ಸರಕಾರಿ ನೌಕರರ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ, ನೌಕರರ ಸಮಾವೇಶ, ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಾಂಗ ಮತ್ತು ಶಾಸಕಾಂಗ ಒಟ್ಟಾಗಿ ನಡೆದರೆ ಸರಕಾರದ ಯೋಜನೆಗಳನ್ನು ತಳಮಟ್ಟದಲ್ಲಿಜನರಿಗೆ ತಲುಪಿಸಲು ಸಾಧ್ಯ. ಜನಪ್ರತಿನಿಧಿಗಳು ಜನರಿಗೆ ಉತ್ತಮ ಸೇವೆ ಸಲ್ಲಿಸಬೇಕಾದರೆ ನೌಕರರ ಸಹಕಾರ ಅಗತ್ಯ ಎಂದರು. ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ .ಷಡಾಕ್ಷರಿ ಮಾತನಾಡಿ, ಸರಕಾರಿ ನೌಕರರು ಒತ್ತಡದ ನಡುವೆಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೆಲ ವೊಮ್ಮೆ ಭಾಷೆ ಬಳಸಲು ಹಿಂದೆಮುಂದೆ ಆಗ ಬಹುದು. ಆದರೆ, ಸರಕಾರಿ ನೌಕರರ ಕನ್ನಡಾಭಿಮಾನ ಸದಾ ಸ್ಮರಣೀಯವಾದದ್ದು ಎಂದರು. ಸಾಗರದಲ್ಲಿನೌಕರರ ಸಂಘಟನೆ ಇನ್ನಷ್ಟು ಗಟ್ಟಿಗೊಳ್ಳಬೇಕು. ಎನ್ ಪಿಎಸ್ ಜಾರಿ, ಕೇಂದ್ರ ಮಾದರಿ ವೇತನ ಇನ್ನಿತರೆ ಬಗ್ಗೆ ಸಂಘವು ಹೋರಾಟ ರೂಪಿಸುತ್ತಿದೆ. ರಾಜ್ಯ ಸರಕಾರಕ್ಕೆ ಒತ್ತಡ ತಂದು ಋುತುಚಕ್ರ ರಜೆಯನ್ನು ಕೊಡಿಸಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಅಧ್ಯಕ್ಷ ಎನ್ .ಸಂತೋಷ ಕುಮಾರ್ , ಎನ್ ಪಿಎಸ್ ರದ್ದುಪಡಿಸಿ ಒಪಿಎಸ್ ಜಾರಿಗೆ ಶಾಸಕರು ಸರಕಾರದ ಮೇಲೆ ಒತ್ತಡ ಹೇರಬೇಕು ಎಂದರು. ಇದೇ ಸಂದರ್ಭ ಸಂಘದ ನಿಕಟಪೂರ್ವ ಅಧ್ಯಕ್ಷ ಜಿ.ಪರಮೇಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು. ‘ಸಾರ್ವಜನಿಕ ಸೇವೆಯಲ್ಲಿನೌಕರರ ಪಾತ್ರ’ ಕುರಿತು ದಾವಣಗೆರೆಯ ಡಾ.ಬಿ.ಸಿ.ದಾದಾಪೀರ್ ನವಿಲೇಹಾಳ್ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಆರ್ .ಮೋಹನ್ ಕುಮಾರ್ , ಸಂಘಟನೆ ಪ್ರಮುಖರಾದ ಎಸ್ .ಬಸವರಾಜ್ , ಮಧುಕೇಶವ ಮತ್ತಿತರರು ಉಪಸ್ಥಿತರಿದ್ದರು. ನೇತ್ರಾವತಿ ಮತ್ತು ಸಂಗಡಿಗರು ಪ್ರಾರ್ಥಿಸಿ, ಡಿ.ಕೆ.ಅಣ್ಣಪ್ಪ ಸ್ವಾಗತಿಸಿದರು. ಸುರೇಶ್ ಜಂಬಾನಿ ನಿರೂಪಿಸಿದರು.